ತಮಿಳು ನಟ, ಡಿಎಂಡಿಕೆ ನಾಯಕ ವಿಜಯಕಾಂತ್ ವಿಧಿವಶ: ಅಭಿಮಾನಿಗಳಿಗೆ ಆಘಾತ

Chennai: ತಮಿಳಿನ ಹಿರಿಯ ನಟ, ರಾಜಕಾರಣಿ ವಿಜಯಕಾಂತ್ (Actor Vijayakanth Passes Away) ಅವರು ಗುರುವಾರ (ಡಿ.28) ಬೆಳಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದು, ಅವರಿಗೆ

71 ವರ್ಷ ವಯಸ್ಸಾಗಿತ್ತು. ಇನ್ನು ನ್ಯುಮೋನಿಯಾದಿಂದ ಬಳಲುತ್ತಿದ್ದ ವಿಜಯಕಾಂತ್ ಆಸ್ಪತ್ರೆಗೆ ದಾಖಲಾಗಿದ್ದು, ವೆಂಟಿಲೇಟರ್‌ (Ventilator) ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ

ಫಲಕಾರಿಯಾಗದೆ (Actor Vijayakanth Passes Away) ಅವರು ನಿಧನವಾಗಿದ್ದರೆ.

ಈ ಮಧ್ಯೆ ಅವರಿಗೆ ಕೊರೊನಾ ವೈರಸ್ (Corona Virus) ಕೂಡ ತಗುಲಿತ್ತು. ಇದೀಗ ವೈದ್ಯರು, ಚಿಕಿತ್ಸೆ ಫಲಕಾರಿಯಾಗದೆ ವಿಜಯಕಾಂತ್ ಮೃತಪಟ್ಟಿದ್ದಾರೆ ಎಂದು ಅಧಿಕೃತ ಹೇಳಿಕೆ ಹೊರಡಿಸಿದ್ದು,

ವಿಜಯಕಾಂತ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಆಸ್ಪತ್ರೆ ಎದುರು ಜಮಾಯಿಸಿದ್ದರು. ನೆಚ್ಚಿನ ನಾಯಕ ಇನ್ನಿಲ್ಲ (Death) ಎಂಬ ವಿಚಾರ ತಿಳಿಯುತ್ತಿದ್ದಂತೆಯೇ,

ಅಭಿಮಾನಿಗಳು ಆಘಾತಗೊಂಡಿದ್ದಾರೆ. ಆಸ್ಪತ್ರೆ ಸುತ್ತಮುತ್ತ ಬಿಗಿಭದ್ರತೆ ಏರ್ಪಡಿಸಲಾಗಿದೆ.

ವಿಜಯಕಾಂತ್ ಅವರನ್ನು ಮಂಗಳವಾರ (ಡಿಸೆಂಬರ್ 26) ಸಾಮಾನ್ಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ‘ವಿಜಯ್ ಅವರು ಆರೋಗ್ಯವಾಗಿದ್ದಾರೆ. ಇದೊಂದು ಸಾಮಾನ್ಯ ಪರೀಕ್ಷೆ.

ಅವರು ಶೀಘ್ರವೇ ಮನೆಗೆ ಮರಳಲಿದ್ದಾರೆ’ ಎಂದು ಡಿಎಂಡಿಕೆ (DMDK) ಪಕ್ಷದವರು ಹೇಳಿದ್ದರು. ಆ ಬಳಿಕ ಅವರಿಗೆ ಕೊವಿಡ್ ಇರುವ ವಿಚಾರ ದೃಢವಾಯಿತು. ಅವರ ಸಾವಿನ ಸುದ್ದಿ ಪಕ್ಷದವರಿಗೆ ಹಾಗೂ

ಅಭಿಮಾನಿಗಳಿಗೆ ಶಾಕ್ ನೀಡಿದೆ. ಈ ಮೊದಲು ನವೆಂಬರ್ (November) 20ರಂದು ವಿಜಯಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು.

ವಿಜಯಕಾಂತ್ ಅವರು 1952ರಲ್ಲಿ ಮದುರೈನಲ್ಲಿ (Madurai) ಜನಿಸಿದರು. ಅವರು 80ರ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದರು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2009ರ ಈಚೆಗೆ

ಅವರು ಚಿತ್ರರಂಗದಿಂದ ದೂರ ಆಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದರು. ಪ್ರೇಮಲತಾ (Premalatha) ಅವರನ್ನು ವಿಜಯಕಾಂತ್ 1990ರಲ್ಲಿ ಮದುವೆ ಆದರು. ಇವರಿಗೆ ಇಬ್ಬರು ಮಕ್ಕಳು.

ವಿಜಯಕಾಂತ್ ಸಿನಿಪಯಣ
ವಿಜಯಕಾಂತ್ ಅವರ ಮೂಲ ಹೆಸರು ವಿಜಯರಾಜ್ ಅಲಗರ್‌ಸ್ವಾಮಿ (Vijayraj Alagarswamy) 1952ರ ಆಗಸ್ಟ್ 25ರಂದು ಜನಿಸಿದ ವಿಜಯಕಾಂತ್, 1979ರಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟರು.

‘ಇನಿಕ್ಕುಂ ಇಲಮೈ’ (Inikkum Ilamai) ಸಿನಿಮಾದ ಮೂಲಕ ಸಿನಿಯಾನ ಆರಂಭಿಸಿದ ವಿಜಯಕಾಂತ್, ಸುಮಾರು 20ಕ್ಕೂ ಅಧಿಕ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿರುವುದು ವಿಶೇಷ.

ಅವರ ಬಹುತೇಕ ಸಿನಿಮಾಗಳು ಭ್ರಷ್ಟಾಚಾರದ ವಿರುದ್ಧದ ಕಥೆಯನ್ನು ಹೊಂದಿರುತ್ತಿದ್ದವು. 80ರ ದಶಕದಲ್ಲಿ ವಿಜಯಕಾಂತ್ ಯಾವ ಮಟ್ಟಿಗೆ ಬೇಡಿಕೆ ಹೆಚ್ಚಿಸಿಕೊಂಡಿದ್ದರು ಎಂದರೆ, 1984ರ ಒಂದೇ ವರ್ಷ

ಅವರ 18 ಸಿನಿಮಾಗಳು ತೆರೆಕಂಡಿದ್ದವು.

ವಿಜಯಕಾಂತ್ ರಾಜಕೀಯ ಜೀವನ
2005ರಲ್ಲಿ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯಕ್ಕೆ ಧುಮುಕಿದ ವಿಜಯಕಾಂತ್, 2006ರ ತಮಿಳುನಾಡು (Tamilnadu) ವಿಧಾನಸಭಾ

ಚುನಾವಣೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. 2006 ಮತ್ತು 2011ರಲ್ಲಿ ಬೇರೆ ಬೇರೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ವಿಜಯಕಾಂತ್ ಎರಡು ಬಾರಿ ಶಾಸಕರಾದರು. ಆದರೆ 2016ರ ಚುನಾವಣೆಯಲ್ಲಿ

ಅವರು ಸೋಲು ಅನುಭವಿಸಿದರು. ಆನಂತರ ಅವರು ಚುನಾವಣೆಗೆ ಸ್ಪರ್ಧಿಸಲಿಲ್ಲ.

Exit mobile version