ಐತಿಹಾಸಿಕ ಸಾಧನೆಗೆ ಕ್ಷಣಗಣನೆ: ನಾಳೆ ಅಂತಿಮ ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆ ಇರಿಸಲು ಸಜ್ಜಾದ ಇಸ್ರೋ

ISRO: ಇಸ್ರೋದ (ISRO) ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಆದಿತ್ಯ ಎಲ್ 1 ಮಿಷನ್ ಅನ್ನು ಸೂರ್ಯನ ಸಂಶೋಧನೆಗಾಗಿ ಉಡಾವಣೆ ಮಾಡಿದ್ದು, ಆದಿತ್ಯ ಎಲ್ 1 ತನ್ನ ಗುರಿಯನ್ನು ತಲುಪಲು ಒಂದೆಜ್ಜೆ ಹತ್ತಿರದಲ್ಲಿದೆ. ನಾಳೆ (ಜ.6) ಸಾಯಂಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸೂರ್ಯನ (Sun) ಅಂತಿಮ ಕಕ್ಷೆಗೆ ಸೇರಿಸಲು ಸಜ್ಜಾಗಿದೆ.

ಇಸ್ರೋ ಬಾಹ್ಯಕಾಶ ನೌಕೆಯನ್ನು ಸೂರ್ಯನ ಅಧ್ಯಾನಕ್ಕಾಗಿ ಲ್ಯಾಂಗ್ರಾಜ್ ಪಾಯಿಂಟ್ 1 (Langraz Point-1) ಸುತ್ತಲೂ ಹಾಲೋ ಕಕ್ಷೆ ಎಂದು ಕರೆಯುವ ಜಾಗದಲ್ಲಿ ಇರಿಸಲು ಪ್ರಯತ್ನಿಸಲಾಗುತ್ತದೆ. ಆದಿತ್ಯ ಎಲ್-1 ಜನವರಿ (January) 6 ರಂದು ಸಂಜೆ 4ಗಂಟೆಗೆ ತನ್ನ ಎಲ್ 1ಪಾಯಿಂಟ್ ಅನ್ನು ತಲುಪಲಿದ್ದು, ಅದನ್ನು ಕಕ್ಷೆಯಲ್ಲಿ ವ್ಯೂಹಾತ್ಮಕ್ಕಾಗಿ ಇರಿಸಲು ಅಂತಿಮ ತಂತ್ರವನ್ನು ಮಾಡುತ್ತೇವೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ (S Somanath) ತಿಳಿಸಿದ್ದಾರೆ.

ಈ ಬಿಂದುವು ಭೂಮಿಯಿಂದ ಸುಮಾರು 1.ಮಿಲಿಯನ್ ಕಿಲೋಮೀಟರ್ ದೂರದಲ್ಲಿದ್ದು, ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣ (Gravity) ಬಲದ ಆಕರ್ಷಣೆ ಹಾಗು ವಿಕರ್ಷಣೆ ವರ್ಧಿತ ಪ್ರದೇಶಗಳನ್ನು ಉತ್ಪಾದಿಸುವ ಬಾಹ್ಯಾಕಾಶದ ಐದು ಸ್ಥಾನಗಳಲ್ಲಿ ಎಲ್ 1 ಪ್ರಮುಖ ಪಾತ್ರವಹಿಸಲಿದೆ.

ಈ ಮಿಷನ್ ಸೂರ್ಯನನ್ನು ಅಧ್ಯನ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಎಲ್ 1ರ ಸುತ್ತಲಿನ ಕಕ್ಷೆಯಿಂದ ಸೂರ್ಯನನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಇದು ಸೂರ್ಯನ ವೀಕ್ಷಣೆಗೆ ಮೀಸಲಿಟ್ಟ ಮೊದಲ ಭಾರತೀಯ ಬಾಹ್ಯಾಕಾಶ ಕಾರ್ಯಾಚರಣೆಯಾಗಿದ್ದು, ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರ ಪದರಗಳಾದ ಕರೋನವನ್ನು ಹಲವು ವೇವ್ ಬ್ಯಾಂಡ್ (Wave Band) ಗಳಲ್ಲಿ ನೋಡಲು ಏಳು ಪೇಲೋಡ್ ಗಳನ್ನು ಹೊತ್ತೊಯ್ಯುತ್ತದೆ..

ಭೂಮಿಯಿಂದ ಸುಮಾರು 1.5ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಎಲ್-1(ಸೂರ್ಯ ಅರ್ಥ್ ಲ್ಯಾಗ್ರಾಂಜಿಯಂ ಪಾಯಿಂಟ್)ನಲ್ಲಿ ಸೌರ ಮಾರುತದ ಸ್ಥಳ ವೀಕ್ಷಣೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ .

Exit mobile version