ಅಗ್ನಿಪಥ್ ಯೋಜನೆ(Agnipath Yojana) ವಿರುದ್ಧ ಭಾರೀ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮತ್ತು ಅಸ್ಸಾಂ ರೈಫಲ್ಸ್(Assam Rifiles) ನೇಮಕಾತಿಯಲ್ಲಿ ಅಗ್ನಿವೀರ್‌ಗಳಿಗೆ ಶೇಕಡಾ 10% ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ(Central Government) ಶನಿವಾರ ಪ್ರಕಟಿಸಿದೆ. ಗೃಹ ವ್ಯವಹಾರಗಳ ಸಚಿವಾಲಯವು CAPF ಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಅಗ್ನಿವೀರ್‌ಗಳ ನೇಮಕಾತಿಗಾಗಿ ತನ್ನ 17.5-21 ವರ್ಷಗಳ ಅರ್ಹತಾ ಮಾನದಂಡಗಳಲ್ಲಿ ಮೂರು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲು ನಿರ್ಧರಿಸಿದೆ.
ಗಮನಾರ್ಹವಾಗಿ, ನೇಮಕಾತಿಗಳ ಮೊದಲ ಬ್ಯಾಚ್ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ ಐದು ವರ್ಷಗಳ ಸಡಿಲಿಕೆಯನ್ನು ಪಡೆಯಲಿದೆ. ಕೇಂದ್ರ ಸರ್ಕಾರವು ಮಂಗಳವಾರ, ಜೂನ್ 14 ರಂದು ಸಶಸ್ತ್ರ ಪಡೆಗಳಿಗೆ ಅಗ್ನಿಪಥ್ ಅಲ್ಪಾವಧಿಯ ನೇಮಕಾತಿ ಯೋಜನೆಯನ್ನು ಪ್ರಧಾನಿ(Primeminister) ನರೇಂದ್ರ ಮೋದಿಯವರ(Narendra Modi) ನೇತೃತ್ವದಲ್ಲಿ ಅನಾವರಣಗೊಳಿಸಿತು. ಒಂದು ಸುಧಾರಣಾ ಹೆಜ್ಜೆಯಾಗಿ, ಈ ಯೋಜನೆಯು ಮೂರು ಸೇವೆಗಳಲ್ಲಿ ಹೆಚ್ಚು ಯುವಕರನ್ನು ತುಂಬುವ ಗುರಿಯನ್ನು ಹೊಂದಿದೆ.
ಅಗ್ನಿಪಥ್ ಯೋಜನೆಯು 17.5 ರಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇನೆಯ ಮೂರು ಸೇವೆಗಳಲ್ಲಿ “ಅಗ್ನಿವೀರ್” ಆಗಿ ಸೇರ್ಪಡೆಗೊಳಿಸಲು ಅನುಮತಿಸುತ್ತದೆ. ರಕ್ಷಣಾ ಉದ್ಯೋಗಾಕಾಂಕ್ಷಿಗಳು ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಏಕೆಂದರೆ ನಾಲ್ಕು ವರ್ಷಗಳು ಪೂರ್ಣಗೊಂಡ ನಂತರ, ಯೋಜನೆಯ ಮೂಲಕ ನೇಮಕಗೊಂಡ ಸೈನಿಕರಲ್ಲಿ ಕೇವಲ 25 ಪ್ರತಿಶತದಷ್ಟು ಸೈನಿಕರನ್ನು ಮಾತ್ರ ಪೂರ್ಣ ಅವಧಿಗೆ ಸೇವೆ ಸಲ್ಲಿಸಲು ಉಳಿಸಿಕೊಳ್ಳಲಾಗುತ್ತದೆ.
ಅಗ್ನಿಪಥ್ ಯೋಜನೆ ಕುರಿತು ಸೇನೆ ಸೇರುವ ಧ್ಯೇಯ ಹೊಂದಿದ್ದ ಆಕಾಂಕ್ಷಿಗಳಿಂದ ತೀವ್ರ ಖಂಡನೀಯ ವ್ಯಕ್ತವಾದ ಹಿನ್ನಲೆ ಹಲವು ರಾಜ್ಯಗಳಲ್ಲಿ ರೈಲು ತಡೆದು, ರೈಲಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.