ಭಾರತ್‌ ಬ್ರ್ಯಾಂಡ್‌ಗೆ ಬಳಕೆ ಆಗುತ್ತಿದೆಯೇ ಅಂಗನವಾಡಿ ಅಕ್ಕಿ !

Uttara kannada: ಕೇಂದ್ರ ಸರ್ಕಾರ (Central Govt) ಕಡಿಮೆ ಬೆಲೆಗೆ ಭಾರತ್ ಅಕ್ಕಿಯನ್ನ (Bharath Rice) ಪೂರೈಸಿತು. ಆದರೆ ಇದರಿಂದಾಗಿ ಈಗ ಹೊಡೆತ ಬಿದ್ದಿರುವುದು ಅಂಗನನವಾಡಿಗಳಿಗೆ! (Angananadis) ಹೌದು ಕರ್ನಾಟಕದ ಹಲವು ಅಂಗನವಾಡಿಗಳಿಗೆ ಕೇಂದ್ರ ಸರ್ಕಾರ ಅಕ್ಕಿಯ ಬದಲಾಗಿ ಗೋಧಿಯನ್ನು(wheat) ವಿತರಿಸುತ್ತಿದೆ. ಆದರೆ ಅಂಗನವಾಡಿ ಮಕ್ಕಳಿಗೆ ಗೋಧಿಯಿಂದ ಮಾಡಿದ ಉಪ್ಪಿಟ್ಟು ರುಚಿಸುತ್ತಿಲ್ಲ. ಹಾಗಾಗಿ ದಾಸ್ತಾನು ಖಾಲಿ ಆಗುತ್ತಿಲ್ಲ ಪುಟ್ಟ ಮಕ್ಕಳು ಹಸಿದುಕೊಂಡೆ ಮನೆ ಸೇರುತ್ತಿದ್ದಾರೆ.ಈ ಹಿಂದೆ ಬಂದಿದ್ದ ಎಲ್ಲ ಅಕ್ಕಿ (Rice) ದಾಸ್ತಾನು ಸಹ ಮುಗಿದಿದೆ. ಹಾಗಾಗಿ ಅಂಗನವಾಡಿ ಮಕ್ಕಳಿಗೆ ಊಟವೇ ಇಲ್ಲದಂತಾಗಿದೆ. ಏನು ಮಾಡುವುದು ಎಂದು ದಿಕ್ಕು ತೋಚದಾಗಿದ್ದಾರೆ ಅಂಗನವಾಡಿ ಕಾರ್ಯಕರ್ತೆಯರು.

ಅನ್ನಭಾಗ್ಯ ಯೋಜನೆಗೆ ಪ್ರತಿಯಾಗಿ ಭಾರತ್‌ ಬ್ಯ್ರಾಂಡ್‌ ಅಕ್ಕಿ (Bharat Byrond Rice) ಬಿಡುಗಡೆ ಮಾಡಿದ್ದ ಕೇಂದ್ರ ಸರಕಾರ ರಾಜ್ಯದ ಅಂಗನವಾಡಿಗಳಿಗೆ ಕೊಡಬೇಕಿದ್ದ ಅಕ್ಕಿಯ ಬದಲಾಗಿ ಗೋಧಿ ಸರಬರಾಜು (Wheat supply) ಮಾಡಿದೆ. ಇದರಿಂದ ಅಂಗನವಾಡಿಗಳಲ್ಲಿ ಮಕ್ಕಳಿಗೆ (Childrens) ಊಟವಿಲ್ಲದಂತಾಗಿದೆ.ಮಕ್ಕಳಿಗೆ ಊಟದ ಬದಲು ಗೋಧಿರವೆಯ ಉಪ್ಪಿಟ್ಟು (Wheat bran salt) ಕೊಡಲು ಅಂಗನವಾಡಿಗಳಿಗೆ ತಿಳಿಸಲಾಗಿದೆ. ದಪ್ಪ ರವೆಯ ಉಪ್ಪಿಟ್ಟನ್ನು ಮಕ್ಕಳಿಗೆ ತಿನ್ನಲು ಆಗುತ್ತಿಲ್ಲ. ಮಲೆನಾಡು, ಕರಾವಳಿ (coast) ಭಾಗದಲ್ಲಂತೂ ಉಪ್ಪಿಟ್ಟನ್ನು ಮಕ್ಕಳು ಇಷ್ಟಪಡುತ್ತಿಲ್ಲ. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ,(Pregnant under matripurna scheme) ಬಾಣಂತಿಯರಿಗೆ ಕೊಡುವುದಕ್ಕೂ ಅಕ್ಕಿ ಇಲ್ಲ. ಸಾಮಗ್ರಿ ಇಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ಚಡಪಡಿಸುವ ಸ್ಥಿತಿ ನಿರ್ಮಾಣವಾಗಿದೆ.

ನಾಲ್ಕು ತಿಂಗಳಿಗೆ ಒಮ್ಮೆ ಕೇಂದ್ರದಿಂದ ಅಕ್ಕಿ ಮಂಜೂರು ಆಗುತ್ತದೆ. ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್‌ (January, February, March, April) ಕಂತಿನ ಅಕ್ಕಿ ಬರೇಬೇಕಿತ್ತು. ಬಾರದೇ ಇರುವುದರಿಂದ ಹಿಂದಿನ ಕಂತಿನ ಉಳಿತಾಯದ ಅಕ್ಕಿಯಿಂದಲೇ ಸ್ವಲ್ಪ ದಿನ ನಿಭಾಯಿಸಿದೆವು. ಕೆಲ ದಿನಗಳಿಂದ ಎಲ್ಲಅಕ್ಕಿ ಖಾಲಿಯಾಗುತ್ತಿದೆ,ಕೇಂದ್ರ ಸರಕಾರದಿಂದ (Central Government) ಇತ್ತೀಚೆಗೆ ಭಾರತ್‌ ಬ್ರ್ಯಾಂಡ್‌ ಅಕ್ಕಿ(Bhrath Brand Rice) ಬಿಡುಗಡೆಯಾಗಿತ್ತು. ಪ್ರತಿ ಕೆ.ಜಿ.ಗೆ 29 ರೂ. ನಂತೆ ಮಾರಾಟ ಮಾಡಿದ್ದ ಅಕ್ಕಿ ಈಗ ಎಲ್ಲೂಸಿಗುತ್ತಿಲ್ಲ. ಅಂಗನವಾಡಿಗೆ ಕೊಡಬೇಕಿದ್ದ ಅಕ್ಕಿಯನ್ನೇ ಕೇಂದ್ರ ಬಿಜೆಪಿ ಸರಕಾರ ಭಾರತ್‌ ಬ್ರ್ಯಾಂಡ್‌ ಹೆಸರಿನಲ್ಲಿ ಮಾರಾಟ ಮಾಡಿದೆ.ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Exit mobile version