ಗಾಂಧಿ-ನೆಹರೂ-ಹೆಡಗೇವಾರ್ ನಮ್ಮ ವಿರೋಧಿಗಳು : ನಟ ಚೇತನ್!

actor

ರಾಜ್ಯದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿರುವ ಪಠ್ಯ ಪರಿಷ್ಕರಣೆ ಕುರಿತು ನಟ(Actor) ಮತ್ತು ಸಾಮಾಜಿಕ ಹೋರಾಟಗಾರ(Social Activist) ಚೇತನ್(Chethan) ಇದೀಗ ವಿಭಿನ್ನ ನಿಲುವು ತಳೆದಿದ್ದಾರೆ. ಇಷ್ಟು ದಿನ ರೋಹಿತ್ ಚಕ್ರತೀರ್ಥ(Rohith Chakratheertha) ಮತ್ತು ಬಿಜೆಪಿ ವಿರುದ್ದ ಕಿಡಿಕಾರುತ್ತಿದ್ದ ನಟ ಚೇತನ್ ಇದೀಗ ಮೂರು ರಾಜಕೀಯ ಪಕ್ಷಗಳಿಗೆ ಚಾಟಿ ಬೀಸಿದ್ದಾರೆ.

ಈ ಕುರಿತು ಸಾಮಾಜಿಕ ಮಾದ್ಯಮದಲ್ಲಿ ಮಾತನಾಡಿರುವ ಅವರು, ಗಾಂಧಿ, ನೆಹರೂ, ಹೆಡಗೇವಾರ್ ಮತ್ತು ಆರ್‍ಎಸ್‍ಎಸ್(RSS) ನಮ್ಮ ವಿರೋಧಿಗಳು. ಅಂಬೇಡ್ಕರ್, ಕುವೆಂಪು, ದ.ರಾ.ಬೇಂದ್ರೆ ಪರ ನಮ್ಮ ನಿಲುವು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಾಂಧಿ, ನೆಹರೂ ಪಾಠವನ್ನು ಮಕ್ಕಳಿಗೆ ಹೊರೆಸಲಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂಘದ ಪಟ್ಟಿ ಹಚ್ಚುತ್ತದೆ ಎಂದು ಟೀಕಿಸಿದ್ದಾರೆ. ರಾಜಕೀಯ ಪಕ್ಷಗಳು ಶಾಲಾ ಪಠ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದರ ವಿರುದ್ದ ನಾವೆಲ್ಲರೂ ಸಾಮೂಹಿಕವಾಗಿ ಚಳುವಳಿಗೆ ಧುಮುಕಬೇಕಿದೆ. ಪಠ್ಯ ಪರಿಷ್ಕರಣ ಸಮಿತಿ ರಾಜಕೀಯ ಪಕ್ಷಗಳ ಹಿಡಿತದಲ್ಲಿ ಇರಬಾರದು.

ಸಮ ಸಮಾಜಕ್ಕಾಗಿ ಹೋರಾಡಿದವರು ಪಠ್ಯದಲ್ಲಿರಬೇಕು. ಆದರೆ ಪಠ್ಯವನ್ನು ರಾಜಕೀಯಗೊಳಿಸುತ್ತಿರುವ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲರದ್ದೂ ಒಂದೇ ಕಥೆ ಎಂದು ಟೀಕಿಸಿದರು. ಇನ್ನು ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣ ಸಮಿತಿಯನ್ನು ರಾಜ್ಯ ಸರ್ಕಾರ ವಿಸರ್ಜನೆ ಮಾಡಿದೆ. ಪಠ್ಯಪರಿಷ್ಕರಣೆ ಸಮಿತಿಯನ್ನು ರದ್ದು ಮಾಡಿಲ್ಲ, ಸಮಿತಿಗೆ ವಹಿಸಿದ ಕೆಲಸ ಪೂರ್ಣಗೊಂಡ ಹಿನ್ನಲೆಯಲ್ಲಿ ಇಡೀ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

Exit mobile version