Bengaluru: ಕಳೆದ ಕೆಲ ದಿನಗಳಿಂದ ಎಲ್ಲರ ಗಮನ ಸೆಳೆದಿದ್ದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್ ಡ್ರೈವ್ (Pen Drive) ಪ್ರಕರಣ ಇದೀಗ ವಿಭಿನ್ನ ರೀತಿಯಲ್ಲಿ ತಿರುವನ್ನು ಪಡೆದ ಬೆನ್ನಲ್ಲೇ ಲೈಂಗಿಕ ದೌರ್ಜನ್ಯ (sexual assault) , ಅಪಹರಣ ಪ್ರಕರಣದಲ್ಲಿ ಆರೋಪಯಾಗಿದ್ದ ರೇವಣ್ಣನನ್ನು ನಾವು ಬಂಧಿಸಿದ್ದೇವೆ. ಬ್ರಿಜ್ ಭೂಷಣ್, ಉನ್ನಾವೋ, ಹತ್ರಾಸ್ ಅತ್ಯಾಚಾರಿಗಳನ್ನು(Brij Bhushan, Unnao, Hatras rapists) ಬಂಧಿಸುವ ಧಮ್ಮು, ತಾಕತ್ತು ನಿಮಗಿದೆಯೇ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ (Narendra Modi) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಈ ಕುರಿತಾಗಿ ಸಾಮಾಜಿಕ ಜಾಲತಾಣ (Social Media ) ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ರೇವಣ್ಣ (Revanna) ಅವರ ಮೇಲಿನ ಲೈಂಗಿಕ ದೌರ್ಜನ್ಯ (sexual assault) , ಸಂತ್ರಸ್ತೆಯೆ ಅಪಹರಣದ ಆರೋಪ ಪ್ರಕರಣವನ್ನು ವಿಶೇಷ ತನಿಖಾ ದಳದ ಮೂಲಕ ನಿಷ್ಪಕ್ಷಪಾತ, ಪಾರದರ್ಶಕ ತನಿಖೆಗೆ ಒಳಪಡಿಸಿ ನೊಂದವರ ಕಣ್ಣೀರು ಒರೆಸುವ ಪ್ರಯತ್ನವನ್ನು ಒಂದು ಸರ್ಕಾರವಾಗಿ ನಾವು ಮಾಡಿದ್ದೇವೆ. ಮಹಿಳೆಯರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಪ್ರಧಾನಿ ಮೋದಿ (Modi) ಅವರೇ ಈಗ ನಿಮ್ಮ ಸರದಿ . ಕೇವಲ ಹೇಳಿಕೆ ನೀಡುವುದಲ್ಲ ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಎಂದು ಹೇಳಿದ್ದಾರೆ.
ಈ ನಡುವೆ ಬೆಳಗಾವಿಯಲ್ಲಿ (Belgaum) ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಿಎಂ (CM) , ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ (BJP) ಹಾಗೂ ಆರ್ ಎಸ್ ಎಸ್ (RSS) ಹೇಳುತ್ತಿದ್ದು, ಇವರಿಂದ ಸಂವಿಧಾನ ಉಳಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಹಾಗಾಗಿ ಈ ಚುನಾವಣೆ ನಮ್ಮ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, ಬಿಜೆಪಿ 200 ಸ್ಥಾನ ಗೆಲ್ಲುವುದೂ ಕಷ್ಟವಿದೆ ಎಂದು ಸಾಬೀತು ಪಡಿಸುವ ಹೊಣೆ ಮತದಾರರ ಮೇಲಿದೆ ಎಂದಿದ್ದಾರೆ.