ಆದಾನಿ ಸ್ಟಾಕ್‌ ಮಾರ್ಕೆಟ್‌ನ ದೊಡ್ಡ ಗೂಳಿ, ಪ್ರಧಾನಿ ದೊಡ್ಡ ಗೂಳಿಯನ್ನು ಆಲಂಗಿಸಿದ್ದಾರೆ : ಶಿವಸೇನೆ

New delhi : ವ್ಯಾಲೆಂಟೈನ್ ದಿನವನ್ನು ಆಚರಿಸುವ ಬದಲು ಗೋವು ಆಲಿಂಗನ ದಿನವನ್ನಾಗಿ ಆಚರಿಸಬೇಕು ಎಂಬ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ, ಶಿವಸೇನೆ ಗುಂಪು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಉದ್ಯಮಿ ಗೌತಮ್‌ ಅದಾನಿ(Gautham Adani) ಅವರೇ ಪವಿತ್ರ ಗೋವು ಆಗಿಬಿಟ್ಟಿದ್ದಾರೆ (Adani stock market bull) ಎಂದು ವ್ಯಂಗ್ಯವಾಡಿದೆ.

ಎಲ್ಲರಿಗೂ ತಿಳಿದಿರುವಂತೆ ಫೆ. 14 ರಂದು ಎಲ್ಲೆಡೆ ಪ್ರೇಮಿಗಳ ದಿನಾಚರಣೆಯನ್ನು ಆಚರಿಸುತ್ತಾರೆ. ಈ ದಿನ ಪ್ರೇಮಿಗಳ ದಿನ ಎಂದೇ ಗುರುತಾಗಿದೆ.

ಈ ದಿನವನ್ನು ಪ್ರೇಮಿಗಳ ದಿನ, ಅಂದು ಪ್ರೇಮಿಗಳಿಗೆ ಈ ದಿನವನ್ನು ಮೀಸಲಿಡಲಾಗಿದೆ ಎಂಬುದನ್ನು ಸಾಕಷ್ಟು ಜನ ಇಂದಿಗೂ ತಿಳಿದು ಪಾಲಿಸುತ್ತಾರೆ.

ಸದ್ಯ ಈ ದಿನದ ಬಗ್ಗೆ ಪ್ರಸ್ತಾಪನೆ ನಡೆದಿದ್ದು, ಆ ಪ್ರಸ್ತಾಪನೆ ಇದೀಗ ಟೀಕೆಗೆ ಕಾರಣವಾಗಿದೆ!

ಪ್ರಾಣಿ ಕಲ್ಯಾಣ ಮಂಡಳಿಯು ತನ್ನ ಸುತ್ತೋಲೆಯಲ್ಲಿ ಫೆ. ೧4 ರಂದು ಆಚರಣೆ ಮಾಡಲಾಗುವ ವ್ಯಾಲೆಂಟೈನ್‌ ದಿನದ(Valentince Day) ಬದಲಾಗಿ ಗೋವು ಆಲಿಂಗನ ದಿನವನ್ನಾಗಿ ಪರಿಗಣಿಸಿ,

ಆಚರಿಸುವುದು ಉತ್ತಮ ಎಂದು ತಿಳಿಸಿದೆ. ಈ ಸುತ್ತೋಲೆಯನ್ನು ನೋಡಿ ಟೀಕಿಸಿರುವ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ(Shiva sene) ಬಣ,

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉದ್ಯಮಿ ಗೌತಮ್‌ ಅದಾನಿ ಅವರೇ ಪವಿತ್ರ ಗೋವು ಆಗಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದೆ.

ಇದನ್ನೂ ಓದಿ: https://vijayatimes.com/venkatesh-prasad-expressed-displeasure/

ಈ ಬಗ್ಗೆ ಸಾಮ್ನಾದಲ್ಲಿ ಎಡಿಟೋರಿಯಲ್ನಲ್ಲಿ ಉಲ್ಲೇಖಿಸಿ ಬರೆದಿರುವ ಶಿವಸೇನೆ, ಗೌತಮ್‌ ಅದಾನಿ ಸ್ಟಾಕ್‌ (Adani stock market bull) ಮಾರುಕಟ್ಟೆಯ ಬೃಹತ್‌ ಗೂಳಿ,

ಆದ್ರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರು ಪವಿತ್ರ ಗೋವು. ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಗೂಳಿಯನ್ನು ಅಪ್ಪಿಕೊಂಡಿದ್ದಾರೆ.

ಮತ್ತು ತಮ್ಮ ಅಪ್ಪುಗೆಯನ್ನು ಸಡಿಲಗೊಳಿಸಲು ಅವರು ತಯಾರಿಲ್ಲ ಎಂದು ಶಿವಸೇನೆ ಹೇಳಿದೆ.

ತಮ್ಮ ಟೀಕೆಯನ್ನು ಮುಂದುವರಿಸಿದೆ ಶಿವಸೇನೆ, ಗೌತಮ್‌ ಅದಾನಿ ಕುರಿತಂತೆ ಸಂಸತ್ತಿನಲ್ಲಿ ಅಷ್ಟೊಂದು ಕೋಲಾಹಲ ಉದ್ಭವಗೊಂಡಿದ್ದರೂ ಕೂಡ ಈ ಹಗರಣದ ಬಗ್ಗೆ ಮೋದಿ ಅವರು ಒಂದೇ ಒಂದು ಶಬ್ದ ಕೂಡ ಮಾತನಾಡಿಲ್ಲ!

ಅದಾನಿ ಹಗರಣದ ಬಗ್ಗೆ ಜನಸಾಮಾನ್ಯರಿಗೆ ಪ್ರಧಾನಿ ಅವರಿಂದ ಸ್ಪಷ್ಟೀಕರಣ ಅಗತ್ಯವಿದೆ. ಆದ್ರೆ ಪ್ರಧಾನಿ ಅವರ ಸರ್ಕಾರ ಜನರನ್ನು ಸುಮ್ಮನಾಗಿಸಲು ಧರ್ಮದ ಡೋಸ್‌ ನೀಡಿದೆ.

ಪ್ರಧಾನಿ ಮೋದಿ ಅವರು ಅದಾನಿ(Adani) ಬಗ್ಗೆ ಒಂದು ಮಾತು ಆಡಲಿಲ್ಲ ಆದ್ರೆ, ಅವರ ಸರ್ಕಾರ ಗೋವುಗಳ ಬಗ್ಗೆ ಧ್ವನಿ ಎತ್ತಿದೆ ಎಂದು ಶಿವಸೇನೆ ಹೇಳಿದೆ.

Exit mobile version