ಗೂಗಲ್‌ ಬಳಿಕ ಅಮೇಜಾನ್ ನಿಂದಲೂ ಕನ್ನಡಕ್ಕೆ ಅಪಮಾನ: ಕನ್ನಡ ಬಾವುಟ ಹೋಲುವ ಮಹಿಳೆಯರ ಒಳ ಉಡುಪು ಮಾರಾಟ

ಮೈಸೂರು, ಜೂ. 05: ಗೂಗಲ್‌ನಿಂದ ಕನ್ನಡಕ್ಕೆ ಅಪಮಾನ ವಿವಾದದ ನಂತರ ಅಮೇಜಾನ್‌ ಸರದಿ ಬಂದಿದೆ.

ಅಮೇಜಾನ್‌ ಕೆನಡಾ (amazon.ca) ವೆಬ್‌ತಾಣದಲ್ಲಿ ಕನ್ನಡ ಬಾವುಟದ ಮೇಲೆ ರಾಜ್ಯ ಸರ್ಕಾರದ ಮುದ್ರೆ ಇರುವ ಮಹಿಳೆಯರ ಒಳ ಉಡುಪುಗಳನ್ನು ಮಾರಾಟ ಮಾಡಲಾಗುತ್ತಿದ್ದು ಇದರ ಬಗ್ಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

www.amazon.ca/BKDMHHH-Karnataka-Original-Triangle-Trimmer/dp/B07FBMC4X2 ಈ ಲಿಂಕ್ ಓಪನ್‌ ಮಾಡಿದರೆ ಕನ್ನಡ ಬಾವುಟವನ್ನು ಹೋಲುವ ಒಳ ಉಡುಪು ಕಾಣುತ್ತದೆ. BKDMHHH ಎನ್ನುವ ಕಂಪನಿಯು ಈ ಉಡುಪುಗಳನ್ನು ಡಿಸೈನ್‌ ಮಾಡಿದೆ ಎಂದು ಈ ಲಿಂಕ್‌ನಲ್ಲಿರುವ ವಿವರಣೆಗಳು ಹೇಳುತ್ತವೆ.

ಸದ್ಯ ಅಮೇಜಾನ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಪ್ರಾಡಕ್ಟ್‌ ರಿವೀವ್‌ ವಿಭಾಗಕ್ಕೆ ಹೋಗಿ (ಸರಕು ವಿಶ್ಲೇಷಣೆ) ಋಣಾತ್ಮಕ ಪ್ರತಿಕ್ರಿಯೆಗಳನ್ನು ದಾಖಲಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್‌ ನಡೆಯುತ್ತಿದೆ.

Exit mobile version