ಅನ್ಯಗ್ರಹ ಜೀವಿಗಳು ಅಸ್ಥಿಪಂಜರ ಅಲ್ಲ ಮೆಕ್ಸಿಕೋ ತಜ್ಞರ ವರದಿ ಹಾಗಾದ್ರೆ ಏನಿದು ಇಲ್ಲಿದೆ ಮಾಹಿತಿ

Mexico (North America): ಮೆಕ್ಸಿಕೋ (Mexico) ಸಂಸತ್‌ನಲ್ಲಿ ಪ್ರದರ್ಶನ ಮಾಡಿದ ಅನ್ಯಗ್ರಹ ಜೀವಿಗಳದ್ದು ಎನ್ನಲಾದ ಅಸ್ಥಿಪಂಜರ ಮಾನವ ನಿರ್ಮಿತ ಅಲ್ಲ. ಜೊತೆಗೆ ಆ ಜೀವಿಗಳು ಒಂದು ಕಾಲದಲ್ಲಿ ಬದುಕಿದ್ದವು. ಜೀರ್ಣಾಂಗ ವ್ಯವಸ್ಥೆ ಇತ್ತು. ಎರಡು ಅಸ್ಥಿಪಂಜರಗಳ ಪೈಕಿ ಒಂದರ ದೇಹದೊಳಗೆ ಮೊಟ್ಟೆಗಳಂತಾ ವಸ್ತುಗಳೂ ಸಿಕ್ಕಿದ್ದು ಇವುಗಳ ಡಿಎನ್‌ಎ (DNA) ಭೂಮಿಯ ಮೇಲಿರುವ ಯಾವುದೇ ಜೀವಿಯ ಡಿಎನ್‌ಎ ಜೊತೆಗೂ ಹೊಂದಿಕೆ ಆಗುತ್ತಿಲ್ಲ. ಹಾಗಾಗಿ ಅನ್ಯ ಜೀವಿಗಳ ಇರುವಿಕೆಗೆ ಸಾಕ್ಷ್ಯ ಸಿಕ್ಕಿತಾ? ಮೆಕ್ಸಿಕೋ ತಜ್ಞರ ಸಂಶೋಧನೆ ನಂಬಲರ್ಹವೇ?

ಅನ್ಯಗ್ರಹ ಜೀವಿಗಳ ಅಸ್ಥಿಪಂಜರ ಎನ್ನಲಾದ ವಸ್ತುಗಳನ್ನು ಸಂಸತ್‌ ಭವನದಲ್ಲೇ ಪ್ರದರ್ಶನಕ್ಕೆ ಇಟ್ಟು ವಿಶ್ವದ ಗಮನ ಸೆಳೆದ ಮೆಕ್ಸಿಕೋ ದೇಶ, ಇದೀಗ ಇದೇ ವಿಚಾರಕ್ಕೆ ಮತ್ತೆ ಸುದ್ದಿಯಾಗಿದೆ ಮೆಕ್ಸಿಕೋದ ಪತ್ರಕರ್ತ ಜೈಮೆ ಮುಸ್ಸಾನ್ (Jaime Maussan) ಪ್ರದರ್ಶಿಸಿದ ಈ ಅಸ್ಥಿಪಂಜರ ‘ಮಾನವೇತರ ವಸ್ತು’ ಎಂದು ವೈದ್ಯರು ದೃಢಪಡಿಸಿದ್ದಾರೆ.

ಮೆಕ್ಸಿಕೋ @Mexico ಸಂಸತ್‌ನಲ್ಲಿ ಈ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟ ಬಳಿಕ ಈ ಕುರಿತಾಗಿ ಸಮಗ್ರ ಅಧ್ಯಯನ ನಡೆಸಲು ಮೆಕ್ಸಿಕೋ ವೈದ್ಯರು ನಿರ್ಧರಿಸಿದ್ದರು. ಇದೀಗ ತಮ್ಮ ಅಧ್ಯಯನ ವರದಿಯನ್ನು ವೈದ್ಯರು ನೀಡಿದ್ದು, ಮೆಕ್ಸಿಕೋದ ಪತ್ರಕರ್ತ ಜೈಮೆ ಮುಸ್ಸಾನ್ ನಡೆಸುವ ಯೂಟ್ಯೂಬ್ (YouTube) ಚಾನಲ್‌ಗಳಲ್ಲಿ ಲೈವ್‌ಗೆ ಬಂದಿದ್ದ ತಜ್ಞರು ತಮ್ಮ ಸಂಶೋಧನಾ ವರದಿ ಬಹಿರಂಗ ಮಾಡಿದ್ದಾರೆ.

ಅನ್ಯಗ್ರಹ ಜೀವಿಗಳ ಅಸ್ಥಿಪಂಜರ ಎನ್ನಲಾದ ಈ ವಸ್ತುಗಳನ್ನು ಕೃತಕವಾಗಿ ಯಾರೋ ಜೋಡಣೆ ಮಾಡಿಲ್ಲ. ಮತ್ತು ಈ ಅಸ್ಥಿಪಂಜರದ ತಲೆಬುರುಡೆಯನ್ನೂ ಯಾರೋ ತಯಾರಿಮಾಡಿದಲ್ಲ ಇದು ನೈಸರ್ಗಿಕವಾದ್ದು, ಇದು ಮಾನವ ನಿರ್ಮಿತ ಅಲ್ಲ ಎಂದು ತಜ್ಞರು ತಿಳಿಸಿದ್ದಾರೆ ಹೀಗಾಗಿ ಅಮೆರಿಕದ ನ್ಯೂಯಾರ್ಕ್ ಪೋಸ್ಟ್‌ (New York Post) ಕೂಡಾ ವರದಿ ಮಾಡಿದೆ.

ಅಮೆರಿಕದ #America ಖ್ಯಾತ ಉದ್ಯಮಿ ಎಲಾನ್‌ ಮಸ್ಕ್‌ (Elan Musk) ಅವರು ಕೆಲವು ದಿನಗಳ ಹಿಂದೆ ಈ ಅಸ್ಥಿಪಂಜರವನ್ನು ‘ಕೇಕ್’ ಎಂದು ಲೇವಡಿ ಮಾಡಿದ್ದರು. ಆದರೆ, ವಿಜ್ಞಾನಿಗಳು ಮಾತ್ರ ಈ ವಸ್ತುಗಳ ವಿಚಾರವಾಗಿ ಗಂಭೀರ ಅಧ್ಯಯನ ನಡೆಸಿದ್ದು, ಹಲವು ರೀತಿಯ ಪರೀಕ್ಷೆಗಳನ್ನು ನಡೆಸಿದ್ದಾರೆ. ವೈದ್ಯರ ಬಳಿ ಇರುವ ಎರಡೂ ಅಸ್ಥಿಪಂಜರಗಳ ವೈಜ್ಞಾನಿಕ ಅಧ್ಯಯನ ನಡೆಸಲಾಗಿದ್ದು, ಮೆಕ್ಸಿಕೋ ನೌಕಾ ಪಡೆಯ ಅಧೀನದ ಆರೋಗ್ಯ ವಿಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕ ಬೆನಿಟೆಝ್, ಈ ಕುರಿತಾಗಿ ಹೆಚ್ಚಿನ ಮಾಹಿತಿ ನೀಡಿದ್ಧಾರೆ.

ಅನ್ಯ ಗ್ರಹ ಜೀವಿಗಳ ಅಸ್ಥಿಪಂಜರ ಎನ್ನಲಾಗುತ್ತಿರುವ ಈ ವಸ್ತುಗಳು ಒಂದೇ ಅಸ್ಥಿಪಂಜರದ ಭಾಗಗಳು ಎಂದು ದೃಢಪಡಿಸಿದ್ದು, ಇವು ಮಾನವ ನಿರ್ಮಿತ ವಸ್ತುಗಳಲ್ಲ ಎಂದು ಬೆನಿಟೆಝ್ ಖಚಿತಪಡಿಸಿದ್ದಾರೆ. ಈ ಎರಡು ಅಸ್ಥಿಪಂಜರಗಳ ಪೈಕಿ ಒಂದು ಅಸ್ಥಿಪಂಜರದಲ್ಲಿ ಮಹತ್ವದ ಮಾಹಿತಿಗಳು ಲಭ್ಯವಾಗಿವೆ.

ಆ ಜೀವಿಯು ಒಂದು ಕಾಲದಲ್ಲಿ ಬದುಕಿತ್ತು. ಆ ಜೀವಿಯ ದೇಹದಲ್ಲಿ ಜೈವಿಕ ಕ್ರಿಯೆಗಳು ನಡೆದಿದ್ದವು. ಆ ಜೀವಿ ಜೀರ್ಣಾಂಗ ವ್ಯವಸ್ಥೆ ಹೊಂದಿತ್ತು. ಜೊತೆಯಲ್ಲಿ ಅದರ ದೇಹದಲ್ಲಿ ಮೊಟ್ಟೆಗಳೂ ಇದ್ದವು ಅನ್ನೋ ಸಂಗತಿಯನ್ನು ಅಧ್ಯಯನ ವರದಿ ಬಹಿರಂಗಪಡಿಸಿದೆ. ಈ ಜೀವಿಗಳ ಡಿಎನ್‌ಎ ಪರೀಕ್ಷೆ ಕೂಡಾ ನಡೆಸಲಾಗಿದ್ದು. ಭೂಮಿಯಲ್ಲಿ ಇರುವ 10 ಲಕ್ಷಕ್ಕೂ ಹೆಚ್ಚು ಜೀವಿಗಳ ಡಿಎನ್‌ಎ ಮಾದರಿ ಜೊತೆ ಹೋಲಿಕೆ ಮಾಡಲಾಗಿದ್ದು, ಯಾವುದೇ ಜೀವಿಯ ಡಿಎನ್‌ಎ ಜೊತೆಗೂ ಹೋಲಿಕೆ ಕಂಡು ಬಂದಿಲ್ಲ ಎಂದು ಬೆನಿಟೆಝ್ (Benitez) ಹೇಳಿದ್ದಾರೆ.

ಏನಿದು ಘಟನೆ:
ಕಳೆದ ವಾರ ಮೆಕ್ಸಿಕೋ ಸಂಸತ್‌ನಲ್ಲಿ ಪತ್ರಕರ್ತ ಜೈಮೆ ಮುಸ್ಸಾನ್ ಎರಡು ಪೆಟ್ಟಿಗೆಗಳನ್ನು ಪ್ರದರ್ಶನ ಮಾಡಿದ್ದರು. ಇದರಲ್ಲಿ ಇರುವ ಎರಡು ಜೀವಿಗಳ ಅಸ್ಥಿಪಂಜರಗಳು ಅನ್ಯ ಗ್ರಹ ಜೀವಿಗಳ ಅವಶೇಷ ಎಂದು ಅವರು ವಾದಿಸಿದ್ದರು. ಮೂರು ಬೆರಳುಗಳು ಇದ್ದ ಈ ಜೀವಿಯ ಅಸ್ಥಿಪಂಜರ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ಅನ್ಯಗ್ರಹ ಜೀವಿಗಳ ಇರುವಿಕೆಗೆ ಇದೇ ಸಾಕ್ಷಿ ಎಂದು ಹೇಳಿದ್ದ ಪತ್ರಕರ್ತ ಜೈಮೆ, 2017ರಲ್ಲಿ ಪೆರು ದೇಶದಲ್ಲಿ ಇವು ಸಿಕ್ಕವು ಎಂದು ಹೇಳಿದ್ದ.

ಪೆರು ದೇಶವು ಅನ್ಯಗ್ರಹ ಜೀವಿಗಳ ವಿಚಾರದಲ್ಲಿ ಮೊದಲಿನಿಂದಲೂ ಭಾರೀ ಸುದ್ದಿಯಲ್ಲಿದೆ. ಇಲ್ಲಿನ ನಾಸ್ಕಾ ಪ್ರಾಂತ್ಯದಲ್ಲಿ ಇರುವ ರಚನೆಗಳು ಆಗಸದಲ್ಲಿ ಪಕ್ಷಿ ನೋಟ ಮಾಡಿದಾಗ ಮಾತ್ರ ರಚನೆ ಮಾಡಲು ಸಾಧ್ಯವಾಗುವಂಥಾ ಕಲಾಕೃತಿಗಳಾಗಿವೆ. ಕಲ್ಲಿನಿಂದ ನಿರ್ಮಿಸಿದ ಈ ಕಲಾಕೃತಿಗಳಿಗೂ ಅನ್ಯ ಗ್ರಹ ಜೀವಿಗಳು ನಂಟು ಇದೆ ಎನ್ನುವ ವಾದ ಹಲವು ದಶಕಗಳಿಂದಲೂ ಇದೆ.

ಮೇಘಾ ಮನೋಹರ ಕಂಪು

Exit mobile version