400 ದಿನಗಳಲ್ಲಿ 450 ಬಗೆಯ ಶಿರ್ಷಾಸನ ಮೂಲಕ ವಿಶಿಷ್ಟ ಸಾಧನೆ. ಮೈಸೂರಿನ ಬದರೀನಾರಾಯಣ ಅವರ ಯಶೋಗಾಥೆ

Achievement of 650 variants Shirshasana in 400 days by Badrinarayana of Mysore…| Vijaya sadakaru

ಇವರು ಮೈಸೂರಿನ  ಬದರಿನಾರಾಯಣ್. ಹಲವಾರು ವಿಶಿಷ್ಟತೆಗಳನ್ನು ಹೊಂದಿದ ವಿಶೇಷ ವ್ಯಕ್ತಿತ್ವ ಇವರದು. ಇವರ ತಂದೆ ಕೆ ಆರ್ ಶ್ರೀನವಾಸ್ ರಾಷ್ಟ್ರೀಯ ದೇಹದಾರ್ಡ್ಯ ಪಟುವಾಗಿ ಹೆಸರು ಮಾಡಿದವರು.

ಬದರಿನಾರಾಯಣ ಅವರು ವೃತ್ತಿಯಲ್ಲಿ  ಸಾಫ್ಟ್‌ವೇರ್‌ ಇಂಜಿನಿಯರ್. ಆದ್ರೆ ಯೋಗ ಇವರ ಪ್ರವೃತ್ತಿ. ಇವರ ಸ್ಪೆಷಲೈಸೇಷನ್ ಶರ‍್ಷಾಸನ.

ಇವರು ಸುಮಾರು ೪೦೦ ದಿವಸಗಳಲ್ಲಿ ಸುಮಾರು ೬೫೦ ಶೀರ್ಷಾಸನಗಳನ್ನು ಹಾಕುತ್ತಾರೆ. ಸುಮಾರು ೧೫ ವರ್ಷಗಳ ಹಿಂದೆ ಇವರು ಮೈಸೂರಿನ ಯೋಗಾಬ್ಯಾಸ ಪ್ರತಿಷ್ಟಾನದ ರಾಘವೇಂದ್ರ ಆರ್ ಪೈ ಅವರ ಮುಂದೆ ಶೀರ್ಷಾಸನ ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಬಳಿಕ ಅಲ್ಲಿಂದ ಇವರಿಗೆ ಯೋಗಾಸನದಲ್ಲಿ ಹೆಚ್ಚಿನ ಆಸಕ್ತಿ ಮೂಡಿತು ಎಂದು ಹೇಳುತ್ತಾರೆ.

ಓಮನ್‌ನ ಟೊಯೋಟೋ ಮೋಟರ‍್ಸ್  ಮಲೇಷ್ಯಾದ ಎವಿಯೇಷನ್ ಕಂಪೆನಿ ಹಾಗೂ ವಿಶ್ವದ ನಂಬರ್ ಒನ್ ಪ್ರಾಪರ್ಟಿ ಕಂಪೆನಿ ಮುಂತಾದ ಹಲವಾರು ಗ್ಲೋಬಲ್ ಕಂಪೆನಿಗಳಲ್ಲಿ  ಹಲವು ವರ್ಷಗಳು ದುಡಿದವರು. ಆದ್ರೆ ಆ ಬಳಿಕ ಇವರನ್ನು ಸೆಳೆದಿದ್ದು ಯೋಗಾಸನ. ಇದರಲ್ಲೇ ಉನ್ನತ ಸಾಧನೆ ಮೆರೆದು ಅತ್ಯಧಿಕ ಬಾರಿ ಶರ‍್ಷಾಸನ ಪ್ರದರ್ಶಿಸಿ ಇಂಡಿಯಾದ ಬುಕ್ ಆಫ್ ರೆಕಾರ್ಡಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಬದರೀ ನಾರಾಯಣ ಅವರು ೨೦೧೫ರಲ್ಲಿ ಜನವರಿಯಿಂದ ಡಿಸೆಂಬರ್ ೩೧ರ ಒಳಗೆ ಯುನೆಸ್ಕೋ ವಿಶ್ವ ಪಾರಂಪರಿಕೆ ಹಾಗೂ ಇನ್ನಿತರ ಕಡೆಗಳಲ್ಲಿ ಅತೀ ಹೆಚ್ಚು ಶೀರ್ಷಾಸನಗಳನ್ನು ಪ್ರದರ್ಶಿಸಿದ್ದಾರೆ. ಇವರು ಸುಮಾರು ೧೫೧ ಕಡೆಗಳಲ್ಲಿ ತಮ್ಮ ಯೋಗ ಪ್ರದರ್ಶನಗಳನ್ನು ನೀಡಿದ್ದಾರೆ.

ಇವರು ಯುನೈಟೆಡ್ ಕಿಂಗ್ಡಮ್ ರೆಕಾರ್ಡ ಹೋಲ್ಡರ್ ರಿಪಬ್ಲಿಕನ್ ಲಿಮ್ಕಾ ಬುಕ್ ಆಫ್ ರೆಕರ‍್ಡ್÷್ಸ ಪದುಚೇರಿಯ ಆಸಿಸ್ಟ್ ಬುಕ್ ಆಫ್ ವರ್ಲ್ಡ್ಸ್‌  ರೆಕಾರ್ಡ್ಸ್ ಫೇಸ್ಬುಕ್, ಪಂಜಾಬ್‌ನ ಯೂನಿಕ್ ವಲ್ಡ್÷್ರ್ಸ ರೆಕಾರ್ಡ್ಸ್ನಲ್ಲಿ ಬದರಿನಾರಾಯಣ್ ಹೆಸರು ದಾಖಲಾಗಿದೆ.

ಬದರೀ ನಾರಾಯಣ ಅವರು ವರ್ಷದಲ್ಲಿ ಸುಮಾರು ಒಂದು ಸಾವಿರ ಶಿರ್ಷಾಸನಗಳ ಪ್ರರ‍್ಶನ ನೀಡಿದ್ದಾರೆ. ಇನ್ನೊಂದು ವಿಶೇಷವೆಂದರೆ ಇವರು ಬೇಸಿಗೆಯ ಉರಿಬಿಸಿಲಿನಲ್ಲಿ ಸುಮಾರು ೨೭ ನಿಮಿಷಗಳ ಕಾಲ ಕಣ್ಣು ಮಿಟುಕಿಸದೆ ಸೂರ್ಯನನ್ನು ದಿಟ್ಟಿಸಿ ನೋಡುತ್ತಾರೆ. ಈ ಸನ್‌ಗೇಜಿಂಗ್‌ನಲ್ಲಿ ದಾಖಲು ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ.

ಪುರಾತನ ಇತಿಹಾಸವಿರುವ ನಮ್ಮ ಯೋಗವನ್ನು ಎಲ್ಲೆಡೆ ಪ್ರಚಾರ ಮಾಡುವುದು ನನ್ನ ಉದ್ದೇಶ ಎಂದು ಹೇಳುತ್ತಾರೆ. ಇವರ ಶೀರ್ಷಾಸನ ಪ್ರರ‍್ಶನ ನೋಡಿದ ಜನರು ಕುತೂಹಲಭರಿತರಾಗಿ ಇವರನ್ನು ಪ್ರಶ್ನಿಸುತ್ತಾರೆ. ಆಗ ಇವರು  ಉತ್ತರವಾಗಿ ಇವರು ಯೋಗದ ಮಹತ್ವಗಳನ್ನು ಜನರಿಗೆ ಬೋಧಿಸುತ್ತಾರೆ.

ಗ್ರಾಮೀಣ ಪ್ರದೇಶಗಳ ಹೊರತಾಗಿಯೂ ಇವರು ಪರಿಸರ ಸಂಬAಧಿತ ಜಾಗ್ರತಿ ಕರ‍್ಯಕ್ರಮಗಳನ್ನು ಕೈಗೊಂಡು ತಮ್ಮ ಯೋಗ ಪ್ರದರ್ಶನ ನೀಡಿ ಜನಮನ್ನಣೆ ಪಡೆದುಕೊಂಡಿದ್ದಾರೆ.

 ಅಷ್ಟೇ ಅಲ್ಲ ಕೆಲ ಶಾಲಾ ಮಕ್ಕಳಿಗೂ ಯೋಗ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನೀಡಿ ಜಾಗೃತಿ ನೀಡುವ ಕೆಲಸವನ್ನೂ ಇವರು ಮಾಡುತ್ತಾರೆ. ಚಾಮುಂಡಿ ಬೆಟ್ಟಗಳಲ್ಲಿ ಪಿ ಇ ಟಿ ಪಾಲಿಥಿಲೀನ್ ತ್ರಿಪಥಲೇಟ್ ಬಾಟಲಿಗಳನ್ನು ಹೆಕ್ಕಿ ವೇಷ್ಟ್ ಸೆಗ್ರಿಗೇಷನ್ ಏರಿಯಾಕ್ಕೆ, ವೇಷ್ಟ್ ಆಯುವವರಿಗೆ  ಕೊಟ್ಟು ಪರಿಸರವನ್ನು ಸ್ವಚ್ಛಗೊಳಿಸುವ ಕರ‍್ಯವನ್ನು ಮಾಡುತ್ತಾರೆ.ಈ ಬಗ್ಗೆ ಇತರರಿಗೆ ಕೂಡಾ ಸಮಾಜ ಸೇವೆಗೆ ಪ್ರೇರಣೆ ನೀಡುವ ಕೆಲಸವನ್ನು ಮಾಡುತ್ತಾರೆ.

ಇನ್ನು ಇವರು ರಸ್ತೆಗಳಲ್ಲಿ ಸಿಕ್ಕಂತಹ ನಾಣ್ಯದಂತಹ ವಿಶಿಷ್ಟ ವಸ್ತುಗಳ ಸಂಗ್ರಹಣೆ ಮಾಡಿದ್ದಾರೆ. ಸಂಗ್ರಹಿಸಿದ ವಸ್ತುಗಳಿಗೆ ಸಂಬAಧಿಸಿದ ಮೂರು ಸಂಪುಟಗಳ ಸಿದ್ದಾಂತಗಳನ್ನು ಬರೆದಿದ್ದಾರೆ. ಈ ಮೂಲಕ ಇವರು ಹಲವು ವಿಶಿಷ್ಟತೆಗಳಿಗೆ ಹೆಸರಾಗಿದ್ದಾರೆ. ಜನಮೆಚ್ಚು ಕೆಲಸ ಮಾಡುವುದರ ಮೂಲಕ ಸಾಕಷ್ಟು ಹೆಸರು ಮಾಡಿದ ಬದರಿನಾರಾಯಣ ಅವರು ಮಾದರಿ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಬದರಿನಾರಾಯಣ ಅವರ ಸಾಧನೆಯ ಹಾದಿ ಭಿನ್ನ ವಿಭಿನ್ನ.  ಇವರಿಗೆ ಇನ್ನಷ್ಟು ಉತ್ತಮ ಸಾಧನೆ ಮಾಡಲು ಇನ್ನಷ್ಟು ಉತ್ತಮ ಅವಕಾಶಗಳು ಸಿಗಲಿ ಇವರು  ಸಾಧನೆಯ ಶಿಖರವನ್ನು ಇನ್ನಷ್ಟು ಎತ್ತರ ಏರಲಿ ಅನ್ನೋದು ವಿಜಯಟೈಮ್ಸ್ ಆಶಯ.

Exit mobile version