ವಿಮಾನ ಪ್ರಯಾಣಿಕನಿಗೆ 2 ಬಾರಿ ಹಾರ್ಟ್‌ ಆಟ್ಯಾಕ್‌: ಜೀವ ಉಳಿಸಿದ ಭಾರತೀಯ ಮೂಲದ ವೈದ್ಯ!

India : ಭಾರತೀಯ ಮೂಲದ ವೈದ್ಯರಾದ ಡಾ. ವಿಶ್ವರಾಜ್ ವೇಮಲಾ(Dr Vishwaraj Vemala) ಅವರು ವಿಮಾನದಲ್ಲಿ 2 ಬಾರಿ ಹೃದಯ ಸ್ತಂಭನಕ್ಕೆ(Air passenger heart attacks) ಒಳಗಾದ ಸಹ-ಪ್ರಯಾಣಿಕರೊಬ್ಬರ ಜೀವವನ್ನು 5 ಗಂಟೆಗಳ ಕಾಲ ನಿರಂತರ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸಿದ್ದಾರೆ.

ಭಾರತಕ್ಕೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಮ್ಮ ಸಹ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದ ಭಾರತೀಯ ಮೂಲದ ವೈದ್ಯರಿಗೆ ನೆಟ್ಟಿಗರು ಶ್ಲಾಘನೆ, ಮೆಚ್ಚುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ(Birmingham) ಕನ್ಸಲ್ಟೆಂಟ್ ಹೆಪಟಾಲಜಿಸ್ಟ್(Hepatologist) ಆಗಿರುವ ಡಾ.ವಿಶ್ವರಾಜ್ ವೇಮಲಾ

ಅವರು 10 ಗಂಟೆಗಳ ವಿಮಾನ ಪ್ರಯಾಣದಲ್ಲಿದ್ದಾಗ 43 ವರ್ಷದ ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದುಬಿದ್ದಿದ್ದಾರೆ.

ವಿಮಾನದಲ್ಲಿ ವೈದ್ಯಕೀಯ ವಸ್ತುಗಳು ಮತ್ತು ಪ್ರಯಾಣಿಕರಿಂದ ಬಂದ ವಸ್ತುಗಳ ನೆರವಿನಿಂದ, ಡಾ. ವೇಮಲಾ ಅವರು ತಮ್ಮ ಸಹ ಪ್ರಯಾಣಿಕರಿಗೆ ಸೂಕ್ತ ಹಾಗೂ ಶೀಘ್ರ ಚಿಕಿತ್ಸೆ ನೀಡುವ ಮೂಲಕ ಅವರ ಜೀವವನ್ನು ಉಳಿಸಿ,

ಪ್ರಾಣಪಾಯದಿಂದ ಪಾರು ಮಾಡಿದ್ದಾರೆ. ಈ ಘಟನೆಯನ್ನು ನೆನೆದ ಅವರ ಸಂಸ್ಥೆ ವೈದ್ಯರ ಅನುಭವವನ್ನು ತಮ್ಮ ಪುಟದಲ್ಲಿ ಈ ರೀತಿ ಹಂಚಿಕೊಂಡಿದೆ.

ನಮ್ಮ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್‌ಗಳಲ್ಲಿ ಒಬ್ಬರಾದ ಡಾ. ವಿಶ್ವರಾಜ್ ವೇಮಲಾ ಅವರು ವಿಮಾನದಲ್ಲಿ ಪ್ರಯಾಣಿಸುವ ವೇಳೆ ಹೃದಯ ಸ್ತಂಭನಕ್ಕೆ ಒಳಗಾದ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದರು.

ಸ್ಥಳದಲ್ಲಿ ದೊರೆತ ಚಿಕಿತ್ಸಾ ವಸ್ತುಗಳನ್ನು ಬಳಸಿಕೊಂಡು ಡಾ. ವೇಮಲಾ ಅವರು ನೆಲದ ಮೇಲೆ ಕುಸಿದು ಬಿದ್ದಿದ್ದ ಪ್ರಯಾಣಿಕರನ್ನು ತುರ್ತು

ಸಿಬ್ಬಂದಿಗೆ ಹಸ್ತಾಂತರಿಸುವ ಮೊದಲೇ ಸೂಕ್ತ ಚಿಕಿತ್ಸೆ ನೀಡಿ ಅವರಿಗೆ ಮರು ಜೀವ ನೀಡಿದ್ದಾರೆ ಎಂದು ಹೇಳಿಕೊಂಡಿದೆ.

ಪತ್ರಿಕಾ ವರದಿಯ ಪ್ರಕಾರ, ಡಾ. ವಿಶ್ವರಾಜ್ ವೇಮಲಾ ಅವರು ಯುನೈಟೆಡ್ ಕಿಂಗ್‌ಡಮ್‌ನಿಂದ(United kingdom) ಭಾರತಕ್ಕೆ ತಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಏರ್ ಇಂಡಿಯಾ ವಿಮಾನದಲ್ಲಿ(Air passenger heart attacks) ಸಹ ಪಯಾಣಿಕರೊಬ್ಬರು ಹೃದಯಾಘಾತಕ್ಕೆ ಒಳಗಾದಾಗ

ಸಿಬ್ಬಂದಿಗಳು ವೈದ್ಯರನ್ನು ಕರೆಯಲು ಪ್ರಾರಂಭಿಸಿದ ಬೆನ್ನಲ್ಲೇ ವೈದ್ಯಕೀಯ ಜ್ಞಾನವನ್ನು ಹೊಂದಿದ್ದ ಡಾ. ವಿಶ್ವರಾಜ್ ವೇಮಲಾ ಅವರು ಕೂಡಲೇ ವ್ಯಕ್ತಿಯ ಬಳಿ ಧಾವಿಸಿ,

ಅವರಿಗೆ ತುರ್ತು ಚಿಕಿತ್ಸೆ ನೀಡಿ ಅವರ ಜೀವವನ್ನು ಉಳಿಸಿದ್ದಾರೆ ಎಂದು ವರದಿ ಮಾಡಿದೆ.

ಪ್ರಯಾಣಿಕನ ಜೀವ ಉಳಿಸಲು ಡಾ. ವಿಶ್ವರಾಜ್ ವೇಮಲಾ ಅವರು, ಸತತ ಐದು ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸಿದ್ದಾರೆ.

ಪ್ರಯಾಣಿಕನ ನಾಡಿ ಮಿಡಿತ ಹಿಡಿದು ಅಗತ್ಯ ಚಿಕಿತ್ಸೆ ನೀಡುವ ಮೂಲಕ ಹೆಚ್ಚು ಜಾಗರೂಕತೆ ವಹಿಸಿದ್ದಾರೆ.

ವೈದ್ಯ ವಿಶ್ವರಾಜ್ ವೇಮಲಾ ಅವರ ಸಮಯಪ್ರಜ್ಞೆ, ನಿಸ್ವಾರ್ಥ ಸಹಾಯಕ್ಕೆ ವಿಮಾನದಲ್ಲಿದ್ದ ಪ್ರಯಾಣಿಕರು, ವಿಮಾನ ಸಿಬ್ಬಂದಿಗಳು ಮತ್ತು ಜೀವ ಉಳಿಸಿಕೊಂಡ ವ್ಯಕ್ತಿ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ.

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ(Social media) ಹರಿದಾಡುತ್ತಿದ್ದಂತೆ ನೆಟ್ಟಿಗರು ವೈದ್ಯರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ವೈದ್ಯರ ಕರ್ತವ್ಯವನ್ನು ಮೆಚ್ಚಿ ಮಾತನಾಡಿದ್ದಾರೆ.

Exit mobile version