ಆಹಾರ ಕ್ರಮವು ತುಟಿಯ ಆರೋಗ್ಯವನ್ನು ಹೆಚ್ಚಿಸಬಹುದು

ಮೇಕಪ್‌ ಎಂದರೆ ಅನೇಕ ಹುಡುಗಿಯರ ಅವಿಭಾಜ್ಯ ಅಂಗವಾಗಿದೆ. ತಾನು ಧರಿಸಿದ ಬಟ್ಟೆಗಳಿಗೆ ಸೂಕ್ತವಾದ ಲಿಪ್‌ಸ್ಟಿಕ್‌ ಹಚ್ಚಬೇಕು, ಕಿವಿಯೋಲೆ ಧರಿಸಬೇಕು, ಸೂಕ್ತವಾದ ಹೇರ್‌ಸ್ಟೈಲ್‌ ಮಾಡಬೇಕು ಹೀಗೆ ಅನೇಕ ರೀತಿಯ ಕಾಳಜಿಯನ್ನು ನಾವು ತೋರಿಸುತ್ತೇವೆ.  ಇದೆಲ್ಲದನ್ನು ಮಾಡುವ ಹುಡುಗಿಯರು, ತುಟಿಯ ಸೌಂದರ್ಯವನ್ನು ಮರೆತು ಬಿಡುತ್ತಾರೆ.  ಬಿರುಕು ತುಟಿಗಳು ನಿಮ್ಮ ಮುಖದ ಸೌಂರ್ಯವನ್ನು ಕುಗ್ಗಿಸಬಹುದು. ಆದ್ದರಿಂದ ನಯವಾದ ತುಟಿಗಳನ್ನು ಹೊಂದಲು ಅದರ ಆರೈಕೆಯು ಬಹುಮುಖ್ಯವಾಗಿ ಬಿಡುತ್ತದೆ.

ನಮಗೆ ಆಗಾಗ ತುಟಿ ಒಣಗುವಂತಹ ಅನುಭವವಾಗುತ್ತಿರುತ್ತದೆ. ಆದರೆ ಇದನ್ನು ತಕ್ಷಣಕ್ಕೆ ಸಮಂಜಸ ಎನಿಸಿದರೂ ಮತ್ತೆ ಅದೇ ಅನುಭವವಾಗುತ್ತದೆ. ಇದು ನಮ್ಮ ತುಟಿಗಳ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಎಂಜಲಿನಲ್ಲಿರುವ ಎಂಜೈಮ್​​ಗಳು ನಿಮ್ಮ ತುಟಿಯನ್ನ ಮೇಲಿರುವ ರಕ್ಷಣಾ ಕವಚಕ್ಕೆ ಹಾನಿ ಮಾಡುವ ಸಾಧ್ಯತೆ ಇದೆ.

ನಿಮ್ಮ ಆಹಾರ ಕ್ರಮವು ತುಟಿಗಳನ್ನು ಆರೋಗ್ಯಕರವಾಗಿ ಇರಿಸಬಲ್ಲದು. ವಿಟಮಿನ್​ ಇ ಅಂಶ ಹೇರಳವಾಗಿರುವ ಪದಾರ್ಥಗಳು ತುಟಿಯ ಕಾಂತಿಯನ್ನ ಹೆಚ್ಚಿಸೋಕೆ ಕಾರಣವಾಗುತ್ತೆ. ಅತೀ ಉಪ್ಪು ಹಾಗೂ ಖಾರದ ಪದಾರ್ಥಗಳು ತುಟಿಯನ್ನ ಒಣಗಿಸಿ ಬಿಡುತ್ತೆ. ಅತಿಯಾಗಿ ನೀರು ಕುಡಿಯೋದ್ರಿಂದ ತುಟಿಯ ಸೌಂದರ್ಯ ಇಮ್ಮಡಿಯಾಗುತ್ತದೆ.

ಮಲಗುವ ಮುನ್ನ ತುಟಿಗೆ ಲಿಪ್​ಬಾಮ್​ ಹಚ್ಚೋದನ್ನ ಮರೆಯದಿರಿ. ಬೆಳಗ್ಗೆ ಎದ್ದೊಡನೆಯೇ ಹತ್ತಿ ಇಲ್ಲವೇ ಮೃದುವಾದ ಬಟ್ಟೆ ಉಪಯೋಗಿಸಿ ತುಟಿಯ ಮೇಲೆ ಮಸಾಜ್​ ಮಾಡಿ. ಇದು ನಿಮ್ಮ ತುಟಿಯಲ್ಲಿ ರಕ್ತದ ಹರಿವನ್ನ ಹೆಚ್ಚಿಸೋದ್ರ ಜೊತೆಗೆ ತುಟಿ ಇನ್ನಷ್ಟು ಮೃದು ಆಗೋಕೆ ಸಹಾಯಕಾರಿ.

ಯಾವ ಲಿಪ್​ ಬಾಮ್​​ಗಳಲ್ಲಿ ವಿಟಮಿನ್​ ಇ, ಆಲ್ಮಂಡ್​ ಅಥವಾ ತೆಂಗಿನೆಣ್ಣೆ ,ಪೆಟ್ರೋಲಿಯಂ ಜೆಲ್ಲಿ ಹೇರಳವಾಗಿರುತ್ತದೆಯೋ ಅಂತಹ ಬಾಮ್​ಗಳನ್ನೇ ಬಳಕೆ ಮಾಡಿ. ಲಿಪ್​ಬಾಮ್​ನ ಬೆಲೆ ಹೆಚ್ಚಿದಂತೆ ಅದು ಚರ್ಮಕ್ಕೆ ಒಳ್ಳೆಯದು ಅನ್ನೋ ವಿಚಾರವನ್ನ ಮೊದಲು ತಲೆಯಿಂದ ತೆಗೆದು ಹಾಕಿ. ಕೆಲವೊಮ್ಮೆ ಕಡಿಮೆ ಬೆಲೆಯ ಲಿಪ್​ಬಾಮ್​ಗಳೇ ನಿಮ್ಮ ಚರ್ಮದ ಆರೋಗ್ಯಕ್ಕೆ ಹಿತವಾಗಿರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಿತ್ಯ ಮಲಗುವ ಮುನ್ನ ಮೇಕಪ್​ ರಿಮೂವ್​ ಮಾಡೋದನ್ನ ಮರೆಯದಿರಿ. ಕಾಟನ್​ಗೆ ಸ್ವಲ್ಪ ತೆಂಗಿನೆಣ್ಣೆ ತಾಗಿಸಿ ಅದರಿಂದ ಮೃದುವಾಗಿ ತುಟಿಗಳ ಮೇಲೆ ಮಸಾಜ್​ ಮಾಡುತ್ತಾ ಲಿಪ್​ಸ್ಟಿಕ್​ಗಳನ್ನ ತೆಗೆಯಿರಿ. ಯಾವುದೇ ಕಾರಣಕ್ಕೂ ತುಟಿಗಳ ಮೇಲೆ ಗಟ್ಟಿಯಾಗಿ ಉಜ್ಜಬೇಡಿ.

Exit mobile version