Chamarajpet: ಬಂಡೀಪುರ (Actor Ganesh House in Bandipur) ಸೂಕ್ಷ್ಮ ವಲಯದಲ್ಲಿ ನಟ ಗಣೇಶ್ ರವರು ಮನೆ ನಿರ್ಮಾಣ ಮಾಡಲು ಮುಂದಾಗಿದ್ದ ಸಂದರ್ಭದಲ್ಲಿ ಅವರಿಗೆ ಅರಣ್ಯ
ಇಲಾಖೆ ನೋಟಿಸ್ (Notice) ನೀಡಿತ್ತು. ನೋಟೀಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಗಣೇಶ್ ಅವರಿಗೆ ಮನೆ ಕಟ್ಟಲು ಹೈಕೋರ್ಟ್ ಮದ್ಯಂತರ ಒಪ್ಪಿಗೆ ನೀಡಿದೆ. ಇರುವ ಕುಂದುಕರೆ
ವ್ಯಾಪ್ತಿಯ ಜಕ್ಕಳಿ ಗ್ರಾಮದ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ನಟ ಗಣೇಶ್ (Ganesh) ಮುಂದಾಗಿದ್ದರು. ಇದಕ್ಕೆ ಅರಣ್ಯ ಇಲಾಖೆ ನೋಟೀಸ್ ನೀಡೋ ಮೂಲಕ ತಡೆ ಹಾಕಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗಿದ್ದ ಗಣೇಶ್ ಅವರಿಗೆ (Actor Ganesh House in Bandipur) ನ್ಯಾಯಾಲಯ ಮಧ್ಯಂತರ ಒಪ್ಪಿಗೆ ನೀಡಿದೆ.

ಆದರೂ ಈ ತಾತ್ಕಾಲಿಕ ಒಪ್ಪಿಗೆಯ ಅರ್ಜಿಯನ್ನು ಅಂತಿಮ ಆದೇಶಕ್ಕೆ ಒಳಪಡಿಸಿದೆ ಎಂದು ತಿಳಿಸಿದೆ. ಚಿತ್ರನಟ ಗಣೇಶ್ ರವರು ಸಲ್ಲಿಸಿದ್ದ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ
ಕೃಷ್ಣ ಎಸ್. ದೀಕ್ಷಿತ್ (Krishna S Dixit) ನೇತೃತ್ವದ ಏಕಸದಸ್ಯ ಪೀಠ, ಅರ್ಜಿದಾರರು ಮನೆ ನಿರ್ಮಾಣ ಮಾಡಬಹುದು ಎಂದು ತಿಳಿಸಿದ್ದಾರೆ. ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ
ಮೈಸೂರು ದಸರಾ: ಸೆ.5 ರಂದು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗಳಿಗೆ ಭರ್ಜರಿ ಸ್ವಾಗತ
ಸಮಿತಿಗೆ ಕೊಡಬೇಕಾದ ಮನವಿಯನ್ನು ಅಡ್ವೊಕೇಟ್ ಜನರಲ್ (Advocate General) ರವರ ಮೂಲಕ ನೀಡುವಂತೆ ಅರ್ಜಿದಾರರಿಗೆ ನಿರ್ದೇಶಿಸಿ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿದರು.
ವಕೀಲ ಶ್ರೀಧರ್‌ಪ್ರಭು (Shridhar Prabhu) ಅರ್ಜಿದಾರರ ಪರವಾದಿಸಿ, 2023 ರ ಪ್ರಕರಣವೊಂದರಲ್ಲಿ ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ಮನೆ ನಿರ್ಮಾಣ ಮಾಡಲು ಯಾವುದೇ ನಿರ್ಬಂಧವಿಲ್ಲ
ಎಂದು ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿದೆ. ಮನೆ ನಿರ್ಮಾಣ ನಿಯಂತ್ರಣ ಅಥವಾ ನಿಷೇಧ ಸಂಬಂಧ ಅರಣ್ಯ ಇಲಾಖೆಗೆ ಯಾವುದೇ ರೀತಿಯ ಅಧಿಕಾರವಿರುವುದಿಲ್ಲ. ಇದರಿಂದ
ಅಕ್ಕ ಪಕ್ಕದ ಸ್ಥಳೀಯರಿಗೆ ತುಂಬಾ ಸಮಸ್ಯೆಗಳಾಗುತ್ತಿವೆ. ಅಲ್ಲದೆ ಬೇರೆಯವರಿಗೆ ಮನೆ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಆದರೆ ಅರ್ಜಿದಾರರಿಗೆ ಮಾತ್ರ ನಿರ್ಬಂಧಿಸಿದೆ.
ಒಂದು ವೇಳೆ ಅರ್ಜಿದಾರರ ತಪ್ಪುಕಂಡು ಬಂದರೆ ಕಟ್ಟಡ ತೆರವು ಮಾಡಲಾಗುತ್ತದೆ,” ಎಂದು ಭರವಸೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತಾತ್ಕಾಲಿಕ ಮನೆ ನಿರ್ಮಾಣ ಮಾಡುವುದಕ್ಕೆ ಮಾತ್ರ ಅವಕಾಶವಿದೆ ಎಂದು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್‌ಶೆಟ್ಟಿ (K Shashikiran Shetty) ತಿಳಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಅರಣ್ಯ ಇಲಾಖೆ ಹೇಗೆ ಬೇರೆಯವರಿಗೂ ಮನೆ ನಿರ್ಮಾಣ ಮಾಡಲು ಅನುಮತಿ ನೀಡಿದೆ. ಅರ್ಜಿದಾರರು ಇದಕ್ಕೆ ಸಂಬಂಧಿಸಿದ್ದ ಎಲ್ಲಾ ಹೊಸ ದಾಖಲೆಗಳನ್ನ
ನೀಡಿದ್ದಾರೆ. ಪ್ರತಿಯೊಂದನ್ನು ನೋಡುವುದಾದರೆ ಎಲ್ಲವೂ ಸಹ ಹೊಸ ಅನುಮತಿಗಳೇ ಆಗಿರುತ್ತವೆ. ಹಾಗಾಗಿ ಅರ್ಜಿದಾರರಿಗೆ ಮನೆ ನಿರ್ಮಾಣ ಮಾಡ ಬಹುದು ಅಂತ ಆದೇಶಿಸಿದೆ.
- ಚಂದ್ರಿಕ ಎಂ