ಬೆಂಗಳೂರು ಸೆ 9 : ಸಮಾಜದಲ್ಲಿ ಸಮಾನತೆ ಉಳಿಯಬೇಕಾದರೆ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಎರಡನ್ನೂ ಸೋಲಿಸಬೇಕು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಕಾಂಗ್ರೆಸ್ ಮತ್ತು ಆರ್ ಎಸ್ ಎಸ್ ಯಾವತ್ತಿನಿಂದಲೂ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಕಾಂಗ್ರೆಸ್ ಕೂಡ ಬ್ರಾಹ್ಮಣ್ಯವನ್ನು ಸಲುಹುವ ಸಂಸ್ಥೆ ಎಂದು ಟೀಕಿಸಿದರು. ಕೆಲವು ದಿನಗಳ ಹಿಂದೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಬ್ರಾಹ್ಮಣ್ಯವನ್ನು ಬೇರೂರಿಸುವ ಜಾತಿ ನಾಯಕ ಎಂದು ಹೇಳಿಕೆ ನೀಡಿದ್ದ ಚೇತನ್ ಈಗ ಮತ್ತೆ ಸುದ್ದಿಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಸದಸ್ಯರಾದ ಕೆಬಿ ಹೆಡ್ಗೆವಾರ್ ಅವರು 1925 ರಲ್ಲಿ ಆರ್.ಎಸ್.ಎಸ್.ಅನ್ನು ಸ್ಥಾಪಿಸಿದರು ಮತ್ತೊಬ್ಬ ಸದಸ್ಯರಾದ ಬಾಲ ಗಂಗಾಧರ ತಿಲಕ್ ಅವರು ಹೆಡ್ಗೆವಾರ್ ಅವರನ್ನು ಪ್ರಭಾವಿಸಿದ್ದರು. ಕಾಂಗ್ರೆಸ್ ಮತ್ತು ಆರ್ ಎಸ್ ಎಸ್ ಯಾವತ್ತಿನಿಂದಲೂ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವುದರಿಂದ ಕಾಂಗ್ರೆಸ್ ಮತ್ತು ಆರ್ ಎಸ್ ಎಸ್, ಎರಡಕ್ಕೂ ಲಾಭವಾಗುತ್ತದೆ. ಸಮಾನತೆಗಾಗಿ ಕಾಂಗ್ರೆಸ್ ಮತ್ತು ಸಂಘ ಪರಿವಾರ, ಎರಡನ್ನೂ ಸೋಲಿಸಬೇಕು ಎಂದು ನಟ ಚೇತನ್ ಅವರು ಟ್ವೀಟ್ ಮಖೇನ ಅಭಿಪ್ರಾಯ ವ್ಯೆಕ್ತ ಪಡಿಸಿದ್ದಾರೆ.