RRR ಚಿತ್ರದ ‘ನಾಟು-ನಾಟು’ ಹಾಡಿಗೆ ಆಸ್ಕರ್‌ ಪ್ರಶಸ್ತಿ ; ಗಣ್ಯರಿಂದ ಅಭಿನಂದನೆಗಳ ಮಹಾಪೂರ!

India : ಆರ್‌.ಆರ್‌.ಆರ್‌ (RRR) ತೆಲುಗು ಚಿತ್ರದ ನಾಟು-ನಾಟು ಹಾಡಿಗೆ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಯಾದ ಆಸ್ಕರ್‌ ಪ್ರಶಸ್ತಿ (Oscar Award) ಲಭಿಸಿದೆ. ಈ ಪ್ರಶಸ್ತಿಯನ್ನು ಭಾರತಕ್ಕೆ ತಂದು ಕೊಟ್ಟ ಚಿತ್ರತಂಡಕ್ಕೆ ಗಣ್ಯರು (Appreciation for Natu song) ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯಾಗಿ (Narendra Modi) , ಮಾಜಿ ಉಪ ರಾಷ್ಟ್ರಪತಿ, ಕಾಂಗ್ರೆಸ್‌ (Congress) ಅಧ್ಯಕ್ಷರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇಂದು 95 ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಮೂಲ ಹಾಡು ಎಂಬ ಪ್ರಶಸ್ತಿಯನ್ನು ನಾಟು-ನಾಟು ಹಾಡು ಗೆದ್ದುಕೊಂಡಿತು.

ಈ ಪ್ರಶಸ್ತಿಯನ್ನು ಚಿತ್ರತಂಡದ ಪರವಾಗಿ ನಾಟು-ನಾಟು ಹಾಡನ್ನು ಕಂಪೊಂಸ್‌ ಮಾಡಿದ ಎಂ.ಎಂ.ಕೀರವಾಣಿ (MM Keeravani) ಹಾಗೂ ಸಾಹಿತಿ ಚಂದ್ರಬೋಸ್ ಸ್ವೀಕರಿಸಿದರು.

ಆಸ್ಕರ್ ಪ್ರಶಸ್ತಿಯನ್ನು ಗೆದ್ದಿರುವ ‘ಆರ್‌ಆರ್‌ಆರ್’ ಚಿತ್ರ ತಂಡವನ್ನು ಭಾರತದ ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಅಭಿನಂದಿಸಿದ್ದಾರೆ.

ಈ ಪ್ರಶಸ್ತಿ ಭಾರತಕ್ಕೆ ಸಂತಸ ತಂದುಕೊಟ್ಟಿದ್ದಕ್ಕೆ ನಿಮಗೆ ಅಭಿನಂದನೆಗಳು ಎಂದು ಚಿತ್ರತಂಡವನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಇದನ್ನೂ ಓದಿ : https://vijayatimes.com/bangalore-mysore-highway/


ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಆರ್‌ಆರ್‌ಆರ್ (RRR) ಚಿತ್ರದ ನಾಟು ನಾಟು(Appreciation for Natu song) ಹಾಡಿಗೆ ಉತ್ತಮ ಸುದ್ದಿಯಲ್ಲಿ ನಾವು ಲಕ್ಷಾಂತರ ಭಾರತೀಯರೊಂದಿಗೆ ಸಂತೋಷಪಡುತ್ತೇವೆ.

ಭಾರತಕ್ಕೆ ತುಂಬು ಸಂತಸ ತಂದಿದ್ದಕ್ಕಾಗಿ ಧನ್ಯವಾದಗಳು. ಚಿತ್ರತಂಡದ ಇಡೀ ತಂಡಕ್ಕೆ ಅನೇಕ ಅಭಿನಂದನೆಗಳು ಎಂದು ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಟ್ವೀಟ್ ಮಾಡಿದ್ದಾರೆ.


ಇನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಅಭಿನಂದನೆ ತಿಳಿಸಿ,

ಈ ಗೆಲುವು ಅಸಾಧಾರಣ. ‘ನಾಟು ನಾಟು’ ಹಾಡಿನ ಜನಪ್ರಿಯತೆ ಇದೀಗ ಜಾಗತಿಕವಾಗಿದೆ ಮತ್ತು ಇದು ಮುಂದಿನ ವರುಷಗಳಲ್ಲಿ ನೆನಪಿನಲ್ಲಿ ಉಳಿಯುವಂತ ಹಾಡು ಎಂದು ಶ್ಲಾಘಿಸಿ ಟ್ವೀಟ್‌ (Tweet) ಮಾಡಿದ್ದಾರೆ.


RRR ಚಿತ್ರದ ನಿರ್ದೇಶಕ ಎಸ್‌.ಎಸ್‌ ರಾಜಮೌಳಿ ಗಾರು (SS Rajamouli) ಮತ್ತು ತಂಡಕ್ಕೆ ಅಭಿನಂದನೆಗಳು ಎಂದು ವೆಂಕಯ್ಯ ನಾಯ್ಡು (Venkaiah Naidu) ಅವರು ಟ್ವೀಟ್ ಮಾಡಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಆರ್‌ಆರ್ ತಂಡದ ಯಶಸ್ಸಿಗೆ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.


ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಸಂದರ್ಭದ ಕತೆಯನ್ನಾಧರಿಸಿದ ನಿರ್ಮಿಸಿರುವ ಆರ್‌ಆರ್‌ಆರ್‌ ಚಿತ್ರ ಹೊಸ ಕ್ರೇಜ್‌ ಸೃಷ್ಟಿಸಿತ್ತು.

ನಿರ್ದೇಶಕ ರಾಜಾಮೌಳಿ ಅವರು ಈ ಚಿತ್ರಕ್ಕೆ ವಿಭಿನ್ನ ಲುಕ್ಕನ್ನೇ ನೀಡಿದ್ದಾರೆ. ಅದಲ್ಲೂ ಈ ಚಿತ್ರ ನಾಟು ನಾಟು ಹಾಡು (Natu Natu song) ಮತ್ತು ಅದರ ನೃತ್ಯ ಸಂಯೋಜನೆ ಈಗ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ.

Exit mobile version