ಅಪ್ಪು ಪುನೀತ್ ಅವರ ಅತ್ಯಂತ ಆಕರ್ಷಕ ಗುಣವೆಂದರೆ ಅವರ ಪ್ರೀತಿಯ ನಗು : ಅಮಿತಾಬ್ ಬಚ್ಚನ್

Bengaluru : ಗಂಧದಗುಡಿ ಸಿನಿಮಾ ವೀಕ್ಷಿಸಿದ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜಕುಮಾರ್(Amitabh Remembers Appu Smile) ಅವರ ಕುರಿತು ಮನ ಮುಟ್ಟುವಂತ ಮಾತುಗಳನ್ನು ಆಡಿದ್ದಾರೆ.

ವೀಡಿಯೊ ಮಾಡಿ ಮಾತನಾಡಿದ ನಟ ಅಮಿತಾಬ್ ಬಚ್ಚನ್ ಅವರು, ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿ ಮಾತು ಶುರು ಮಾಡಿದರು.

ಪುನೀತ್ ಅವರ ಅತ್ಯಂತ ಆಕರ್ಷಕ ಗುಣವೆಂದರೆ(Amitabh Remembers Appu Smile) ಅವರ ಪ್ರೀತಿಯ ನಗು, ಅದರ ಮೂಲಕವೇ ಅವರು ಎಲ್ಲರೊಂದಿಗೆ ಅದ್ಬುತ ಬಾಂಧವ್ಯ ಹೊಂದಿದ್ದರು ಮತ್ತು ಅಗಾಧ ಪ್ರೀತಿಯ ಅಭಿಮಾನಿಗಳನ್ನು ಪಡೆದಿದ್ದಾರೆ.

ಈ ವೀಡಿಯೋ ನೋಡಿದ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರು ತಮ್ಮ ಅಧಿಕೃತ ಟ್ವಿಟರ್‌ನಲ್ಲಿ(Twitter) ವೀಡಿಯೊವನ್ನು ಹಂಚಿಕೊಂಡು,

‘ಶ್ರೀ. ಅಮಿತಾಬ್ ಬಚ್ಚನ್ ಅವರೇ, ನಿಮ್ಮ ಈ ಭಾವನಾತ್ಮಕ ಮಾತುಗಳಿಗೆ ಮತ್ತು ವಿಶೇಷ ಸಂದೇಶಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/108-feet-kempegowda-statue/

ವಿಡಿಯೋದಲ್ಲಿ ಅಮಿತಾಬ್, ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದಗುಡಿ ಬಗ್ಗೆಯೂ ಮಾತನಾಡಿದ್ದಾರೆ.

ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಗಂಧದಗುಡಿ ಚಿತ್ರದಲ್ಲಿ ಪುನೀತ್ ಅವರ ಪ್ರಕೃತಿ ಕಾಳಜಿ, ನಟನೆ, ಸಂದೇಶ ಎಲ್ಲವೂ ಗಮನಸೆಳೆದಿದೆ.

“ಪುನೀತ್ ಅವರು ಪ್ರಕೃತಿಯೊಂದಿಗಿನ ನಮ್ಮ ಒಡನಾಟವನ್ನು ಶ್ರೀಮಂತಗೊಳಿಸಿ ಅದರೊಂದಿಗೆ ಸಾಮರಸ್ಯದಿಂದ ಬದುಕುವ ಅಗತ್ಯವನ್ನು ಜನರಿಗೆ ನೆನಪಿಸುತ್ತಾರೆ. ಇದು ನಮ್ಮ ಮಕ್ಕಳಿಗಾಗಿ ಮಾಡಿರುವ ಸಿನಿಮಾ.

ಅಮೋಘವರ್ಷ ಜೆಎಸ್ ನಿರ್ದೇಶನದ ಈ ಚಿತ್ರವು ಕರ್ನಾಟಕದ ವನ್ಯಜೀವಿಗಳ ಸಾಕ್ಷ್ಯಚಿತ್ರವಾಗಿದೆ.

ಚಿತ್ರದಲ್ಲಿ, ಪುನೀತ್ ಮತ್ತು ನಿರ್ದೇಶಕರು ರಾಜ್ಯದ ನಾನಾ ಅರಣ್ಯ ಪ್ರದೇಶಗಳಲ್ಲಿ ಪ್ರಯಾಣಸಿ ಅದ್ಬುತವಾಗಿ ಚಿತ್ರಿಸಿದ್ದಾರೆ. ಶ್ರೀಮಂತ ಜೈವಿಕ ವೈವಿಧ್ಯತೆಯನ್ನು ಅನ್ವೇಷಿಸುತ್ತಾರೆ” ಎಂದು ಹೇಳುವ ಮುಖೇನ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.

ಗಂಧದಗುಡಿ ಚಿತ್ರ ಇದೇ ಅಕ್ಟೋಬರ್‌ 28 ರಂದು ಯಶಸ್ವಿಯಾಗಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಬಿಡುಗಡೆಯ ಮೊದಲ ದಿನದಿಂದ ಇವತ್ತಿನ ಪ್ರದರ್ಶಗಳಲ್ಲಿ ಕೂಡ ಹಲವಾರು ಅಭಿಮಾನಿಗಳು ಚಿತ್ರ ವೀಕ್ಷಿಸಿ, ಪುನೀತ್ ಅವರನ್ನು ಸ್ಮರಿಸಿ ಭಾವುಕರಾಗಿದ್ದಾರೆ.

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇತ್ತೀಚೆಗೆ ತಮ್ಮ ಟ್ವಿಟ್ಟರ್‌(Twitter) ಖಾತೆಯಲ್ಲಿ ಗಂಧದ ಗುಡಿಗೆ ಹೆಚ್ಚಿನ ಮಕ್ಕಳು ಮುಂದೆ ಬರಲು ಮತ್ತು ಚಲನಚಿತ್ರವನ್ನು ವೀಕ್ಷಿಸಲು,

https://twitter.com/Ashwini_PRK/status/1590352221388279808?s=20&t=HLBmTj-YyXUVpRpxseIlHw

ಎಲ್ಲಾ ಪ್ರದರ್ಶನಗಳಿಗಾಗಿ ಕರ್ನಾಟಕದಾದ್ಯಂತ ಕೆಲವು ದಿನಗಳವರೆಗೆ ಟಿಕೆಟ್ ದರವನ್ನು ಕಡಿತಗೊಳಿಸಲಾಗುವುದು ಎಂದು ಘೋಷಿಸಿದರು.

ಈ ಕ್ರಮವನ್ನು ಸ್ವಾಗತಿಸಿದ ಅಪ್ಪು ಅವರ ಅಭಿಮಾನಿಗಳು, ಪುನೀತ್ ಅವರ ಚಿತ್ರವನ್ನು ನೋಡಲು ತಮ್ಮ ಕುಟುಂಬ, ಮಕ್ಕಳ ಸಮೇತ ಮುಂದಕ್ಕೆ ಚಿತ್ರಮಂದಿರಕ್ಕೆ ಹಾಜರಾಗುತ್ತಿದ್ದಾರೆ.

ಹೆಚ್ಚಿನ ಮಕ್ಕಳು ಗಂಧದ ಗುಡಿಯನ್ನು ವೀಕ್ಷಿಸಬೇಕು ಎಂಬುದು ಪುನೀತ್ ಅವರ ಆಶಯವಾಗಿತ್ತು ಮತ್ತು ಅದನ್ನು ಸಾಧ್ಯವಾಗಿಸುವ ಸಲುವಾಗಿ ವಿತರಕರು, ಪ್ರದರ್ಶಕರು ಮತ್ತು ಚಿತ್ರತಂಡದೊಂದಿಗೆ ಚರ್ಚಿಸಿದ ನಂತರ ಇದೀಗ ಟಿಕೆಟ್ ದರವನ್ನು ಕಡಿತಗೊಳಿಸಲಾಗಿದೆ ಎಂದು ಅಶ್ವಿನಿ ಅವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ : https://vijayatimes.com/childrens-loves-gandadagudi/

ಕರ್ನಾಟಕದಾದ್ಯಂತ ಸಿಂಗಲ್ ಸ್ಕ್ರೀನ್‌ಗಳಲ್ಲಿ ಚಿತ್ರದ ಟಿಕೆಟ್ ದರ ರೂ. 56, ಮತ್ತು ರೂ. ಮಲ್ಟಿಪ್ಲೆಕ್ಸ್‌ಗಳಿಗೆ 112 ರೂ. ಇದೆ. ಈ ದರ ಅನ್ವಯ ಕೇವಲ 10ನೇ ದಿನಾಂಕದವರೆಗೂ ಮಾತ್ರ.

Exit mobile version