ಭುವನೇಶ್ವರಿ ಕನ್ನಡ ಹೆಮ್ಮೆಯಲ್ಲ, ಭುವನೇಶ್ವರಿಯು ಸಂವಿಧಾನ ವಿರೋಧಿ ಮೂಢನಂಬಿಕೆ – ಕಿಡಿ ಹೊತ್ತಿಸಿದ ನಟ ಚೇತನ್

Bengaluru: ಭುವನೇಶ್ವರಿ (Bhuvaneshwari) ಕನ್ನಡ ಹೆಮ್ಮೆಯಲ್ಲ-ಭುವನೇಶ್ವರಿಯು ಸಂವಿಧಾನ ವಿರೋಧಿ ಮೂಢನಂಬಿಕೆಯಾಗಿದೆ (ಆರ್ಟಿಕಲ್ 51ಎ (ಎಚ್)) ಸರ್ಕಾರ ಕನ್ನಡ ಪರ ನೀತಿಗಳನ್ನು ಜಾರಿಗೆ ತರಬೇಕು. ಇಂತಹ ಅಸಂಬದ್ಧ ಪ್ರತಿಮೆ ರಾಜಕೀಯ ಗಿಮಿಕ್ಗಳಲ್ಲ ಎಂದು ನಟ ಚೇತನ್ ಅಹಿಂಸಾ (Chethan Ahimsa) ಅವರು ವಿಧಾನಸೌಧ ಎದುರು ಭುವನೇಶ್ವರಿ ಪ್ರತಿಮೆಗೆ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ಧಾರೆ.

Bhuvaneshwari

ಈ ಕುರಿತು ತಮ್ಮ ಫೇಸ್ನುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಭುವನೇಶ್ವರಿ ಕನ್ನಡ ಹೆಮ್ಮೆಯಲ್ಲ-ಭುವನೇಶ್ವರಿಯು ಸಂವಿಧಾನ ವಿರೋಧಿ ಮೂಢನಂಬಿಕೆಯಾಗಿದೆ (ಆರ್ಟಿಕಲ್ 51ಎ (ಎಚ್)) ಸರ್ಕಾರ ಕನ್ನಡ ಪರ ನೀತಿಗಳನ್ನು ಜಾರಿಗೆ ತರಬೇಕು. ಇಂತಹ ಅಸಂಬದ್ಧ ಪ್ರತಿಮೆ ರಾಜಕೀಯ ಗಿಮಿಕ್ಗಳಲ್ಲ ಬ್ರಾಹ್ಮಣ್ಯದ ಆಚರಣೆಗಳ ಮೂಲಕ ವಿಧಾನಸೌಧದ ಒಳಗೆ 25 ಅಡಿ ಎತ್ತರದ ಭುವನೇಶ್ವರಿ ಪ್ರತಿಮೆಯ ನಿರ್ಮಾಣ ಕಾರ್ಯ ಕರ್ನಾಟಕ ಸರ್ಕಾರ ಆರಂಭಿಸಿದೆ. ನಮ್ಮ ಮುಖ್ಯಮಂತ್ರಿ ಅವರ ಹೆಸರನ್ನು ಅವಿವೇಕಿ-ರಾಮಯ್ಯ (Ramaiah) ಎಂದು ಮರುನಾಮಕರಣ ಮಾಡಬೇಕು.

ಇನ್ನೊಂದು ಪೋಸ್ಟ್ನಲ್ಲಿ, ಕರ್ನಾಟಕದಲ್ಲಿ ವಾಸಿಸುವವರು ಕನ್ನಡ ಕಲಿಯಬೇಕುಃ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದಂತೆ ಕನ್ನಡ ಕಲಿಕೆಯನ್ನು ಸ್ವತಂತ್ರ ಇಚ್ಛೆಗೆ ಬಿಡಬಾರದು-ಬದಲಿಗೆ, ಅದನ್ನು ಸರ್ಕಾರವು ಜಾರಿಗೊಳಿಸಬೇಕು.

  1. ಪ್ರತಿಗಾಮಿ 3-ಭಾಷಾ ಸೂತ್ರವನ್ನು ತೆಗೆದುಹಾಕಬೇಕು ಮತ್ತು 2-ಭಾಷಾ ಸೂತ್ರವನ್ನು (ಕನ್ನಡ ಮತ್ತು ಇಂಗ್ಲಿಷ್) ಮಾತ್ರ ಜಾರಿಗೊಳಿಸಬೇಕು.
  2. ಕನ್ನಡ ಮಾಧ್ಯಮ ಶಾಲೆಗಳನ್ನು ಹೆಚ್ಚಿಸಿ, ಸುಧಾರಣೆಗೊಳಿಸಬೇಕು.
  3. ಕನ್ನಡ ಮಾಧ್ಯಮದ (Kannada Medium) ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಹೆಚ್ಚಿಸಬೇಕು.
  4. ಎಲ್ಲಾ ಖಾಸಗಿ ಉದ್ಯೋಗಗಳಲ್ಲಿ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಜಾರಿಗೊಳಿಸಬೇಕು.
  5. ಭೌಗೋಳಿಕ/ಜಾತಿ/ಲಿಂಗಕ್ಕೆ ಸಂಬಂಧಿಸಿದಂತೆ ಎ & ಬಿ ಉದ್ಯೋಗಗಳಲ್ಲಿ 50% ಖಾಸಗಿ ವಲಯದ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
Exit mobile version