‘ಪ್ರೀತಿ’(Love) ಎಂಬ ಎರಡೂವರೆ ಅಕ್ಷರವನ್ನು ನಿರೂಪಿಸುವುದು ಬಹಳ ಕಷ್ಟ. ಏಕೆಂದರೆ ಅದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯವಿಲ್ಲ. ಅದೇನೇ ಇದ್ದರೂ ಅದನ್ನು ಅನುಭವಿಸಿಯೇ ತೀರಬೇಕು. ಅದರಲ್ಲೂ ನಿಜವಾದ ಪ್ರೀತಿ ಎಂದರೆ ಯಾವುದು? ನಿಜವಾದ ಪ್ರೀತಿ ಎಂದರೇನು? ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು ಪ್ರೀತಿಸಿದವರ ಮನದಲ್ಲಿ ಮೂಡುವುದು ಸಹಜ.

ನಿಜವಾದ ಪ್ರೀತಿ ಎನ್ನುವುದು ಹೃದಯದ ಬಡಿತ ಅಲ್ಲ. ನನ್ನ ಹೃದಯ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಎಂದರೆ ನಿಜವೂ ಅಲ್ಲ. ನಿಜವಾದ ಪ್ರೀತಿ ಎನ್ನುವುದು ಪರಿಪೂರ್ಣ ಪ್ರಣಯ. ಆದರೆ ಅದನ್ನು ಗುರುತಿಸಿಕೊಳ್ಳುವುದು ಸುಲಭವಲ್ಲ. ನಿಜವಾದ ಪ್ರೀತಿಯನ್ನು ಹೃದಯ ಬಡಿತದಿಂದ ಅನುಭವಿಸುವುದಕ್ಕೆ ಸಾಧ್ಯ ಇಲ್ಲ. ‘ಲವ್ ಅಟ್ ಫಸ್ಟ್ ಸೈಟ್’ ಅನ್ನೋದು ವ್ಯಾಮೋಹ ಹೊರತು ಬೇರೆ ಅಲ್ಲ, ಆದರೆ ಅಲ್ಲಿಂದಲೇ ಪ್ರೀತಿ ಶುರುವಾಗಲೂಬಹುದು.
ಆದರೆ ಆ ಪ್ರೀತಿ ಪರಿಪೂರ್ಣತೆ ಪಡೆದುಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ನೋಡಿದ ಮಾತ್ರಕ್ಕೆ ಪ್ರೀತಿ ಉಕ್ಕಿ ಹರಿಯಬೇಕೆಂದೇನೂ ಇಲ್ಲ. ಕಣ್ಣಿಗೆ ಸುಂದರ ಎನಿಸಿದನ್ನು ಬಯಸುವುದು ಸಹಜ ಅಲ್ವಾ. ಹಾಗಾಗಿ, ನಿಜವಾದ ಪ್ರೀತಿ ಏನು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಅಗತ್ಯ. ಪ್ರೀತಿಯ ಸಂಬಂಧವನ್ನು ಬೆಳೆಸುವಾಗ ನಿಜವಾದ ಪ್ರೀತಿ ಹೌದಾ ಅಲ್ಲವೋ ಎಂಬುದನ್ನು ಅರ್ಥ ಮಾಡಿಕೊಳ್ಳಲೇಬೇಕು.
ಹಾಗಾಗಿ ಪ್ರೀತಿಯ ಸಂಬಂಧ ಬೆಳೆಸುವಾಗ ತಡವಾಗಿ ನಿರ್ಧಾರ ಕೈಗೊಳ್ಳುವುದು ಸೂಕ್ತ. ಪ್ರೀತಿಯಲ್ಲಿ ಬಿದ್ದಾಗ ನಿಮ್ಮನ್ನು ನಿಮಗೆ ನಿಯಂತ್ರಿಸಿಕೊಳ್ಳುವುದು ಕಷ್ಟವಾಗಬಹುದು. ಯಾಕೆಂದರೆ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದು ಬಹಳ ಕಷ್ಟ. ‘ಐ ಲವ್ ಯೂ’ ಅಂತ್ಹೇಳಿ ಅವರ ಪ್ರತಿಕ್ರಿಯೆ ಮತ್ತು ಮುಂದಿನ ನಿರ್ಧಾರಕ್ಕಾಗಿ ತುದಿಗಾಲಲ್ಲಿ ನಿಂತಿರುತ್ತೀರಿ. ಆದರೆ ಪ್ರತಿಕ್ರಿಯೆ ಬಂದಿಲ್ಲವಾದರೆ ತುಸು ಗಾಬರಿಯಾಗುವುದು ಸಹಜ. ಹಾಗೆಂದು ತೀರಾ ನಿರಾಶರಾಗಬೇಕಿಲ್ಲ.
ಯಾಕೆಂದರೆ ಪ್ರೀತಿಯ ವಿಷಯದಲ್ಲಿ ಯೋಚಿಸಿ ಮುಂದುವರಿಯುವುದು ಒಳ್ಳೆಯದು. ನಿಜವಾದ ಪ್ರೀತಿ ಅನ್ನೋದು ಒತ್ತಾಯ ಪೂರ್ವಕವಾಗಿರುವುದಿಲ್ಲ. ಬದಲಾಗಿ ಸ್ವಾಭಾವಿಕವಾಗಿದ್ದು, ಹೃದಯಪೂರ್ವಕವಾಗಿರುತ್ತದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ನಿಜವಾದ ಪ್ರೀತಿ ಅಂದರೆ ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಾರೆ. ಇಬ್ಬರ ಮಧ್ಯೆ ಒಡೆದು ಹೋಗಲಾರದಂತಹ ಬಂಧವೊಂದು ಬೆಳೆದುಬಿಟ್ಟಿರುತ್ತದೆ.

ಇದುವೇ ಪರಿಶುದ್ಧ ಮತ್ತು ಸ್ವಾರ್ಥವಿಲ್ಲದ ನಿಜವಾದ ಪ್ರೀತಿ. ಅಂತಹ ಪ್ರೀತಿಯನ್ನು ನಿರೂಪಿಸುವುದು ಕಷ್ಟವಾದರೂ ನಿಜವಾದ ಪ್ರೀತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ. ಪ್ರೀತಿಯಲ್ಲಿ ಕೊಡು ಮತ್ತು ತೆಗೆದುಕೊಳ್ಳುವ ಭಾವವಿರುತ್ತದೆ. ಹೃದಯಪೂರ್ವಕವಾಗಿ ಪ್ರೀತಿಯನ್ನು ಕೊಟ್ಟು ತೆಗೆದುಕೊಳ್ಳುವತಿರಬೇಕು. ನಿಮ್ಮ ವರ್ತನೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡುವಂತಿರಬೇಕು.
ತಮ್ಮ ಪ್ರೀತಿಯನ್ನು ನಿರೂಪಿಸಲು ಏನೇನೋ ಕಸರತ್ತುಗಳನ್ನು ಮಾಡುವ ವ್ಯಕ್ತಿಗಳನ್ನು ನೀವು ನೋಡಿರಬಹುದು. ಕಟ್ಟಡದಿಂದ ಜಿಗಿಯುವುದು, ಬ್ಲೇಡ್ ನಿಂದ ಕೈ ಮೇಲೆ ಪ್ರೇಯಸಿಯ ಹೆಸರು ಬರೆದುಕೊಳ್ಳುವುದು, ರಕ್ತದಿಂದ ಪ್ರೇಮಪತ್ರ ಬರೆಯುವುದು ಹೀಗೇ ಏನೇನೋ ಮಾಡುವವರನ್ನು ನೋಡಿರಬಹುದು. ಆದರೆ ಇಲ್ಲೊಬ್ಬ ಹುಡುಗಿ, ತನ್ನ ಹುಡುಗನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ನಿರೂಪಿಸಲು ಏನು ಮಾಡಿದ್ದಾಳೆ ಗೊತ್ತಾ?

ಏಡ್ಸ್ ರೋಗವಿರುವ ತನ್ನ ಹುಡುಗನ ರಕ್ತವನ್ನು ಸೂಜಿಯ ಮೂಲಕ ತನ್ನ ದೇಹಕ್ಕೆ ಚುಚ್ಚಿಕೊಂಡಿದ್ದಾಳಂತೆ! ಇನ್ನೊಂದು ಅಚ್ಚರಿಯ ವಿಷಯ ಎಂದರೆ, ಈಕೆಯ ವಯಸ್ಸು ಕೇವಲ 15 ವರ್ಷ! ಇದನ್ನು ನೋಡಿ ನಗುವುದೋ ಅಳುವುದೋ ನೀವೇ ಹೇಳಿ.
- ಪವಿತ್ರ