Visit Channel

ರಾಷ್ಟ್ರೀಯ ಅಕ್ವೆಟಿಕ್ಸ್‌ ಚಾಂಪಿಯನ್‌ಶಿಪ್‌ : ನೂತನ ರಾಷ್ಟ್ರೀಯ ದಾಖಲೆ ಬರೆದ ಅಪೇಕ್ಷಾ ಫೆರ್ನಾಂಡಿಸ್‌

India

ಮಹಾರಾಷ್ಟ್ರವನ್ನು(Maharashtra) ಪ್ರತಿನಿಧಿಸುವ ಮಂಗಳೂರು(Mangaluru) ಮೂಲದ ಈಜು ತಾರೆ ಅಪೇಕ್ಷಾ ಫೆರ್ನಾಂಡಿಸ್‌(Apeksha Fernadis), ಜೂನಿಯರ್‌ ನ್ಯಾಷನಲ್‌ ಅಕ್ವೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ(Junior National Aquatics Championships) ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ವನಿತೆಯರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದ ಸ್ಪರ್ಧೆಯನ್ನು ಅವರು 1:12.83 ಸೆಕೆಂಡ್‌ಗಳಲ್ಲಿ ಕ್ರಮಿಸಿ ಈ ಸಾಧನೆಗೈದರು.


ಹಿಂದಿನ 1:14.42 ಸೆಕೆಂಡ್‌ಗಳ ದಾಖಲೆ ಚಾಹತ್‌ ಅರೋರಾ ಹೆಸರಲ್ಲಿತ್ತು. ಅಪೇಕ್ಷಾ 2022ರ ಫ್ರಾನ್ಸ್‌ ಈಜು ಸ್ಪರ್ಧೆಯಲ್ಲಿ ಇದೇ ಸ್ಪರ್ಧೆಯನ್ನು 1:14.54 ಸೆಕೆಂಡ್‌ಗಳಲ್ಲಿ ಪೂರೈಸಿದ್ದರು. ಬಾಲಕಿಯರ ಗುಂಪಿನ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಲಾಯಿತು. ಮಹಾರಾಷ್ಟ್ರದ ಅಪೇಕ್ಷಾ ಫರ್ನಾಂಡಿಸ್ ಅವರು, ಕೂಟದ ಎರಡನೇ ಚಿನ್ನದ ಪದಕವನ್ನು ಗೆದ್ದು ಮಿಂಚಿದರು. 35.91 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ತನ್ನ ರಾಜ್ಯದ ಸಹ ಆಟಗಾರ್ತಿ ಝಾರಾ ಜಬ್ಬಾರ್‌ಗಿಂತ 33.49 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.

India


ಮುಂದಿನ ಇಂಡಿಯನ್‌ ಯೂತ್‌ ಗೇಮ್ಸ್‌ ಆಯ್ಕೆಯಲ್ಲಿ ಈ ಸಾಧನೆ ಪರಿಗಣನೆಗೆ ಬರಲಿದೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಯೂತ್‌ ಗೇಮ್ಸ್‌ ಸಾಧನೆ ಮಾನದಂಡವಾಗಿದೆ. ಎರಡನೇ ದಿನದ ಅಂತ್ಯಕ್ಕೆ ಕರ್ನಾಟಕ ಒಟ್ಟು 31 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ 17 ಪದಕಗಳೊಂದಿಗೆ ಮತ್ತು ತೆಲಂಗಾಣ(Telangana) ಒಟ್ಟು 8 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

  • ಪವಿತ್ರ

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.