ರಾಜ್ಯದ ಹತ್ತು ಮಹಾನಗರ ಪಾಲಿಕೆಗಳ‌ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟ

ಬೆಂಗಳೂರು, ಫೆ. 12: ಭಾರಿ ನಿರೀಕ್ಷೆ ಮೂಡಿಸಿದ್ದ ಮಹಾನಗರ ಪಾಲಿಕೆಗಳ ಮೀಸಲಾತಿ ಪ್ರಕಟಗೊಂಡಿದ್ದು, ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ಮೇಯರ್ ಉಪಮೇಯರ್ ಮೀಸಲಾತಿ ಪ್ರಕಟಿಸಿ ರಾಜ್ಯ ಸರ್ಕಾರ ‌ಆದೇಶ ಹೊರಡಿಸಿದೆ.

ಅದರಂತೆ, ಬಳ್ಳಾರಿ ಮೇಯರ್ ಸ್ಥಾನಕ್ಕೆ(ಸಾಮಾನ್ಯ) ಹಾಗೂ ಉಪಮೇಯರ್ ಸ್ಥಾನಕ್ಕೆ (ಬಿಸಿಎ ಮಹಿಳೆ)ಗೆ ಮೀಸಲಾತಿ ನೀಡಲಾಗಿದೆ. ಇನ್ನೂ ಬೆಳಗಾವಿ ಮೇಯರ್ ಸ್ಥಾನಕ್ಕೆ (ಸಾಮಾನ್ಯ) ಹಾಗೂ ಉಪಮೇಯರ್ ಸ್ಥಾನಕ್ಕೆ (ಸಾಮಾನ್ಯ ಮಹಿಳೆ), ದಾವಣಗೆರೆ ಮೇಯರ್(ಎಸ್ಸಿ ಮಹಿಳೆ) ಉಪಮೇಯರ್ (ಸಾಮಾನ್ಯ ಮಹಿಳೆ), ಹುಬ್ಬಳ್ಳಿ-ಧಾರವಾಡ ಮೇಯರ್ (ಬಿಸಿಎ) ಉಪಮೇಯರ್- (ಎಸ್ಸಿ ಮಹಿಳೆ), ಕಲಬುರ್ಗಿ ಮೇಯರ್ (ಸಾಮಾನ್ಯ ಮಹಿಳೆ), ಉಪಮೇಯರ್-(ಬಿಸಿಎ ಮಹಿಳೆ), ಮೈಸೂರು ಮೇಯರ್ (ಸಾಮಾನ್ಯ ಮಹಿಳೆ), ಉಪಮೇಯರ್ (ಸಾಮಾನ್ಯ), ಶಿವಮೊಗ್ಗ(ಬಿಸಿಎ ಮಹಿಳೆ), ಉಪಮೇಯರ್(ಸಾಮಾನ್ಯ), ತುಮಕೂರು ಮೇಯರ್(ಎಸ್ಟಿ), ಉಪಮೇಯರ್(ಸಾಮಾನ್ಯ ಮಹಿಳೆ) ಹಾಗೂ ವಿಜಯಪುರ ಮೇಯರ್(ಎಸ್ಸಿ) ಹಾಗೂ ಉಪಮೇಯರ್(ಬಿಸಿಎ) ಮೀಸಲಾತಿ ‌ಪ್ರಕಟಿಸಿ ನಗರಾಭಿವೃದ್ಧಿ ಇಲಾಖೆಯ ಆದೇಶ ಹೊರಡಿಸಿದೆ.

Exit mobile version