ಅಮೆಜಾನ್‌ನಿಂದ ವಿದ್ಯಾರ್ಥಿಗಳಿಗೆ ಹೊಸ ಸೌಲಭ್ಯ

ದೆಹಲಿ, ಜ. 01: ಭಾರತಕ್ಕೆ ಭೇಟಿ ನೀಡಿದ ಒಂದು ವರ್ಷದ ಬಳಿಕ ಅಮೆಜಾನ್​ ಸಿಇಓ ಜೆಫ್​ ಬೆಜೋಸ್​​ ತನ್ನ ಭವಿಷ್ಯದ ಇಂಜಿನಿಯರ್​ ಕಾರ್ಯಕ್ರಮವನ್ನು ದೇಶದಲ್ಲಿ ಪ್ರಸ್ತುತಪಡಿಸುತ್ತಿದೆ.‌

ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಕೋಡಿಂಗ್​ ಹಾಗೂ ಇತರೆ ಕಂಪ್ಯೂಟರ್​ ಕೌಶಲ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಸಹಕಾರಿಯಾಗಲಿದೆ.

ಈ ವೃತ್ತಿಪರ ಕೌಶಲ್ಯದ ಕಾರ್ಯಕ್ರಮವನ್ನು ಪ್ರಸ್ತುತ ಅಮೆಜಾನ್​ ಅಮೆರಿಕಾದಲ್ಲಿ ನಡೆಸುತ್ತಿದೆ. ಅಮೆಜಾನ್,​ ಭಾರತದಲ್ಲಿ ಅಮೆಜಾನ್​ ಫ್ಯೂಚರ್​ ಇಂಜಿನಿಯರ್​ ಕಾರ್ಯಕ್ರಮವನ್ನು ಮುನ್ನೆಡಸಲು ವ್ಯವಸ್ಥಾಪಕರನ್ನು ಹುಡುಕುತ್ತಿದೆ.

ನಾವು ಭಾರತದಲ್ಲಿ ಅಮೆಜಾನ್​ ಫ್ಯೂಚರ್​ ಇಂಜಿನಿಯರ್​ ಕಾರ್ಯಕ್ರಮವನ್ನ ಪ್ರಾರಂಭಿಸಲು ಹಾಗೂ ನಿರ್ವಹಿಸಬಲ್ಲ ನಾಯಕನ ಹುಡುಕಾಟದಲ್ಲಿದ್ದೇವೆ. ಜಾಬ್​ ಪೋಸ್ಟ್ ವೆಬ್​ಸೈಟ್​ ಉದ್ಯೋಗ ಪಟ್ಟಿಯ ಪ್ರಕಾರ 2021ರಲ್ಲಿ ಕಂಪನಿಯು ಈ ಕಾರ್ಯಕ್ರಮವನ್ನ ಪ್ರಾರಂಭಿಸಲು ಯೋಜಿಸುತ್ತಿದೆ.

ಈ ಪಟ್ಟಿಯಲ್ಲಿ ಅಮೆಜಾನ್​ ಇಂಡಿಯಾದ ಕಾರ್ಪೋರೇಟ್​ ಸಾಮಾಜಿಕ ಜವಾಬ್ದಾರಿ ತಂಡದ ಭಾಗವಾಗಿ ಅಮೆಜಾನ್​ ಫ್ಯೂಚರ್​ ಇಂಜಿನಿಯರ್​ ಕಾರ್ಯಕ್ರಮವನ್ನ ಮುನ್ನೆಡಸಲು ಪೂರ್ಣ ಸಮಯದ ಗುತ್ತಿಗೆ ಸ್ಥಾನ ಎಂದು ಉಲ್ಲೇಖಿಸಲಾಗಿದೆ.

Exit mobile version