Karwar: ಕೆಲ ದಿನಗಳ ಹಿಂದಷ್ಟೇ ಸಂವಿಧಾನ (Constitution) ಬದಲಾವಣೆ ಮಾಡಬೇಕು ಎಂದು ಹೇಳಿಕೆ ನೀಡಿ ಮುಜುಗರಕ್ಕೊಳಗಾಗಿದ್ದ ಸಂಸದ ಅನಂತಕುಮಾರ್ (Ananth kumar Hegde) ಹೆಗಡೆ ಅವರು, ಇದೀಗ ಮಾಧ್ಯಮಗಳನ್ನು (media) ನಾಯಿಗೆ ಹೋಲಿಸಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.ಉತ್ತರ ಕನ್ನಡ (Uttara Kannada) ಜಿಲ್ಲೆ ಅಂಕೊಲಾ ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಆನೆ ಹೊಗಿದ್ದೆ ದಾರಿ ಎಂಬಂತೆ ನಾವು ಇರಬೇಕು. ಮಾಧ್ಯಮಗಳು ಏನೂ ಬೇಕಾದರೂ ಬರೆದುಕೊಳ್ಳಲಿ. ಬೇಕಾದರೆ ಬೇವರ್ಸಿಗಳು ವದರಾಡಲಿ ಎಂದು ಹೇಳಿದ್ದಾರೆ.
ನಮ್ಮ ಮಾತಿನಿಂದ ವಿವಾದ ಸೃಷ್ಟಿಯಾದರೂ ದೃಢವಾಗಿ ನಿಲ್ಲುವುದು ನಿಜವಾದ ನಾಯಕತ್ವ, ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ (social networks) ನಡೆಯುತ್ತಿರುವ ಚರ್ಚೆಗೆ ಕಾರ್ಯಕರ್ತರು (Activists) ತಲೆಕೆಡಿಸಿಕೊಳ್ಳಬಾರದು.ಎಂದು ಮಾಧ್ಯಮಗಳ ವಿರುದ್ಧವೇ ಆಕ್ರೋಶ ಹೊರ ಹಾಕಿದ್ದಾರೆ .ನೀವು ಆಳುವ ಪಕ್ಷದ ಕಾರ್ಯಕರ್ತರು(Workers of the ruling party) , ನೀವು ಲೀಡರ್ಸ, ನೀವು ಕೇಳಿದಿರಿ ಎಂದು ಜನ ಮತ ನೀಡಿದ್ದಾರೆ. ನನ್ನ ಮುಖ ನೋಡಿ ಮತ ನೀಡಿಲ್ಲ ಎಂದು ಅನಂತ ಕುಮಾರ್ ಹೆಗಡೆ ಆತ್ಮ ವಿಮರ್ಶೆ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ (Social Media ) ಬೇಕಾದ್ದು ಚರ್ಚೆ ಆಗಲಿ. ಆದರೆ, ನೀವೆಲ್ಲಾ ಇದಕ್ಕೆ ವಿಚಲಿತರಾಗಬಾರದು. ನೀವು ಯಾವುದೋ ಸಾಮಾನ್ಯ ಪಕ್ಷದ ಕಾಯರ್ತರಲ್ಲ. ದೇಶ ಆಡಳಿತ ಮಾಡುತ್ತಿರುವ ಪಕ್ಷದ ಕಾರ್ಯಕರ್ತರು (Activists) . ಆನೆ ನಡೆದಿದ್ದೆ ದಾರಿ ಎಂಬಂತೆ ನಾವು ನಡಿಯಬೇಕು ಕಣ್ರಿ. ಆನೆ ನಡೆಯುತ್ತಿದ್ದರೆ ನಾಯಿಗಳು ಬೋಗಳುತ್ತಾ ಇರುತ್ತವೆ. ಆನೆ ನಡೆಯುತ್ತಿದ್ದರೆ ಯಾವಾಗಲಾದರೂ ನಾಯಿ ಕಡೆ ಗಮನ ಕೊಡುತ್ತಾ? ನಾಯಿಗಳಿಗೂ ಗೊತ್ತು ನಾವು ಎಷ್ಟೆ ಬೊಗಳಿದ್ರು ಆನೆಗೆ ಏನು ಮಾಡುವುದಕ್ಕೂ ಆಗಲ್ಲ. ನಾಯಿಗಳು ಬೋಗಳದೆ ಇದ್ರೆ ಆನೆ ಗಾಂಭೀರ್ಯಕ್ಕೆ ಬೆಲೆ ಇರಲ್ಲ ಎಂದು ಮಾಧ್ಯಮದವರನ್ನು ನಾಯಿಗೆ ಹೋಲಿಸಿ ಆಕ್ರೋಶಭರಿತರಾಗಿ ಹೇಳಿಕೆ ನೀಡಿದ್ದಾರೆ.