ಶ್ರಿಲಂಕಾ ಆರ್ಥಿಕ ಬಿಕ್ಕಟ್ಟು ; 24 ಗಂಟೆಯೊಳಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಲಿ ಸಬ್ರಿ!

srilanka

ಅಲಿ ಸಬ್ರಿ(Ali Sabri) ಅವರು 24 ಗಂಟೆಗಳ ಅವಧಿಯೊಳಗೆ ತಮಗೆ ನೀಡಲಾಗಿದ್ದ ಹಣಕಾಸು ಸಚಿವ(Finance Minister) ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಲಿ ಸಬ್ರಿ ಅವರನ್ನು ಏಪ್ರಿಲ್ 04 ರಂದು ಶ್ರೀಲಂಕಾದ(Srilanka) ಹಣಕಾಸು ಸಚಿವರನ್ನಾಗಿ ನೇಮಿಸಲಾಗಿತ್ತು. ಆದ್ರೆ ಬೆಸಿಲ್, ರಾಜಪಕ್ಸೆ ಅವರನ್ನು ಬದಲಾಯಿಸಿದ್ದರು. ಸಿಲೋನ್ ವರ್ಕರ್ಸ್ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಹಿಂಪಡೆದಿದೆ.

ಸಿಲೋನ್ ವರ್ಕರ್ಸ್ ಕಾಂಗ್ರೆಸ್ (CWC) ಅಧ್ಯಕ್ಷ ಸೆಂಥಿಲ್ ತೊಂಡಮಾನ್ ಅವರು ಸರ್ಕಾರಕ್ಕೆ ಬೆಂಬಲವನ್ನು ಹಿಂಪಡೆಯಲು ಪಕ್ಷ ನಿರ್ಧರಿಸಿದೆ ಎಂದು ಹೇಳಿದರು. ಸಿಡಬ್ಲ್ಯುಸಿ ತನ್ನ ನಿರ್ಧಾರವನ್ನು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರಿಗೆ ತಿಳಿಸಿದೆ ಎಂದು ತೊಂಡಮಾನ್ ಕೊಲಂಬೊ ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾರೆ. SLPP ನೇತೃತ್ವದ ಶ್ರೀಲಂಕಾ ಸರ್ಕಾರವನ್ನು 40 ಕ್ಕೂ ಹೆಚ್ಚು ಸಂಸದರು ತೊರೆಯುತ್ತಾರೆ, ಸಂಸತ್ ಸದಸ್ಯ ಅನುರಾ ಪ್ರಿಯದರ್ಶನ ಯಾಪಾ ಅವರು 11 ಸಂಸದರೊಂದಿಗೆ ತಮ್ಮನ್ನು ಪ್ರತ್ಯೇಕ ಸ್ವತಂತ್ರ ಗುಂಪಾಗಿ ಪ್ರತಿನಿಧಿಸಲು ನಿರ್ಧರಿಸಿದ್ದಾರೆ ಎಂದು ಏಪ್ರಿಲ್ 5, ಮಂಗಳವಾರ ಶ್ರೀಲಂಕಾ ಸಂಸತ್ತಿಗೆ ತಿಳಿಸಿದರು.

ಮಾಜಿ ಸಚಿವ ವಿಮಲ್ ವೀರವಾಂಸ ಕೂಡ ಇದೆ ನಿಯಮವನ್ನು ಪರಿಪಾಲಿಸಿದ್ದು, ತಾವು ಮತ್ತು 16 ಸಂಸದರು ಪ್ರತ್ಯೇಕ ಸ್ವತಂತ್ರ ಗುಂಪಾಗಿ ಪ್ರತಿನಿಧಿಸಲು ನಿರ್ಧರಿಸಿರುವುದಾಗಿ ಸಂಸತ್ತಿಗೆ ತಿಳಿಸಿದ್ದಾರೆ. ಶ್ರೀಲಂಕಾದ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಕೂಡ 15 ಎಸ್‌ಎಲ್‌ಎಫ್‌ಪಿ ಸಂಸದರೊಂದಿಗೆ ತಮ್ಮನ್ನು ಪ್ರತ್ಯೇಕ ಸ್ವತಂತ್ರ ಗುಂಪಾಗಿ ಪ್ರತಿನಿಧಿಸಲು ನಿರ್ಧರಿಸಿದ್ದಾರೆ ಎಂದು ಸಂಸತ್ತಿಗೆ ತಿಳಿಸಿರುವುದು ಸ್ಪಷ್ಟವಾಗಿದೆ.

Exit mobile version