ಚಿಕ್ಕಬಳ್ಳಾಪುರ, ಜು. 01: ನಟ ಜಗ್ಗೇಶ್ ಪುತ್ರ ಯತಿರಾಜ್ ಅವರ ಕಾರು ಅಪಘಾತಕ್ಕೀಡಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಅಗಲಗುರ್ಕಿ ಬಳಿ ಹೈದೆರಾಬಾದ್ಗೆ ಸಂಚಾರ ಕಲ್ಪಿಸುವ ಹೈವೇಯಲ್ಲಿ ಘಟನೆ ನಡೆದಿದ್ದು ಗುರುರಾಜ್ ಅವರ ಕಾರು ರಸ್ತೆಯ ಡಿವೈಡರ್ ಗೆ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನುಜ್ಜು ಗುಜ್ಜಗಿದೆ. ಚಿಕ್ಕಬಳ್ಳಾಪುರ ಅಗಲಗುರ್ಕಿ ಬಳಿ ಬರುವಾಗ ಕಾರಿನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಇನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ
ಬಿ ಎಂ ಡಬ್ಲ್ಯೂ.ಬಿಳಿ ಬಣ್ಣದ KA-51-ME-9339. ಕಾರು ಇದಾಗಿದ್ದು.. ಟೈರ್ ಬ್ಲಾಸ್ಟ್ ಆದಕಾರಣ. ನಿಯಂತ್ರಣ ತಪ್ಪಿ ಡಿವೈಡರ್ ಗೆ ಹೊಡೆದಿದ್ದು ಇದರಲ್ಲಿ ಗುರುರಾಜ ಅವರಿಗೆ ಯಾವುದೇ ರೀತಿಯ ಪ್ರಾಣಾಪಾಯವಾಗದೆ. ಸಣ್ಣಪುಟ್ಟ ಗಾಯಗಳಾಗಿ ಹತ್ತಿರದಲ್ಲಿರುವ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದೃಷ್ಟವಶಾತ್ ಅಪಘಾತದ ಸಂದರ್ಭದಲ್ಲಿ ಬೇರೆ ವಾಹನಗಳು ನಿಧಾನವಾಗಿ ಬರುತ್ತಿದ್ದರಿಂದ ಯಾವುದೇ ದೊಡ್ಡ ಸಮಸ್ಯೆ ಆಗಿಲ್ಲ.
ಘಟನೆಯಲ್ಲಿ ಯತಿರಾಜ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಲಗೈಗೆ. ಕಿವಿಯ ಬಳಿ ಸಣ್ಣ ಗಾಯಗಳಾಗಿವೆ ಯಾವ ದೊಡ್ಡ ಸಮಸ್ಯೆ ಏನು ಆಗಿಲ್ಲವೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು ಸಂಚಾರಿ ಪೊಲೀಸರು ಬಂದು ತಪಾಸಣೆ ನಡೆಸಿದ್ದಾರೆ.