ಯೋಗಿ ಆಡಳಿತದಲ್ಲಿ ನಿರುದ್ಯೋಗವೇ ಹೆಚ್ಚು – ಅಖಿಲೇಶ್ ಯಾದವ್

akhilesh yadav

 ಲಕ್ಟೋ:  ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು  ತಾರಕಕ್ಕೇರಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸುವ ಮುನ್ಸೂಚನೆ ನೀಡಿದ ಅಭಿಪ್ರಾಯ ಸಮೀಕ್ಷೆಗಳನ್ನು ಎಸ್ ಪಿ ನಾಯಕ ಅಖಿಲೇಶ್ ಯಾದವ್ ತಿರಸ್ಕರಿಸಿದ್ದಾರೆ. ಇದನ್ನು ಒಪಿನಿಯನ್ ಪೋಲ್ ಎಂದು ಹೇಳುವ ಬದಲು ಅ ಪೋಲ್ ಎಂದು ವರ್ಣಿಸಬೇಕು ಎಂದು ಅವರು ಹೇಳಿದರು. ಯಾವುದೇ ಪ್ರಜ್ಞೆಯಿಲ್ಲದೆ ಯಾ ಮಾಹಿತಿಯ ಆಧಾರದಲ್ಲಿ ಸಮೀಕ್ಷೆ ಸಿದ್ಧಪಡಿಸಲಾಗಿದೆ ಎಂದು ಎಂದು ಕೇಳಿದರು. ಇದು ಯಾವುದೇ ವಾಸ್ತವಿಕ ಪರಿಶೀಲನೆ ಯಿಲ್ಲದೆ ಬಿಜೆಪಿಯನ್ನು ಬೆಂಬಲಿಸಿ ಸಿದ್ಧಪಡಿಸಿದ ಸಮೀಕ್ಷೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟೀಕಿಸಿದರು.

ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಶಾಸಕರಿಗೆ ತಮ್ಮ ಕ್ಷೇತ್ರಗಳಿಗೆ ಹೋಗಲು ಸಹ ಸಾಧ್ಯವಾಗುತ್ತಿಲ್ಲ. ಹಲವು ಶಾಸಕರನ್ನು ತಮ್ಮ ಕ್ಷೇತ್ರದ ಜನರೇ ಓಡಿಸಿದ ಘಟನೆಗಳು ನಡೆದಿವೆ. ಒಂದು ಪಕ್ಷದ ಸಂಸದರು, ಶಾಸಕರು ಮತ್ತು ಸಚಿವರು ಘಟನೆಗಳು ನಡೆದಿವೆ. ಒಂದು ಪಕ್ಷದ ಸಂಸದರು, ಶಾಸಕರು ಮತ್ತು ಸಚಿವರು ಜನರ ನಡುವೆ ಅಸಹಾಯಕರಾಗುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದಕ್ಕಿಂತ ಹೆಚ್ಚಿನ ಪುರಾವೆಗಳು ಬೇಕಿಲ್ಲ. ಆದರೂ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂಬ ಸಮೀಕ್ಷೆಗಳು ಹೇಗೆ ಬರುತ್ತಿವೆ ಎಂದು ಅವರು ಕೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನೂ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಯೋಗಿ ದೊಡ್ಡ ಕಳ್ಳ ಎಂದು ಟೀಕಿಸಿರುವ ಅಖಿಲೇಶ್ ರಾಜ್ಯದಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗ ತೀವ್ರವಾಗಿದೆ. ಜನರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು. ನಕಲಿ ವಿಡಿಯೋ, ಸುಳ್ಳು ಭರವಸೆ, ನಕಲಿ ಜಾಹೀರಾತುಗಳನ್ನು ಮಾಡಿ ಬಿಜೆಪಿ ಜನರನ್ನು ದಾರಿ ತಪ್ಪಿಸುತ್ತಿದೆ. ಉಚಿತ ವಿದ್ಯುತ್ ನೀಡುವ ಯೋಗಿ ಐದು ವರ್ಷಗಳಲ್ಲಿ ಕನಿಷ್ಠ ಒಂದು ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದಾರೆಯೇ ಎಂದು ಅವರು ವಿಮರ್ಶಿಸಿದರು.

Exit mobile version