ಬೆಲ್ಲದಿಂದ ಅದ್ಬುತ ಆರೋಗ್ಯ ಗುಣಗಳು

ಬೆಲ್ಲ ತಿನ್ನುವುದರಿಂದ ರಕ್ತ ಹೀನತೆ ಸಮಸ್ಯೆಯನ್ನುನಿವಾರಿಸಬಹುದು. ಬೆಲ್ಲ ರಕ್ತವನ್ನು ಶುದ್ಧೀಕರಿಸುತ್ತದೆ. ಕಫ  ಕೆಮ್ಮು  ಹೆಚ್ಚಾದಾಗ ಬೆಲ್ಲವನ್ನು ಈರುಳ್ಳಿ ಜೊತೆ ಜಗಿದು ತನ್ನುವುದರಿಂದ ಕಫ ಕರಗಿ ಉಸಿರಾಟ ನಿರಾಳವಾಗುತ್ತದೆ.

ಒಂದು  ತುಂಡು ಬೆಲ್ಲವನ್ನು ನಿತ್ಯ ತಿನ್ನುವುದರಿಂದ ತೂಕ ನಿಯಂತ್ರಣ ಮಾಡಬಹುದು.  ಹೊಟ್ಟೆ ಹಸಿವಾದಾಗ  ಬೆಲ್ಲ ತಿಂದು ನೀರು ಕುಡಿದರೆ  ಹಸಿವು ನಿವಾರಣೆಯಾಗಿ ಹೊಟ್ಟೆ ತಂಪಾಗುತ್ತದೆ . ಏನೇನೋ ತಿನ್ನಬೆಕೆನಿಸುವುದಿಲ್ಲ.

ರಕ್ತನಾಳದಲ್ಲಿ ರಕ್ತ ಪರಿಚಲನೆ ಸರಾಗವಾಗಿ  ನಡೆಯುವಂತೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಅಸ್ತಮಾ ಕಾಯಿಲೆ ಇರುವವರು ನಿತ್ಯ  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲ  ತಿನ್ನುವುದರಿಂದ ಒಳ್ಳೆಯ ಪರಿಣಾಮವನ್ನು ಕಾಣಬಹುದು.

ಇದರಲ್ಲಿ ಕಬ್ಬಿಣದಂಶ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ದೇಹದಲ್ಲಿನ ಉಷ್ಣಾಂಶವನ್ನು ಹೋಗಲಾಡಿಸಲು ಬೆಲ್ಲವನ್ನು ಸೇವಿಸಬಹುದು.

Exit mobile version