Visit Channel

ಪ್ರೇಮ ಪಕ್ಷಿಗಳ ಪ್ರೇಮಾಚರಣೆ!

arjun kapoor

ಫೆಬ್ರವರಿ 14ರ ದಿನವನ್ನು ಪ್ರೇಮಿಗಳಿಗಾಗಿಯೇ ಮೀಸಲಿಟ್ಟ ಒಂದು ದಿನ. ಈ ದಿನ ಬಂತೆಂದರೆ ಸಾಕು ಸಿನಿಮಾ ರಂಗದ ಎಲ್ಲಾ ತಾರೆಯರು ತನ್ನ ಪ್ರಿಯಕರನಿಗೆ ಪ್ರೀತಿಯ ಸಂದೇಶವನ್ನು ಕಳಿಸುತ್ತಾರೆ ಮತ್ತು ಆ ದಿನವನ್ನು ಅದ್ಭುತವಾಗಿ ಸೆಲೆಬ್ರೇಟ್ ಕೂಡ ಮಾಡುತ್ತಾರೆ ಹಾಗೂ ತಮ್ಮ ಪ್ರೇಮಿಯ ಜೊತೆಗಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾರೆ. ಹಾಗೆ ಈ ಬಾರಿಯೂ ಕೂಡ ಸೆಲೆಬ್ರಿಟಿಸ್ ತಮ್ಮ ಪ್ರಿಯಕರನ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ.

actors

ಬಾಲಿವುಡ್ ನಲ್ಲಿ ಪ್ರೇಮಿಗಳು ಅಂತ ಬಂದಾಗ ಹಲವಾರು ಜೋಡಿಗಳನ್ನು ನಾವು ನೋಡಬಹುದು. ಅದರಲ್ಲಿ ವಿಶೇಷ ಕಾರಣಗಳಿಗೆ ಹೆಸರಾದವರು ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್. ಈ ಜೋಡಿ ಏನು ಮಾಡಿದರೂ ಕೂಡ ಸುದ್ದಿಯಲ್ಲಿರುತ್ತಾರೆ. ಏಕೆಂದರೆ ಇವರ ಪ್ರೀತಿಯ ಕಥೆ ಬಹಳ ಇಂಟರೆಸ್ಟಿಂಗ್ ಮತ್ತು ರೋಚಕವಾಗಿದೆ.

ಬಾಲಿವುಡ್ ನಲ್ಲಿ ಮಲೈಕಾ ಅರೋರಾ ಒಬ್ಬ ಪ್ರಸಿದ್ಧ ನಟಿ. ಇವರು ಹಲವಾರು ಚಿತ್ರದಲ್ಲಿ ನಟಿಸಿದ್ದಾರೆ. ಅದರಲ್ಲೂ ಶಾರುಖ್ ಖಾನ್ ಜೊತೆ ನಟಿಸಿದ ಚಯ್ಯ ಚಯ್ಯ ಅನ್ನುವ ಹಾಡು ಇಂದಿಗೂ ಕೂಡ ಕೇಳಿದರೆ ಥ್ರಿಲ್ ಎನ್ನಿಸುತ್ತದೆ. ಅದೂ ಅಲ್ಲದೆ ಮಲೈಕಾ ತನ್ನ ಬೋಲ್ಡ್ ಲುಕ್ಕಿನಿಂದ ಎಲ್ಲರ ಗಮನವನ್ನು ಸೆಳೆಯುತ್ತಾರೆ.

arora

ಇನ್ನೂ ಅರ್ಜುನ್ ಕಪೂರ್ ಕೂಡ ಬಾಲಿವುಡ್ ನ ಖ್ಯಾತ ನಟ. ಯಾವಾಗಲೂ ಯಾವುದಾದರೂ ವಿಷ್ಯಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಇವರು ನಟಿಸಿದ ಹಾಫ್ ಗರ್ಲ್ ಫ್ರೆಂಡ್, ಕೀ ಆಂಡ್ ಕಾ, 2 ಸ್ಟೇಟಸ್ ಇವರಿಗೆ ಬಹಳ ಹೆಸರು ಹಾಗು ಕೀರ್ತಿಯನ್ನು ತಂದುಕೊಟ್ಟ ಸಿನಿಮಾ. ಈಗ ಈ ಪ್ರೇಮಿಗಳ ಮೇಲೆ ಎಲ್ಲರ ಕಣ್ಣು ಹರಿದುಬಂದಿದೆ. ಈ ಬಾರಿ ಈ ಜೋಡಿ ಹೇಗೆ ವ್ಯಾಲೆಂಟೈನ್ ಡೇ ಸೆಲೆಬ್ರೇಟ್ ಮಾಡಿದ್ದು ಅನ್ನುವ ಕುತೂಹಲ ಇದ್ದರೆ ಈ ಆರ್ಟಿಕಲ್ ಅನ್ನು ತಪ್ಪದೇ ಓದಿ.

ಈ ಬಾರಿ ಪ್ರೇಮಿಗಳ ದಿನದಂದು ಇವರಿಬ್ಬರೂ ತಮ್ಮ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

ಮೈನ್ ಎಂದು ಬರೆದುಕೊಂಡ ಮಲೈಕಾ :

malaika

ಬಾಲಿವುಡ್ ಹೆಸರಾಂತ ಪ್ರೇಮಿಗಳು ಎಂದರೆ ಅದು ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್. ಈ ಬಾರಿ ಮಲೈಕಾ ತನ್ನ ಇನ್ ಸ್ಟಾಗ್ರಾಂನಲ್ಲಿ ಫೋಟೋವನ್ನು ಹಂಚಿಕೊಂಡು ಮೈನ್ ಎಂದರೆ ನನ್ನವನು ಎಂದು ಬರೆದುಕೊಂಡಿದ್ದಾರೆ. ಹೀಗೆ ಬರೆದುಕೊಳ್ಳುವುದರ ಜೊತೆಗೆ ಹೃದಯದ ಸಿಂಬಲ್ ಅನ್ನು ಕೂಡ ಹಾಕಿದ್ದಾರೆ. ಈ ರೀತಿ ಮಲೈಕಾ ತನ್ನ ಪ್ರಿಯಕರನ ಮೇಲಿರುವ ಪ್ರೀತಿಯನ್ನು ಒಂದೇ ಪದದಲ್ಲಿ ವರ್ಣಿಸಿದ್ದಾರೆ.

ಮಲೈಕಾ ನನ್ನ ಸ್ಫೂರ್ತಿ ಎಂದ ಅರ್ಜುನ್ ಕಪೂರ್ :

arjun kapoor

ಅರ್ಜುನ್ ಕಪೂರ್ ಕೂಡ ಪ್ರೇಮಿಗಳ ದಿನದಂದು ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ಮಾಧ್ಯಮದಲ್ಲಿ ಮಲೈಕಾ ಅವರ ಬಗ್ಗೆ ಮಾತನಾಡಿದ್ದಾರೆ. ಮಲೈಕಾ ನನ್ನ ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತು ನನಗೆ ಧೈರ್ಯ ತುಂಬಿದ್ದಾರೆ ಹಾಗೂ ಮಲೈಕಾ ಯಾವಾಗಲೂ ನನ್ನವಳಾಗಿಯೇ ಇರುತ್ತಾರೆ ಹಾಗೂ ಈ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸುವ ಯೋಜನೆಯಲ್ಲಿ ಇದ್ದೇವೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

Latest News

Bilkis Bano
ದೇಶ-ವಿದೇಶ

ಬಿಲ್ಕಿಸ್ ಬಾನೊ ಪ್ರಕರಣ ; ಅಪರಾಧಿಗಳನ್ನು ಬಿಡುಗಡೆ ಮಾಡದಂತೆ 6,000 ಮಾನವ ಹಕ್ಕುಗಳ ಕಾರ್ಯಕರ್ತರು, ಇತಿಹಾಸಕಾರರಿಂದ ಸುಪ್ರೀಂಗೆ ಪತ್ರ!

ವಿದ್ವಾಂಸರು, ಚಲನಚಿತ್ರ ನಿರ್ಮಾಪಕರು, ಪತ್ರಕರ್ತರು ಮತ್ತು ಮಾಜಿ ಅಧಿಕಾರಗಳು ಈ ಪತ್ರಕ್ಕೆ ಸಹಿ ಹಾಕಿ, ಅಪರಾಧಿಗಳನ್ನು ಬಿಡುಗಡೆ ಮಾಡದಂತೆ ಕೋರಿದ್ದಾರೆ.

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯದವರು ಮತ ಚಲಾಯಿಸಬಹುದು ; ಕಣಿವೆ ರಾಜ್ಯದ ಹೊಸ ಚುನಾವಣಾ ನಿಯಮಗಳ ವಿವರ ಇಲ್ಲಿದೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಸ್ಥಳೀಯರಲ್ಲದವರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರು ತಮ್ಮ ಹೆಸರನ್ನು ಮತದಾನ ಪಟ್ಟಿಯಲ್ಲಿ ಸೇರಿಸಬಹುದು.

Dolo 650
ದೇಶ-ವಿದೇಶ

ಡೋಲೋ 650 ಮಾತ್ರೆ ಬರೆಯಲು ವೈದ್ಯರಿಗೆ 1000 ಕೋಟಿ ರೂ. ಲಂಚ! : ಸುಪ್ರೀಂಗೆ ದೂರು

ಡೋಲೋ 650 ಮಾತ್ರೆ ಉತ್ಪಾದಕ ಕಂಪನಿಯೂ ಅಂದಾಜು 1000 ಕೋಟಿ ರೂಪಾಯಿಗಳನ್ನು ವೈದ್ಯರಿಗೆ ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಆರೋಪಿಸಿದೆ.

Kannada
ಮನರಂಜನೆ

2000-2010ರ ಸಾಲಿನ ಕನ್ನಡ ಚಿತ್ರರಂಗದ ಟಾಪ್ 12 ಚಿತ್ರಗಳು ಯಾವುವು ಗೊತ್ತಾ? ಇಲ್ಲಿದೆ ಓದಿ

ಆ ಕಾಲಕ್ಕೆ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ಈ ಸಿನಿಮಾ ಹಲವು ಕೇಂದ್ರಗಳಲ್ಲಿ ಯಶಸ್ವಿಯಾಗಿ 25 ವಾರಕ್ಕೂ ಅಧಿಕ ಸಮಯ ಪ್ರದರ್ಶನ ಕಂಡಿತ್ತು.