ರಾತ್ರಿ ವೇಳೆ ಅನಗತ್ಯ ಬೈಕ್ ಸಂಚಾರ ನಿಷೇಧ ; ಇಬ್ಬರು ಯುವಕರು ಬೈಕ್‍ನಲ್ಲಿ ಸಂಚರಿಸುವಂತಿಲ್ಲ : ಎಡಿಜಿಪಿ

ಶಿವಮೊಗ್ಗ : ವೀರ ಸಾವರ್ಕರ್(Veera Savarkar) ಅವರ ಬ್ಯಾನರ್ ಅನ್ನು ಹಾಕುವ ವಿಚಾರದಲ್ಲಿ ಗಲಭೆ ಉಂಟಾಗಿ, ಚೂರಿ ಇರಿತ ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ. ಸೋಮವಾರ ಸಂಭವಿಸಿದ ಗಲಭೆಯ ಹಿನ್ನಲೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ನಡುವೆ ಶಿವಮೊಗ್ಗ(Shivamogga) ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ(Curfew) ಜಾರಿಗೊಳಿಸಲಾಗಿದೆ. ಸದ್ಯ ಈ ಘಟನೆಯ ಹಿನ್ನೆಲೆ ಪೊಲೀಸರು(Police) ನಗರದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಿದ್ದು, ಜಿಲ್ಲೆಯಲ್ಲಿ ಈಗಾಗಲೇ ಮೂರು ದಿನಗಳ ನಿಷೇದಾಜ್ಞೆ ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ ವೇಳೆ ಬೈಕ್ ಸಂಚಾರ ನಿಷೇಧ ಹೇರಿದ್ದಾರೆ.

ಬೈಕ್‍ನಲ್ಲಿ ಇಬ್ಬರು ಯುವಕರು ಸಂಚರಿಸುವಂತಿಲ್ಲ, 40 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರಷರು ಮಾತ್ರ ಸಂಚರಿಸಬಹುದು ಎಂದು ಎಡಿಜಿಪಿ(ADGP) ಅಲೋಕ್ ಕುಮಾರ್(Alok Kumar) ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು, ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನವರನ್ನು ಕೂರಿಸಿಕೊಂಡು ಸಂಚರಿಸುವುದನ್ನು ನಿಷೇಧಿಸಲಾಗಿದೆ.

ಇದಲ್ಲದೇ ರಾತ್ರಿ 9 ರಿಂದ ಬೆಳಗಿನ ಸಮಯ 5 ರವರೆಗೆ ತುರ್ತು ಸಂದರ್ಭವನ್ನು ಹೊರತುಪಡಿಸಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

Exit mobile version