ಈ ದೇಶದ ಯುವಕರು ಹೇಗೆ ಪ್ರತಿಭಟಿಸಬೇಕು: ನಟ ಕಿಶೋರ್ ಕುಮಾರ್ ಹುಲಿ ಪ್ರಶ್ನೆ

ರೈತರ, ಕುಸ್ತಿಪಟುಗಳ, ಅಗ್ನಿವೀರರ, ಜೆ.ಎನ್.ಯುನ ಪ್ರತಿಭಟನೆಗಳಂತೆ ಆಂದೋಲನಗಳನ್ನು (Actor Kishore Kumar viral Statement) ಹತ್ತಿಕ್ಕುತ್ತಲೇ ಇದ್ದರೆ, ಈ ದೇಶದ ಯುವಕರು ಹೇಗೆ

ಪ್ರತಿಭಟಿಸಬೇಕು ?? ಎಂದು ಖ್ಯಾತ ನಟ ಕಿಶೋರ್ ಕುಮಾರ್ (Kishore Kumar) ಹುಲಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ರೈತರ, ಕುಸ್ತಿಪಟುಗಳ, ಅಗ್ನಿವೀರರ, ಜೆ.ಎನ್.ಯುನ ಪ್ರತಿಭಟನೆಗಳಂತೆ ಆಂದೋಲನಗಳನ್ನು ಹತ್ತಿಕ್ಕುತ್ತಲೇ

ಇದ್ದರೆ, ಈ ದೇಶದ ಯುವಕರು ಹೇಗೆ ಪ್ರತಿಭಟಿಸಬೇಕು ?? ಹೀಗೆ ತಮ್ಮ ಭವಿಷ್ಯವನ್ನು ಬಲಿಕೊಟ್ಟೇ?? ಇದಕ್ಕೆಲ್ಲಾ ನಾವೇ ಜವಾಬ್ದಾರರಲ್ಲವೇ?? ದೇಶದ ನಿಜವಾದ ಸಮಸ್ಯೆಗಳನ್ನು ನಿಭಾಯಿಸಲು

ಸಾಧ್ಯವಾಗದ ಅಯೋಗ್ಯರನ್ನು ಅಧಿಕಾರಕ್ಕೆ ತಂದದ್ದಕ್ಕೆ?? ನಾವು ಹೀಗೇ ಕೇವಲ ಧರ್ಮದ ಆಧಾರದ ಮೇಲೆ ಮತ ಚಲಾಯಿಸುತ್ತಲೇ ಇರುತ್ತೇವೆಯೇ?? ನಮ್ಮ ದೇಶದ ಎಲ್ಲಾ ಯುವಕರು ಆತ್ಮಹತ್ಯೆ

ಮಾಡಿಕೊಳ್ಳುವವರೆಗೆ ಅಥವಾ (Actor Kishore Kumar viral Statement) ದಂಗೆಕೋರರಾಗುವವರೆಗೆ ?? ಎಂದು ಪ್ರಶ್ನಿಸಿದ್ದಾರೆ.

ಸಂಸತ್ ಮೇಲಿನ ಸ್ಮೋಕ್ ಬಾಂಬ್ ದಾಳಿಯ (Smoke Bomb) ಕುರಿತು ತಮ್ಮ ಅಸಮಾಧಾನವನ್ನು ಹಂಚಿಕೊಂಡಿರುವ ಅವರು, ಪರೋಕ್ಷವಾಗಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೂ ಮುನ್ನ ನಾಚಿಕೆಗೆಟ್ಟ ವಿಶ್ವಗುರುವಿನ ನವ ಭಾರತಕ್ಕೆ ಸ್ವಾಗತ. ತಾನು ಮಾಡುತ್ತಿರುವ ಕುಕೃತ್ಯಗಳು ಜಗತ್ತಿಗೆ ಕಾಣುತ್ತಿರುವುದನ್ನು ತಿಳಿದೂ ಮುಂದುವರೆಸುವುದು ಭಂಡತನ, ನಾಚಿಕೆಗೇಡಿತನದ ಪರಾಕಾಷ್ಟೆ.

ವಿಶ್ವದ ಅತಿ ದೊಡ್ಡ ಸ್ಕ್ಯಾಮ್ ಗಾರ ಎಂದು ಆರೋಪ ಹೊತ್ತ, ನೀತಿ ಆಯೋಗದ ವರದಿಯ ಪ್ರಕಾರ ಯೋಗ್ಯತೆಯೇ ಇಲ್ಲದೇ ಇದ್ದರೂ ಬರೀ ವಿಶ್ವಗುರುವಿಗೆ ತನ್ನ ಏರೋಪ್ಲೇನು (Airplane) ಹತ್ತಿಸಿ ದೇಶದ

ಬಹುಪಾಲು ಆಸ್ತಿಯನ್ನು ತನ್ನದಾಗಿಸಿಕೊಂಡ ಅದಾನಿ ವಿರುದ್ಧ ಹಿಂಡನ್ಬರ್ಗ್ (Hindenburg) ಆರೋಪ ಮತ್ತು ಅದರ ಹಲವು ಸಾಕ್ಷಿಗಳು ಹೊರ ಬಂದು ವರ್ಷವೇ ಕಳೆದರೂ ಕಮಕ್ ಕಿಮಕ್ಕನ್ನದ, ರೈತರನ್ನು

ಆತಂಕವಾದಿಗಳೆಂದು ಕರೆದು ಅವರ ಮೇಲೆ ಜೀಪು ಹತ್ತಿಸಲು ತನ್ನ ಮಗನಿಗೆ ಕುಮ್ಮಕ್ಕು ಕೊಟ್ಟ ಗೃಹರಾಜ್ಯ ಸಚಿವ ಟೇನಿ ಬಗ್ಗೆ 2 ವರ್ಷವಾದರೂ ಮಾತಾಡದೇ ಕೈಕಟ್ಟಿ ಕೂತ,

ವಿಶ್ವ ಪ್ರಸಿದ್ಧ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಬ್ರಿಜ್ ಭೂಷಣನ (Brij Bhushan) ಕೂದಲೂ ಅಲ್ಲಾಡಿಸಲಾಗದ, ನಾಚಿಕೆಯೇ ಇಲ್ಲದ ಸರ್ಕಾರ ಮೋದಾನಿಯ ಜೋಡಿಯ ಬಣ್ಣ

ಬಯಲು ಮಾಡಿದ್ದಕ್ಕೆ, ಆಧಾರವೇ ಇಲ್ಲದ ಆರೋಪದ ನೆಪದಲ್ಲಿ ಬಂಗಾಳದ ದಿಟ್ಟ ಮಹಿಳಾ ಸಂಸದೆ ಮಹುವಾ ಮೊಯಿತ್ರಾರನ್ನು ನಂಬಲಸಾಧ್ಯ ವೇಗದಲ್ಲಿ ಉಚ್ಛಾಟನೆ ಮಾಡಿಬಿಡುತ್ತದೆ.

ಲಾಗಿನ್ ಐಡಿ ಪಾಸ್ವರ್ಡ್ (Login ID Password) ಸ್ನೇಹಿತನಿಗೆ ಕೊಟ್ಟದ್ದಕ್ಕೆ ಸಂಸತ್ತಿನಿಂದ ಉಚ್ಛಾಟನೆಯಾಗಬಹುದಾದರೆ, ದೇಶದ ಆಸ್ತಿಗಳನ್ನೆಲ್ಲಾ ಗೆಳೆಯನಿಗೆ ಕೊಟ್ಟ ವಿಶ್ವಗುರುವನ್ನೇನು ಮಾಡಬೇಕು?

ನೋಡಿ ಮೊಯಿತ್ರಾಜೀ (Moitrajee) ಕಲಿಯಿರಿ ನಮ್ಮ ವಿಶ್ವಗುರುವಿನಿಂದ ಉಚ್ಛಾಟನೆಯಾಗದೆ ಗೆಳೆಯರಿಗೆ ಲಾಭ ಮಾಡಿಕೊಡುವುದು ಮತ್ತು ಗೆಳೆಯರಿಂದ ಲಾಭ ಪಡೆಯುವುದು ಹೇಗೆ ಎಂದು ಪ್ರಧಾನಿ

ಮೋದಿ (Modi) ವಿರುದ್ದ ವಾಗ್ದಾಳಿ ನಡೆಸಿದ್ದರು.

ಇದನ್ನು ಓದಿ: ಅಧ್ಯಕ್ಷೀಯ ಚುನಾವಣೆಯಿಂದಲೇ ಅನರ್ಹ: ಟ್ರಂಪ್ಗೆ ಬಿಗ್ ಶಾಕ್..!

Exit mobile version