“ನಾನು ನಿಮ್ಮ ಮನಸ್ಸಿಗೆ ನೋವು ಮಾಡಿದ್ದರೆ, ಕ್ಷಮಿಸಿಬಿಡಿ” : ಅಮೀರ್ ಖಾನ್

Amir Khan

ದೆಹಲಿ : ‘ಅಗರ್ ಮೈನೆ ದಿಲ್ ದುಖಾಯಾ ಹೈ ತೋ ಮಾಫ್‍ಕರ್ನಾ’ (ನಾನು ನಿಮ್ಮ ಮನಸ್ಸಿಗೆ ನೋವು ಮಾಡಿದ್ದರೆ, ಕ್ಷಮಿಸಿಬಿಡಿ) ಎಂದು ಬಾಲಿವುಡ್(Bollywood) ನಟ(Actor) ಅಮೀರ್ ಖಾನ್(Amir Khan) ಕ್ಷಮೆ ಕೇಳಿದ್ದಾರೆ. ಅವರ ಲಾಲ್ ಸಿಂಗ್ ಚಡ್ಡಾ(Lal Singh Chadda) ಚಿತ್ರವನ್ನು ಬಹಿಷ್ಕರಿಸಬೇಕೆಂದು ದೇಶದಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.


ಇನ್ನು ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ನಾಲ್ಕು ವರ್ಷಗಳ ನಂತರ ಅಮೀರ್ ಖಾನ್ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅದ್ವೈತ್‍ ಚಂದನ್‍ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಎರಿಕ್‍ ರೋತ್ ಮತ್ತು ಅತುಲ್‍ ಕುಲಕರ್ಣಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಲಾಲ್ ಸಿಂಗ್ ಚಡ್ಡಾ ಚಿತ್ರ ಈ ವರ್ಷದ ಅತ್ಯಂತ ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಇದು ಆಗಸ್ಟ್ 11, 2022 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಆದರೆ ಅಮೀರ್ ಖಾನ್, ಪಿಕೆ(PK) ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಹೇಳನ ಮಾಡಿದ್ದಾರೆ.

ಹಿಂದೂಗಳ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವವರಿಗೆ ತಕ್ಕ ಪಾಠ ಕಲಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಲಾಲ್ ಸಿಂಗ್ ಚಡ್ಡಾಚಿತ್ರ ಬಹಿಷ್ಕರಕ್ಕೆ(Boycott) ಕರೆ ನೀಡಿ ಅಭಿಯಾನ ಶುರುವಾಗಿದೆ. ಇದೀಗ ಟ್ರೋಲಿಂಗ್ ಬಗ್ಗೆ ಅಮೀರ್ ಖಾನ್ ಮಾತನಾಡುತ್ತಾ, ಯಾರಿಗಾದರೂ ನೋವುಂಟು ಮಾಡಿದ್ದರೆ ವಿಷಾಧಿಸುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ. ದೆಹಲಿಯಲ್ಲಿ(Delhi) ನಡೆದ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಮೀರ್ ಖಾನ್, “ನಾನು ನನ್ನ ಬೆರಳುಗಳನ್ನು ಅಡ್ಡಲಾಗಿ ಇಟ್ಟುಕೊಂಡು ಸರ್ವಶಕ್ತನನ್ನು ಪ್ರಾರ್ಥಿಸುತ್ತಿದ್ದೇನೆ ಮತ್ತು ನನ್ನ ಪ್ರೇಕ್ಷಕರಲ್ಲಿ ನನಗೆ ನಂಬಿಕೆ ಇದೆ.

ಅಗರ್ ಮೈನೆ ಕಿಸಿ ಕಾ ದಿಲ್ ದುಖಾಯಾ ಹೈ ಕಿಸಿ ಚೀಜ್ ಸೆ ತೋ ಮುಝೆಉಸ್ ಬಾತ್ ಕಾ ದುಖ್ ಹೈ, ಮೈನ್ ಕಿಸಿ ಕಾ ದಿಲ್ ನಹೀ ದುಖಾನಾ ಚಾಹ್ತಾ ಹನ್. ಜಿನ್‍ಜಿಂಕೋ ಫಿಲ್ಮ್ ನಹೀ ದೇಖನಿ ಹೈ, ಮೈನ್‍ಉಸ್ ಬಾತ್ ಕಿ ಇಜ್ಜತ್‍ಕರುಂಗಾ, ಔರ್‍ಕ್ಯಾಕೆಹ್ ಸಕ್ತೇ ಹೈ (ನಾನು ಯಾರೊಬ್ಬರ ಹೃದಯವನ್ನು ನೋಯಿಸಿದ್ದರೆ, ಅದಕ್ಕಾಗಿ ನನಗೆ ದುಃಖವಾಗುತ್ತದೆ. ನಾನು ಯಾರನ್ನೂ ನೋಯಿಸಲು ಬಯಸುವುದಿಲ್ಲ. ಚಲನಚಿತ್ರವನ್ನು ನೋಡಲು ಬಯಸದವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ನಾನು ಇನ್ನೇನು ಹೇಳಲಿ)ಎಂದಿದ್ದಾರೆ.

Exit mobile version