ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಕಿತ್ತ ಅಜಾಜ್‌ ಪಟೇಲ್

ಮುಂಬೈ ಡಿ 4 : ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್  ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 325 ರನ್‌ಗಳಿಗೆ ಸರ್ವಪತನ ಕಂಡಿದೆ. ನ್ಯೂಜಿಲೆಂಡ್ ಸ್ಪಿನ್ನರ್‌ ಅಜಾಜ್‌ ಪಟೇಲ್ ಹತ್ತು ವಿಕೆಟ್‌ ಕಬಳಿಸಿ, ಟೀಂ ಇಂಡಿಯಾಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂಲಕ, ಒಂದು ಇನ್ನಿಂಗ್ಸ್‌ನಲ್ಲಿ ಹತ್ತು ವಿಕೆಟ್‌ ಪಡೆದ ಇಂಗ್ಲೆಂಡಿನ ಜಿಮ್‌ ಲೇಕರ್‌(1956), ಭಾರತದ ಮಾಜಿ ಸ್ಪಿನ್‌ ದಂತಕತೆ ಕರ್ನಾಟಕದ ಅನಿಲ್‌ ಕುಂಬ್ಳೆ (1999) ಸಾಲಿಗೆ ಏಜಾಜ್‌ ಪಟೇಲ್ ಸೇರ್ಪಡೆಯಾದರು. ಕುಂಬ್ಳೆ ಪಾಕಿಸ್ತಾನದ ವಿರುದ್ದ ಈ ಸಾಧನೆ ಮಾಡಿದ್ದರು.

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಮಳೆಯಿಂದಾಗಿ ತಡವಾಗಿ ಆರಂಭವಾದ ಎರಡನೇ ಟೆಸ್ಟ್ ನಲ್ಲಿ ಆರಂಭಿಕ ಮಯಾಂಕ್ ಅಗರ್ವಾಲ್ ೧೫೦ ರನ್‌ ಗಳಿಸಿ ಮಿಂಚಿದರೆ, ಪ್ರವಾಸಿಗರ ತಂಡದ ಏಜಾಜ್ ಪಟೇಲ್‌ ಹತ್ತೂ ವಿಕೆಟ್‌ ಕಬಳಿಸಿ, ವಿಶೇಷ ಸಾಧನೆ ಮಾಡಿದರು.

ಮಯಾಂಕ್ ಹೊರತಾಗಿ, ಸ್ಪಿನ್‌ ಆಲ್ರೌಂಡರ್‌ ಅಕ್ಷರ್‌ ಪಟೇಲ್‌ ಕೂಡ ಅರ್ಧಶತಕ ದಾಖಲಿಸಿ, ತಂಡವನ್ನು ಸುಸ್ಥಿತಿಯಲ್ಲಿ ತಂದು ನಿಲ್ಲಿಸಿದರು. 

Exit mobile version