ಬೆಂಗಳೂರು : ಬೆಂಗಳೂರಿನಲ್ಲಿ(Bengaluru) ಇತ್ತೀಚೆಗೆ ಬಂಧಿತರಾಗಿರುವ ಯುವಕರ ಬಳಿ ಸಿಕ್ಕಿರುವ ದಾಖಲೆಗಳು ಸ್ಪೋಟಕ ಮಾಹಿತಿಯನ್ನು ಹೊರಹಾಕಿವೆ. ಮುಸ್ಲಿಂ ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯಲು ಅಲ್‍ಖೈದಾ(Al-Khaida) ಹೊಸ ಪ್ಲ್ಯಾನ್ ನಡೆಸಿರುವುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.

ಹೌದು, ಅಲ್‍ಖೈದಾ ಉಗ್ರ ಸಂಘಟನೆಗೆ ಸೇರ್ಪಡೆಗೊಳಿಸುವವರು ಪವಿತ್ರ ಕುರಾನ್(Quran) ಗ್ರಂಥವನ್ನೇ ತಿರುಚಿರುವ ಸಂಗತಿ ಬಯಲಾಗಿದೆ. ಈ ತಿರುಚಿದ ಕುರಾನ್ ಗ್ರಂಥದ ಪ್ರತಿಗಳನ್ನು ಯುವಕರಿಗೆ ನೀಡಿ, ಉಗ್ರ ಕೃತ್ಯಗಳನ್ನು ನಡೆಸಲು ಪ್ರಚೋದನೆ(Provoke) ನೀಡಲಾಗುತ್ತಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಬಂಧಿತರಾದ ಇಬ್ಬರು ಉಗ್ರರ ಬಳಿ ತಿರುಚಿದ ಕುರಾನ್ ಗ್ರಂಥದ ಪುಟಗಳು ಪತ್ತೆಯಾಗಿವೆ. ಅಲ್ ಖೈದಾಗೆ ಸೇರ್ಪಡೆ ಮಾಡುವಾತ ಕಳುಹಿಸಿರುವ ದಾಖಲೆಗಳಾಗಿದ್ದು, ಜಿಹಾದ್, ಕೊಲ್ಲುವುದು, ಕಾಫಿರ್, ಷರಿಯತ್, ಸೇರಿದಂತೆ ಪ್ರವಾದಿಗಳು ಬೋಧಿಸಿದ್ದಾರೆ ಎನ್ನಲಾದ ಅನೇಕ ಸಂದೇಶಗಳನ್ನು ದಾಖಲೆಯಲ್ಲಿ ಸೇರಿಸಲಾಗಿದೆ.
ಈ ದಾಖಲೆಗಳನ್ನು ಗಮನಿಸಿದಾಗ ಕುರಾನ್ ಗ್ರಂಥದ ಅನೇಕ ಅಂಶಗಳನ್ನು ತಿರುಚಿ, ಕುರಾನ್ ಪ್ರಕಾರ ಬದುಕಬೇಕು. ಅಲ್ಲಾನಿಗೋಸ್ಕರ ಜಿಹಾದ್ ಮಾಡಬೇಕು ಎಂದು ಪ್ರಚೋದನೆ ನೀಡಲಾಗಿದೆ ಎಂಬ ಸತ್ಯ ಬಯಲಾಗಿದೆ. ಇನ್ನು ಬಂಧಿತ ಉಗ್ರರ(Terrorists) ಮೊಬೈಲ್ ರಿಟ್ರೀವ್ ಮಾಡಲು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಗೆ ರವಾನಿಸಲಾಗಿದೆ. ಹಳೆ ಮೊಬೈಲ್ ಆದ ಕಾರಣ ರಿಟ್ರೀವ್ ಆಗದೆ ಮಾಹಿತಿ ಪತ್ತೆ ಆಗುತ್ತಿಲ್ಲ. ಹೀಗಾಗಿ ಇಡೀ ಪ್ರಕರಣವನ್ನೇ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಕೇಂದ್ರ ಗೃಹ ಇಲಾಖೆಗೆ ರಾಜ್ಯ ಪೊಲೀಸರು ಪತ್ರ ಬರೆದಿದ್ದಾರೆ.
ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಕೇಂದ್ರ ಸರ್ಕಾರ(Central Government) ಕೂಡಾ ಮುಂದಾಗಿದ್ದು, ಹೆಚ್ಚಿನ ತನಿಖೆಗಾಗಿ ಬಂಧಿತ ಉಗ್ರರನ್ನು ದೆಹಲಿಗೆ ಕರೆದುಕೊಂಡು ಹೋಗುವ ಸಾಧ್ಯತೆಗಳಿವೆ.