ಟೊಮೆಟೋ ಸಂಕಟ

Tomato garbage creating problem in Chintamani APMC. From past 3 days, rotton tomatos are not cleared

ಎಪಿಎಂಸಿ ಅಧಿಕಾರಿಗಳು ಸತ್ತಿದ್ದಾರಾ? ಚಿಂತಾಮಣಿ ಎಪಿಎಂಸಿಯಲ್ಲಿ ಇಷ್ಟೊಂದು ಅವ್ಯಸ್ಥೆ ಇದ್ರೂ ಅಧಿಕಾರಿಗಳು ಏನ್ಮಾಡ್ತಿದ್ದಾರೆ? ರಸ್ತೆ ತುಂಬಾ ಟೊಮೆಟೋ ಚೆಲ್ಲಿ ಕೆಸರುಗದ್ದೆಯಂತಾಗಿದೆ. ರೋಗ ಹರಡೋ ಭೀತಿ ಹೆಚ್ಚಾಗಿದೆ.

Tomoto garbage creating problem in Chintamani APMC. From past 3 days rotton tomotos are not cleared in Chintamani APMC.

 ಚಿಂತಾಮಣಿ ಎಪಿಎಂಸಿ ಅಧಿಕಾರಿಗಳು ಸತ್ತಿದ್ದಾರಾ? ಟೊಮೆಟೊ ಹಣ್ಣಿನಿಂದ ಕೆಸರುಗದ್ದೆಯಾದ ಎಪಿಎಂಸಿ ರೋಗ ಹರಡೋ ಭೀತಿಯಲ್ಲಿದ್ದಾರೆ ರೈತರು, ವ್ಯಾಪಾರಿಗಳು ಟೊಮೆಟೋ ಸಂಗ್ರಹಣೆಗೆ ಸ್ಥಳಾವಕಾಶ ಇಲ್ಲದೆ ಅವ್ಯವಸ್ಥೆ ಆಗರವಾಗಿರುವ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆ

ಕೋಲಾರ ಜಿಲ್ಲೆಯ ಚಿಂತಾಮಣಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ(ಎಪಿಎಂಸಿ) ಮಾರುಕಟ್ಟೆಯು ಟೊಮೆಟೊ ಹಣ್ಣಿನಿಂದಾಗಿ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಇದರಿಂದ ಇಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಕಳೆದ 3 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಹೆಜ್ಜೆ ಇಡುವುದು ದುಸ್ಸಾಹಾಸವಾಗಿದೆ. ಮಾರುಕಟ್ಟೆಗೆ ಪ್ರತಿನಿತ್ಯ ನೂರಾರು ಲೋಡ್ ಟೊಮೆಟೊ ಮಾರಾಟಕ್ಕೆ ಬರುತ್ತದೆ. ಹರಾಜಿನ ನಂತರ ಹಣ್ಣನ್ನು ಮತ್ತೆ ಲಾರಿಗಳಿಗೆ ತುಂಬಿಕೊಂಡು ದೂರದ ರಾಜ್ಯಗಳಿಗೆ ರವಾನೆಯಾಗುತ್ತದೆ. ಆದ್ರೆ ಕಳಪೆ ಹಾಗೂ ಬೇಡದ ಹಣ್ಣುಗಳನ್ನು ಅಂಗಡಿಗಳ ಮುಂದೆ ಚರಂಡಿ,ರಸ್ತೆಯಲ್ಲಿ ಬಿಸಾಡುತ್ತಾರೆ. ಅದರ ಮೇಲೆ ವಾಹನಗಳು ಸಂಚರಿಸುತ್ತವೆ. ಜತೆಗೆ ಮಳೆ ಸುರಿಯುತ್ತಿರುವುದರಿಂದ ಕೊಚ್ಚೆಯಾಗಿ ಮಾರ್ಪಾಟಾಗಿದೆ. ಇದರಿಂದ ಇಲ್ಲಿ ಕೆಲಸ ಮಾಡೋದು ದುಸ್ಥರವಾಗಿದೆ ಅನ್ನೋದು ಇಲ್ಲಿಯವರ ಆರೋಪ.

ಥೇಟ್ ಕೆಸರು ಗದ್ದೆಯಾಗಿರುವ ಮಾರುಕಟ್ಟೆಯಲ್ಲಿ ದುರ್ವಾಸನೆ ಬರುತ್ತಿದೆ. ವ್ಯಾಪಾರಿಗಳು, ರೈತರು, ಕೂಲಿಯಾಳುಗಳು, ಹಮಾಲಿಗಳು,ವಾಹನಗಳ ಚಾಲಕರು ಸಂಚರಿಸುವುದರಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಆತಂಕದಲ್ಲಿ ಪರದಾಡುವಂತಾಗಿದೆ.

ಪ್ರತಿನಿತ್ಯ ವ್ಯರ್ಥವಾಗುವ ಹಣ್ಣುಗಳನ್ನು ಒಂದೆಡೆ ಶೇಖರಣೆ ಮಾಡುವ ವ್ಯವಸ್ಥೆ ಇಲ್ಲ.ಹಾಗಾಗಿ ರಸ್ತೆ, ಚರಂಡಿಗಳಲ್ಲಿ ಬಿಸಾಡಬೇಕಾದ ಅನಿವಾರ್ಯತೆ ಇದೆ. ಇಲ್ಲಿನ ಎಪಿಎಂಸಿ ಅಧಿಕಾರಿಗಳು ಈ ಬಗ್ಗೆ ತಲೆಯೂ ಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.

ಸ್ವಚ್ಛತೆಯ ಗುತ್ತಿಗೆ ಪಡೆದಿರುವವರು ಕಡ್ಡಾಯವಾಗಿ ಈ ಕೆಲಸ ಮಾಡುವಂತೆ ಆಡಳಿತವರ್ಗ ಮತ್ತು ಅಧಿಕಾರಿಗಳು ಮೇಲ್ವಿಚಾರಣೆ ವಹಿಸಬೇಕು.ಇದು ಹಲವಾರು ವರ್ಷಗಳಿಂದಲೂ ಎದುರಿಸುತ್ತಿರುವ ಸಮಸ್ಯೆಯಾಗಿದೆ.ಅನೇಕ ಬಾರಿ ಪ್ರತಿಭಟನೆಗಳು ನಡೆದಿವೆ. ಇದಕ್ಕೊಂದು ಶಾಶ್ವತ ಪರಿಹಾರ ಹುಡುಕಬೇಕು ಅನ್ನೋದು ಇಲ್ಲಿನ ವ್ಯಾಪಾರಸ್ಥರ  ಒತ್ತಾಯ.

Exit mobile version