ಸುಮಾರು 22 ಲಕ್ಷ ಬಿಪಿಎಲ್ ಕುಟುಂಬಗಳಿಗಿಲ್ಲ ಅನ್ಯಭಾಗ್ಯದ ಹಣ..!

Bengaluru: ರಾಜ್ಯ ಕಾಂಗ್ರೆಸ್ ಸರ್ಕಾರ 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡುವ (annabhagya and dhanabhgya) ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತವಾಗಿ

ಚಾಲನೆ ನೀಡಲಿದ್ದಾರೆ. ಆದರೆ, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಸುಮಾರು 22 ಲಕ್ಷ ಕುಟುಂಬಗಳು ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲದ ಕಾರಣ ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ

ಹಣವನ್ನು ಕ್ಷಣವೇ ಪಡೆಯಲು ಸಾಧ್ಯವಿಲ್ಲ (annabhagya and dhanabhgya) ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ಸುಮಾರು 5 ಗಂಟೆಗೆ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಹೆಚ್ಚುವರಿ 5 ಕೆಜಿ ಉಚಿತ ಅಕ್ಕಿಯ ಬದಲಾಗಿ ನೇರ ಹಣ ವರ್ಗಾವಣೆ ಯೋಜನೆಗೆ

(ಡಿಬಿಟಿ) ಚಾಲನೆ ನೀಡುವ ನಿರೀಕ್ಷೆಯಿದೆ. ಅಂತ್ಯೋದಯ ಅನ್ನ ಯೋಜನೆಯಡಿ ಕರ್ನಾಟಕದಲ್ಲಿ ನೋಂದಾಯಿಸಲಾದ ಒಟ್ಟು 1.28 ಕೋಟಿ ಪಡಿತರ ಚೀಟಿಗಳಲ್ಲಿ 99 ಪ್ರತಿಶತದಷ್ಟು ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್

ಮಾಡಲಾಗಿದೆ, ಅದರಲ್ಲಿ 1.06 ಕೋಟಿ ಅಂದರೆ ಶೇಕಡಾ 82 ರಷ್ಟು ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಮಾಡಲಾಗಿದೆ. ಈ ಕಾರ್ಡ್ ಹೊಂದಿರುವವರಿಗೆ ನಗದು ಪ್ರಯೋಜನವನ್ನು ವರ್ಗಾಯಿಸಲಾಗುವುದು,

ಆದರೆ ಉಳಿದವರಿಗೆ ಹೊಸ ಖಾತೆಗಳನ್ನು ತೆರೆಯಲು ಸರ್ಕಾರ ಸಮಯ ನೀಡುತ್ತದೆ ಎಂದು ತಿಳಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಕ್ಕಿ ಕೊರತೆಯನ್ನು ಎದುರಿಸಿದ ನಂತರ ಅಕ್ಕಿ ಬದಲಿಗೆ

ಫಲಾನುಭವಿಗಳಿಗೆ ನಗದು ನೀಡಲು ಕಳೆದ ವಾರ ನಿರ್ಧರಿಸಿದೆ. ಪ್ರತಿ ಕಿಲೋಗೆ ₹34ರಂತೆ ಫಲಾನುಭವಿಗಳ ಖಾತೆಗೆ ನಗದು ಜಮಾ ಮಾಡಲಾಗುತ್ತದೆ. 15 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ

ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದ್ದಾರೆ. ಈ ಯೋಜನೆಯು ಒಟ್ಟು 4.41 ಕೋಟಿ ಫಲಾನುಭವಿಗಳನ್ನು ತಲುಪುವ ನಿರೀಕ್ಷೆಯಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕಾಂಗ್ರೆಸ್ ಸಾಕಷ್ಟು ಹರಸಾಹಸಪಟ್ಟಿದೆ. ಸದ್ಯ ರಾಜ್ಯದಲ್ಲಿ 5 ಕೆಜಿ ಅಕ್ಕಿಯನ್ನು

ಕೇಂದ್ರ ಸರ್ಕಾರ ನೀಡುತ್ತಿದ್ದು, ಉಳಿದ 5 ಕೆಜಿ ಅಕ್ಕಿಯ ಬದಲಾಗಿ, ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣವನ್ನೇ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

Exit mobile version