ಕನ್ನಡ ಚಿತ್ರರಂಗದಲ್ಲಿ(Kannada Film Indsustry) ಅನೇಕ ಸಿನಿಮಾಗಳು(Cinema) ತೆರೆಗೆ ಅಪ್ಪಳಿಸಲು ಸಜ್ಜಾಗಿರುವ ನಡುವೆ ಸಾಂಸ್ಕೃತಿಕ ನಗರಿ(Heritage City) ಮೈಸೂರು(Mysuru) ನಗರದ ಕೆಲ ವಿಶೇಷತೆಗಳನ್ನು ಪ್ಲಸ್ ಪಾಯಿಂಟ್ ಮಾಡಿಕೊಂಡು ರೂಪಿಸಿರುವ `ಆರ್ಕೆಸ್ಟ್ರಾ ಮೈಸೂರು‘(Orchestra Mysuru) ಚಿತ್ರವನ್ನು ಸ್ಯಾಂಡಲ್‍ವುಡ್(Sandalwood) ನಟಿ(Actress) ಮೋಹಕ ತಾರೆ ರಮ್ಯ(Ramya/DivyaSpandana) ಟ್ರೇಲರ್ ಲಾಂಚ್ ಮಾಡುವ ಮುಖೇನ ಚಿತ್ರಕ್ಕೆ ಶುಭಕೋರಿದರು.

ಈ ಸಿನಿಮಾವನ್ನು ಸುನೀಲ್ ಮೈಸೂರು ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಅನ್ನು ನಟಿ ರಮ್ಯ ಬಿಡುಗಡೆ ಮಾಡಿದ್ದು ಚಿತ್ರತಂಡಕ್ಕೆ ಖುಷಿ ಸಂಗತಿಯಾದರೆ, ಅತ್ತ ರಾಜಕೀಯ(Political) ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು(Narendra Modi) ಟ್ಯಾಗ್ ಮಾಡಿ ವಿಷಯ ಪ್ರಸ್ತಾಪಿಸುತ್ತಿದ್ದ ನಟಿ ರಮ್ಯಾ, ಇದೇ ಮೊದಲ ಬಾರಿಗೆ ಮೋದಿಯವರಿಗೆ ಸಿನಿಮಾ ಟ್ರೇಲರ್ ವೀಕ್ಷಿಸುವಂತೆ ಟ್ಯಾಗ್ ಮಾಡಿ ತಿಳಿಸಿದ್ದಾರೆ. ಎರಡು ದಿನ ಕರ್ನಾಟಕ ರಾಜ್ಯ ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿಯವರು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮೈಸೂರಿಗೆ ಧಾವಿಸಿದರು.
3. Haage, you may want to check out the Orchestra culture in Mysuru or you can simply watch the trailer of Orchestra Mysuru made by young talented Mysureans- https://t.co/sN3W69EQ5R
— Divya Spandana/Ramya (@divyaspandana) June 21, 2022
Mathe Banni 🙂
If you too want to add to this list, please do in the comments section ??
ಇದನ್ನೇ ಗುರಿಯಾಗಿಸಿಕೊಂಡ ನಟಿ ರಮ್ಯ, ನಮ್ಮ ಮೈಸೂರಿಗೆ ಸುಸ್ವಾಗತ ನರೇಂದ್ರ ಮೋದಿಯವರೇ. ಸಮಯ ಸಿಕ್ಕರೇ ರಸ್ತೆಗಳನ್ನು ಉದ್ಘಾಟಿಸಿ, ಮೈಸೂರಿನ ಖ್ಯಾತಿಯ ಮೈಲಾರಿ ಬೆಣ್ಣೆ ದೋಸೆಯನ್ನು ಸವಿಯಿರಿ. ಹಾಗೆ, ಮೈಸೂರಿನ ಆಕೇಸ್ಟ್ರಾ ಸಂಸ್ಕೃತಿಯನ್ನು ಪರಿಚಯಿಸುವ ಆಕೇಸ್ಟ್ರಾ ಮೈಸೂರು ಸಿನಿಮಾದ ಟ್ರೇಲರ್ ವೀಕ್ಷಿಸಿ, ಯುವ ಉತ್ಸಾಹಿ ಮೈಸೂರಿಗರು ಈ ಚಿತ್ರವನ್ನು ನಿರ್ಮಿಸಿದ್ದಾರೆ ಎಂದು ಟ್ವೀಟ್(Tweet) ಮಾಡುವ ಮೂಲಕ ಹೇಳಿದ್ದಾರೆ.