New delhi : ನಿಮ್ಮ ಅಜ್ಜಿಯ ಕಾಲಕ್ಕೂ ಮೊದಲು ಮಾಡಿದ ನಿಯಮಗಳನ್ನು ಸಂಸತ್ ಅನುಸರಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಕಾಂಗ್ರೆಸ್ (congress) ನಾಯಕ ರಾಹುಲ್ ಗಾಂಧಿ (Rahul gandhi) ಹೇಳಿಕೆಗೆ ತಿರುಗೇಟು (Amit Shah Vs Rahul gandhi) ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಸಂಸತ್ತಿನ ಚರ್ಚೆಯು,
ನಿಯಮಗಳು ನಿಮ್ಮ ಅಜ್ಜಿಯ ಕಾಲಕ್ಕೂ ಮುನ್ನವೇ ಮಾಡಿರುವುದು, ಅದನ್ನು ಸಂಸತ್ ಇಂದಿಗೂ ಅನುಸರಿಸುತ್ತದೆ. ಸಂಸತ್ತಿನಲ್ಲಿ ನಿಯಮಗಳ ಆಧಾರದ ಮೇಲೆ ಚರ್ಚೆಗಳು ನಡೆಯುತ್ತವೆ ಮತ್ತು ಈ ನಿಯಮಗಳನ್ನು ನಾವು ಮಾಡಿಲ್ಲ!
ಅದು ಹಿಂದಿನಿಂದಲೂ ಇದೆ ಎಂದು ಹೇಳಿದರು. ಅಮಿತ್ ಶಾ ಅವರು ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಲು ವಿರೋಧ ಪಕ್ಷಗಳನ್ನು ದೂಷಿಸಿದರು.
ನಿಯಮಗಳ ಆಧಾರದ ಮೇಲೆ ಸಂಸತ್ತಿನಲ್ಲಿ ಚರ್ಚೆಗಳು ನಡೆಯುತ್ತವೆ. ಇದು ರಸ್ತೆಗಳಲ್ಲಿ ಸಂಭವಿಸುವಂತೆ ನಡೆಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ತಿರುಗೇಟು ನೀಡಿದರು.
ಇದನ್ನೂ ಓದಿ : https://vijayatimes.com/congress-assembly-election-list/
ರಾಹುಲ್ ಗಾಂಧಿ ಅವರು, ಸಂಸತ್ತಿನಲ್ಲಿ ವಿರೋಧ ಪಕ್ಷದ ಸಂಸದರ ಮೈಕ್‌ಗಳನ್ನು ಸ್ವಿಚ್ ಆಫ್ ಮಾಡಲಾಗಿತ್ತು ಎಂದು ಇತ್ತೀಚೆಗೆ ಬ್ರಿಟನ್‌ನಲ್ಲಿ (Britain) ಆರೋಪಿಸಿ ನೀಡಿದ ಹೇಳಿಕೆಯನ್ನು
ವಿರೋಧಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು, ಈ ಹೇಳಿಕೆಯನ್ನು ನೇರವಾಗಿ ರಾಹುಲ್ ಗಾಂಧಿಗೆ (Amit Shah Vs Rahul gandhi) ನೀಡಿದ್ದಾರೆ.
ಲಂಡನ್‌ನಲ್ಲಿ ತಮ್ಮ ಭಾಷಣವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಕೋಣೆಯಲ್ಲಿ ಸರಿಯಿಲ್ಲದ ಮೈಕ್ ಅನ್ನು ಬಳಸಿದರು.
ಅವರ ಮೈಕ್ರೋಫೋನ್ (Microphone) ಅನ್ನು ಸ್ವೀಚ್ ಆಫ್ ಮಾಡಲಾಗಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ಆಲಿಸಿದ ಬಿಜೆಪಿ, ರಾಹುಲ್ ಗಾಂಧಿ ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿತು.
ಇದನ್ನೂ ಓದಿ : https://vijayatimes.com/papaya-fruit-benefits/
ರಾಹುಲ್ ಗಾಂಧಿ ಅವರ ಆರೋಪವನ್ನು ತಳ್ಳಿಹಾಕಿದ ಅಮಿತ್ ಶಾ, ಚುನಾವಣಾ ಪೈಪೋಟಿ ಅನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಿಯಾಳಿಸಿದರು.
ಭಾರತ್ ಜೋಡೋ ಯಾತ್ರೆಯ (Bharat Jodo Yatra) ನಂತರವೂ ಮೂರು ಈಶಾನ್ಯ ರಾಜ್ಯಗಳಲ್ಲಿ (ನಾಗಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ) ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ಎಂದು ಹೇಳುವ ಮುಖೇನ ವ್ಯಂಗ್ಯವಾಡಿದರು.