Feticide: ರಾಜ್ಯದಲ್ಲಿ ಮತ್ತೊಂದು ಭ್ರೂಣ ಹತ್ಯೆ ಜಾಲ ಪತ್ತೆ; ನೆಲಮಂಗಲದ ಆಸ್ಪತ್ರೆಯಲ್ಲಿ 73 ಭ್ರೂಣ ಹತ್ಯೆ.

ಭ್ರೂಣ ಹತ್ಯೆ (Foeticide) ತಡೆಗೆ ನಿಷೇಧ ಹೇರಲಾಗಿದ್ದು ಭ್ರೂಣ ಹತ್ಯೆ ತಡೆ ಬಗ್ಗೆ (Another Feticide Network – Nelamangala) ಜಾಗೃತಿ ಮೂಡಿಸಲು

ಸರ್ಕಾರ (Karnataka Government) ನಾನಾ (Another Feticide Network – Nelamangala) ಕಸರತ್ತು ನಡೆಸುತ್ತಿದೆ.

ಕಳೆದ ವರ್ಷ ಇಡೀ ರಾಜ್ಯವೇ ಬೆಚ್ಚಿ ಬೆಳಿಸುವಂತಹ ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಇನ್ನು ಹಸಿಯಾಗಿರುವಾಗಲೇ ಇದೀಗ ಬೆಂಗಳೂರು ಗ್ರಾಮಾಂತರ

ಜಿಲ್ಲೆಯ ನೆಲಮಂಗಲ ನಗರದ ಆಸರೆ ಆಸ್ಪತ್ರೆಯಲ್ಲಿ 73 ಪ್ರಕರಣಗಳು ಬೆಳಕಿಗೆ ಬಂದಿವೆ. ಇಲ್ಲಿ ಅವ್ಯಾಹತವಾಗಿ ಭ್ರೂಣ ಹತ್ಯೆ ನಡೆಯುತ್ತಿದೆ. ಬೆಂಗಳೂರು

ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿರುವ ಆಸರೆ ಆಸ್ಪತ್ರೆಯಲ್ಲಿ (Aasare Hospital) ಭ್ರೂಣ ಹತ್ಯೆ ನಡೆಯುತ್ತಿದ್ದು ವೈದ್ಯರು ಬರೋಬ್ಬರಿ 73 ಭ್ರೂಣಹತ್ಯೆ

ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಆಸ್ಪತ್ರೆ ಡಾ. ರವಿಕುಮಾರ್ ಎಂಬವರಿಗೆ ಸೇರಿದೆ ಎಂದು ಹೇಳಲಾಗುತ್ತಿದೆ. ಭ್ರೂಣ ಲಿಂಗ ಪತ್ತೆ ಭ್ರೂಣ ಹತ್ಯೆ ನಿಷೇಧವಿದ್ದರೂ ಯಾವುದೇ ರೀತಿಯಾದಂತಹ

ಭಯವಿಲ್ಲದೆ ಹತ್ಯೆ ನಡೆಯುತ್ತಿದೆ. ಇದೀಗ ಆಸ್ಪತ್ರೆಯ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್ ಆಸರೆ ಆಸ್ಪತ್ರೆ ಮೇಲೆ ದಾಳಿ

ನಡೆಸಿ ಪರಿಶೀಲನೆ ನಡೆಸಿದ್ದಾರೆ.ನೆಲಮಂಗಲ ಟೌನ್ ಠಾಣೆಯಲ್ಲಿ ಡಾಕ್ಟರ್ ರವಿಕುಮಾರ್ ವಿರುದ್ಧ ಮೊಕದ್ದಮೆ ದಾಖಲಾಗಿದೆ ಐಪಿಸಿ ಸೆಕ್ಷನ್ 312 315 316 ಅಡಿ

ಕೆ ಎಸ್ ದಾಖಲಾಗಿದೆ. ಘಟನೆ ಕುರಿತಂತೆ ಬೆಂಗಳೂರು ಗ್ರಾಮಾಂತರ ಡಿ ಎಚ್ ಓ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದು, ಈ ಪ್ರಕರಣ ಕುರಿತಂತೆ ತನಿಖೆ ನಡೆಸಿ

ಮುಲಾಜಿ ಲ್ಲದೆ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

MTPಕಾಯ್ದೆ ಪರವಾನಗಿ ಪಡೆಯದೇ ಬೇಕಾಬಿಟ್ಟಿಯಾಗಿ ಗರ್ಭಪಾತ ಮಾಡಿಸಲಾಗುತ್ತಿದೆ. ಇನ್ನೂ ಆರಂಭಿಕ ಹಂತದಲ್ಲಿರುವ ಭ್ರೂಣವನ್ನು ಸ್ಕ್ಯಾನ್‌ ಮಾಡುವ

ನೆಪದಲ್ಲಿ ಲಿಂಗ ಪತ್ತೆ ಮಾಡಲಾಡುತ್ತದೆ ಎನ್ನಲಾಗಿದೆ. ಮಗುವಿನ ಲಿಂಗವನ್ನು ಹೆತ್ತವರಿಗೆ ತಿಳಿಸುವ ವೈದ್ಯರು ಹೆಣ್ಣು ಮಗು ಬೇಡ ಎಂದರೆ ಅದನ್ನು ಭ್ರೂಣದಲ್ಲೇ

ಹತ್ಯೆ ಮಾಡುತ್ತಾರೆ. ಆಸ್ಪತ್ರೆಯಲ್ಲಿ ಬಹುತೇಕ‌ ಗರ್ಭಪಾತಗಳ ಅಲ್ಟ್ರಾಸೌಂಡ್ ರಿಪೋರ್ಟ್ (Ultrasound report) ನಾಪತ್ತೆಯಾಗಿದೆ ಎನ್ನಲಾಗಿದೆ. ಆಪರೇಷನ್

ಥಿಯೇಟರ್ ನಲ್ಲಿ ಮಾತ್ರ ಗರ್ಭಪಾತದ ರಿಜಿಸ್ಟರ್ ನಲ್ಲಿ ಗರ್ಭಪಾತ ಮಾಡಿರೋದು ಉಲ್ಲೇಖವಾಗಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.ಇತ್ತ ಎಫ್ಐಆರ್

ದಾಖಲಾಗುತ್ತಿದ್ದಂತೆ ಆಸರೆ ಆಸ್ಪತ್ರೆಯ ಮಾಲೀಕ ರವಿಕುಮಾರ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನು ಓದಿ : ಚುನಾವಣಾ ಬಾಂಡ್ ಹಗರಣ: ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಸಿಡಿದೆದ್ದ ನಟ ಕಿಶೋರ್

Exit mobile version