ಪ್ರತಾಪ್ ಸಿಂಹನ RSS ಸಂಸ್ಕೃತಿ ಶಾಖೆಗೆ ಮಾತ್ರ ಸೀಮಿತವಾಗಿರಲಿ – ಅಪ್ಸರ್ ಕೊಡ್ಲಿಪೇಟೆ

 ಮಡಿಕೇರಿ ನ 17 : ಹಂಸಲೇಖ ಮುಸ್ಲಿಮರನ್ನು ಮನೆಗೆ ಕರೆಸಿ ಹಂದಿ ಮಾಂಸ ಬಡಿಸಲಿ ಎಂಬ ಸಂಸದ ಪ್ರತಾಪ್ ಸಿಂಹ ಅವರ ಪ್ರಚೋದನಕಾರಿ ಹೇಳಿಕೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ. ಪದೇ ಪದೇ ಸಂವಿಧಾನ ಮತ್ತು ಕಾನೂನು ಬಾಹಿರ ಹೇಳಿಕೆಗಳನ್ನು ನೀಡುತ್ತಿರುವ ಅವರ ಸಂಸತ್ ಸದಸ್ಯತ್ವವನ್ನು ಕೇಂದ್ರ ಚುನಾವಣಾ ಆಯೋಗ ರದ್ದು ಗೊಳಿಸಬೇಕು ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅಪ್ಸರ್ ಕೊಡ್ಲಿಪೇಟೆ, ಸಂಸದ ಪ್ರತಾಪ್ ಸಿಂಹ ತಾನೋರ್ವ ಜನಪ್ರತಿನಿಧಿ ಎಂಬ ಪರಿಜ್ಞಾನದಿಂದ ಮಾತನಾಡಲಿ ಅದು ಬಿಟ್ಟು RSS ನ ಸಂಸ್ಕೃತಿಯನ್ನು ಸಾರ್ವಜನಿಕ ವಾಗಿ ಮಾತನಾಡದೆ ಅದನ್ನು ಶಾಖೆಯಲ್ಲಿಟ್ಟುಕೊಳ್ಳಲಿ. ಹಂಸಲೇಖ ಪೇಜಾವರ ಶ್ರೀ ಬಗ್ಗೆ ನೀಡಿದ ಹೇಳಿಕೆಯನ್ನು ಯಾವುದೇ ಮುಸಲ್ಮಾನರು ಸಮರ್ಥಿಸಿಲ್ಲ ಹಾಗೂ ಅವರಿಗೆ ಅದಕ್ಕಾಗಿ ಅಭಿನಂದನೆಯನ್ನು ಸಲ್ಲಿಸಿಯೂ ಇಲ್ಲ, ಆದರೆ ಸಂಸದ ಪ್ರತಾಪ್ ಸಿಂಹ ತಾನು ಸರ್ವ ಜನರ ಜನಪ್ರತಿನಿಧಿ ಎಂಬ ಪರಿಜ್ಞಾನ ಇಲ್ಲದೆ ಪರಸ್ಪರ ಕೋಮು ಧ್ರುವೀಕರಣ ಮಾಡುವಂತಹ ಹೇಳಿಕೆಯನ್ನು ನೀಡಿ ಈಗಾಗಲೇ ಸಂಘಪರಿವಾರದ ಗೂಂಡಾಗಿರಿ, ಅನೈತಿಕ ಪೋಲಿಸ್ ಗಿರಿ, ಕೋಮು ಹೇಳಿಕೆಗಳಿಂದ ಅಶಾಂತಿ ತಲೆದೋರಿರುವ ರಾಜ್ಯದಲ್ಲಿ ಇನ್ನಷ್ಟು ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಸಂಸದರಿಗೆ ಬುದ್ದಿ ಹೇಳಬೇಕಾದ ಬಿಜೆಪಿ ಪಕ್ಷದ ಹೈಕಮಾಂಡ್ ಇವರಿಗಿಂತಲೂ ಕಡೆಯಾಗಿ ವರ್ತಿಸುತ್ತಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಮತದಾರರೇ ಇವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ. ಹಾಗೂ ಪದೇ ಪದೇ ಕೋಮು ಪ್ರಚೋದನಕಾರಿಯಾಗಿ ಮಾತನಾಡಿ ರಾಜ್ಯದಲ್ಲಿ ಕೋಮು ಗಲಭೆ ನಡೆಸಲು ಯತ್ನಿಸುತ್ತಿರುವ ಪ್ರತಾಪ್ ಸಿಂಹ ನ ಸಂಸತ್ ಸದಸ್ಯತನವನ್ನು ಚುನಾವಣಾ ಆಯೋಗ ರದ್ದು ಗೊಳಿಸಬೇಕೆಂದು ಅವರು ಆಗ್ರಹಿಸಿದರು.

Exit mobile version