ಚೀನಾ ಮತ್ತು ಜಾಕಿರ್ ನಾಯ್ಕ್ ನಿಂದ ರಾಜೀವ್ ಗಾಂಧಿ ಫೌಂಡೇಶನ್ ಅನುದಾನ ಪಡೆದುಕೊಂಡಿದೆ : ಅಮಿತ್‌ ಶಾ

New Delhi : ರಾಜೀವ್ ಗಾಂಧಿ ಫೌಂಡೇಶನ್ (Amit Shah Strikes Congress) ಚೀನಾ ರಾಯಭಾರ ಕಚೇರಿ ಮತ್ತು ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್‌ನಿಂದ ಅನುದಾನವನ್ನು ಪಡೆದಿದೆ. 

ಆದ್ದರಿಂದ ಅದರ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah Strikes Congress) ಆರೋಪಿಸಿದ್ದಾರೆ.

ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಗೆ ಪ್ರತಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ (Congress) ಅಡ್ಡಿಪಡಿಸಿತು.

ರಕ್ಷಣಾ ಸಚಿವರು ಈ ವಿಷಯದ ಬಗ್ಗೆ ಹೇಳಿಕೆ ನೀಡುತ್ತಾರೆ ಎಂದು ಹೇಳಿದ ನಂತರವೂ ಕಾಂಗ್ರೆಸ್ ಪ್ರಶ್ನೋತ್ತರ ಅವಧಿಗೆ ಅಡ್ಡಿಪಡಿಸಿತು.

ನಂತರ ನಾನು ಪ್ರಶ್ನೋತ್ತರ ಪಟ್ಟಿಯನ್ನು ನೋಡಿದೆ. ಪ್ರಶ್ನೆ ಸಂಖ್ಯೆ 5 ನೋಡಿದ ನಂತರ ನನಗೆ ಕಾಂಗ್ರೆಸ್ನವರ ಆತಂಕ ಅರ್ಥವಾಯಿತು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. ರಾಜೀವ್ ಗಾಂಧಿ ಫೌಂಡೇಶನ್ (ಆರ್‌ಜಿಎಫ್) ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂಪಾಯಿ ಪಡೆದಿದೆ.

ಇದನ್ನೂ ಓದಿ : https://vijayatimes.com/tawang-border-dispute/

ಇದು ಎಫ್‌ಸಿಆರ್‌ಎ ನಿಯಮಗಳಿಗೆ ಅನುಸಾರವಾಗಿಲ್ಲದ ಕಾರಣ ಅದರ ನೋಂದಣಿಯನ್ನು ರದ್ದುಗೊಳಿಸಲಾಗಿದೆ. 2005-07ರ ಅವಧಿಯಲ್ಲಿ ಚೀನಾ ರಾಯಭಾರ ಕಚೇರಿಯಿಂದ ಪಡೆದ 1.35 ಕೋಟಿ ರೂ.ಗಳನ್ನು ರಾಜೀವ್ ಗಾಂಧಿ ಫೌಂಡೇಶನ್ ಏನು ಮಾಡಿದೆ ಎಂದು ಕಾಂಗ್ರೆಸ್ ಉತ್ತರಿಸಬೇಕು?

ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್  ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್ ಅವರ ಸಂಸ್ಥೆಯಿಂದ 50 ಲಕ್ಷ ರೂ.ಗಳನ್ನು ಏಕೆ ತೆಗೆದುಕೊಂಡಿತು? ಎಂಬುದನ್ನು ಕಾಂಗ್ರೆಸ್ ದೇಶಕ್ಕೆ ತಿಳಿಸಬೇಕು ಎಂದು ಸವಾಲು ಹಾಕಿದರು.

ಎರಡು ತಿಂಗಳ ಹಿಂದೆ, ಗೃಹ ವ್ಯವಹಾರಗಳ ಸಚಿವಾಲಯವು ರಾಜೀವ್‌ ಗಾಂಧಿ ಫೌಂಡೇಶನ್‌ನ ಎಫ್‌ಸಿಆರ್‌ಎ ಪರವಾನಗಿಯನ್ನು ರದ್ದುಗೊಳಿಸಿತು.

ಕೇಂದ್ರ ಸರ್ಕಾರದ (Central Government) ಈ ಕ್ರಮವನ್ನು ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸಿತು. ಸಂಸತ್ತಿನಲ್ಲಿ ಈ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್‌ ಸಿದ್ದತೆ ಮಾಡಿಕೊಂಡಿದೆ.

ಇನ್ನು ರಾಜೀವ್‌ ಗಾಂಧಿ ಫೌಂಡೇಶನ್‌ ಮಾಜಿ ಪ್ರಧಾನಿ ಅವರ ಹೆಸರಿನ ಸಾಮಾಜಿಕ ಸಂಸ್ಥೆಯಾಗಿದ್ದು, ಅವರ ಪತ್ನಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅದರ ಅಧ್ಯಕ್ಷರಾಗಿದ್ದಾರೆ.
Exit mobile version