ಬೆಂಗಳೂರಿಗೆ ಅಮಿತ್ ಷಾ ಭೇಟಿ, ಮಂತ್ರಿಗಳ ಪರೀಕ್ಷೆಗೆ ಸಿದ್ದರಾದ ಬಿಜೆಪಿ ಚಾಣಕ್ಯ

ಬೆಂಗಳೂರು ಡಿ 29 : ಕೇಂದ್ರ ಗೃಹ ಸಚಿವ ಬಿಜೆಪಿ ವರಿಷ್ಠ  ಅಮಿತ್ ಷಾ ಸರ್ಕಾರಿ ಕಾರ್ಯಕ್ರಮದ ಹಿನ್ನಲೆಯಲ್ಲಿ 2 ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ  16 ತಿಂಗಳ ನಂತರ ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸದೃಢಗೊಳಿಸುವ  ನಿಟ್ಟಿನಲ್ಲಿ ಬಿಜೆಪಿ ವರಿ‍ಷ್ಠ ಅಮಿತ್ ಷಾ ಸಚಿವರ  ಕಾರ್ಯದಕ್ಷತೆಯ ಪರಿಶೀಲನೆಗೆ ತಾವೇ  ಮುಂದಾಗಿರುವುದು ಬಿಜೆಪಿಯಲ್ಲಿ ವಲಯದಲ್ಲಿ ತಳಮಳ ಸೃಷ್ಟಿಸಿದೆ.  ಇವರು ಆಗಮಿಸಿದ ವೇಳೆಯಲ್ಲಿ ಸರ್ಕಾರ ನಡೆಸುವ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿದೆ.  ಈಗಾಗಲೇ ಅಮಿತ್ ಶಾ ಅವರಿಗೆ ಸರ್ಕಾರದ ಬಗ್ಗೆ ಇಂಚಿಂಚು ಮಾಹಿತಿಯನ್ನು ಎರಡು ಖಾಸಗಿ ಸಂಸ್ಥೆಗಳು ವಾರಕ್ಕೊಮ್ಮೆ ನೀಡುತ್ತಿದ್ದು, ಅಮಿತ್ ಷಾ ಅವರಿಗೆ ಪ್ರತಿಯೊಬ್ಬ ಸಚಿವರ ಕಾರ್ಯವೈಖರಿ ಬಗ್ಗೆ ಸ್ಪಷ್ಟವಾಗಿ ತಿಳಿದಿದೆ. ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಪಡೆದು ಅಧಿಕಾರಕ್ಕೆ ಬರಬೇಕು ಎಂಬುದು ಕೂಡ ಅಮಿತ್ ಷಾ ಗುರಿಯಾಗಿದೆ.

ಈ ಹಿನ್ನಲೆಯಲ್ಲಿ  ಸರಕಾರ ನಡೆಸುವ ಕಾರ್ಯವೈಖರಿಯೂ ಅತ್ಯಂತ ಪ್ರಮುಖವಾಗಿದೆ. ಪ್ರಸ್ತುತ ಇರುವ ಮಾಹಿತಿಯ ಪ್ರಕಾರ ಸರ್ಕಾರವು ಇನ್ನಷ್ಟು ಬುದ್ಧಿವಂತಿಕೆಯಿಂದ  ಚುರುಕಿನಿಂದ ಕೆಲಸ ನಿರ್ವಹಿಸಬೇಕಾಗಿದೆ.  ಕೆಲವು ಸಚಿವರಂತೂ ಜನಗಳ ನೋವಿಗೆ ಸ್ಪಂದಿಸುವುದುರಲ್ಲಿ ಹಿಂದೆಯೇ ಉಳಿದಿದ್ದಾರೆ ಕೆಲವು ಸಚಿವರ ಮೇಲೆ ಹಲವು ಆರೋಪಗಳಿದ್ದು, ಆದ್ದರಿಂದ ಅಮಿತ್ ಷಾ ಅವರು ಸರ್ಕಾರದ ಕಾರ್ಯವೈಖರಿಗೆ  ಚುರುಕು ಮುಟ್ಟಿಸುವ  ಕೆಲಸವನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.  ಅಮಿತ್ ಷಾ ತಾವು ಹಿಂದೆ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ನಮ್ಮ ಮುಂದಿನ ಚುನಾವಣೆಯು ಬೊಮ್ಮಾಯಿ ಅವರ ನಾಯಕತ್ವದಲ್ಲೇ ನಡೆಯಲಿದೆ ಎಂದು ಹೇಳಿದ್ದರು. ಆದರೆ ಅವರ ಆ ಹೇಳಿಕೆಗೆ ಸಾಕಷ್ಟು ವಿರೋಧ ಉಂಟಾಗಿತ್ತು ಆದ್ದರಿಂದಲೇ ಅದನ್ನು ಪುನಃ ಸ್ಪಷ್ಟಪಡಿಸುವ ಕಾರ್ಯವನ್ನು ಅಮಿತ್ ಷಾ ರವರು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.  ಸರ್ಕಾರ ತರುವ ಯೋಜನೆ ಮತ್ತು ಕೆಲಸಗಳು ಜನಸಾಮಾನ್ಯರ ಕಣ್ಣಿಗೆ ಕಾಣದಿದ್ದರೆ ನಮ್ಮ ಪಕ್ಷಕ್ಕೆ ಯಾವುದೇ ರೀತಿಯ ಅನುಕೂಲವಿರುವುದಿಲ್ಲ ಇದನ್ನು ಜನಸಾಮಾನ್ಯರಿಗೆ ಹೇಗೆ ತಲುಪಿಸಬೇಕೆಂಬ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ವಿವಿಧ  ಮೂಲಗಳಿಂದ ತಿಳಿದುಬಂದಿದೆ.  ಈ ಸರ್ಕಾರದ ಸಚಿವರು ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ. ವಿಧಾನಸೌಧಕ್ಕು  ಬರುತಿಲ್ಲ ಜೊತೆಗೆ  ವಾರದ ಪ್ರತಿ ಗುರುವಾರ ಸಚಿವರು ವಿಧಾನ ಸೌಧದಲ್ಲಿರಬೇಕು ಎಂಬ ನಿಯಮವಿದೆ ಆದರೆ ಅದನ್ನು ಯಾರು ಪಾಲಿಸುತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ

ಜೊತೆಗೆ ಸಂಪುಟ ರಚನೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ನಾಯಕತ್ವ ಬದಲಾವಣೆ ಯ ಬಗ್ಗೆಯೂ ಸಾಕಷ್ಟು ಚರ್ಚೆ  ನಡೆದಿದೆ. ಈ ಎಲ್ಲಾ ಗೊಂದಲಗಳಿಗೂ ಅಮಿತ್ ಷಾ ಅವರ ರಾಜ್ಯ  ಭೇಟಿ ಸಂಧರ್ಭದಲ್ಲಿ ಪರಿಹಾರ ಸಿಗಬಹುದೆಂದು ಅಂದಾಜಿಸಲಾಗಿದೆ.

ಅಮಿತ್ ಷಾ ರಾಜ್ಯದಲ್ಲಿ ಕೈಗೊಳ್ಳಬಹುದಾದ ಪ್ರಮುಖ ನಿರ್ಧಾರಗಳು

Exit mobile version