ಆರೋಗ್ಯದಲ್ಲಿ ಕರಬೂಜದ ಮಹತ್ವ

ತೂಕ ನಿಯಂತ್ರಿಸುವವರಿಗೆ ಕರಬೂಜ ಉತ್ತಮ ಹಣ್ಣು, ವಿಟಮಿನ್-ಎ ಮತ್ತು ಸಿ ಕಣ್ಣುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ, ದೃಷ್ಟಿಯನ್ನು ಉತ್ತಮವಾಗಿಡಲು ನೆರವಾಗುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ. ಹೃದಯದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಅಡಿನೋಸಿನ್ ಎಂಬ ಪೋಷಕಾಂಶವಿದ್ದು ರಕ್ತವನ್ನು ಹೆಪ್ಪುಗಟ್ಟಿಸುವುದನ್ನು ತಡೆದು ರಕ್ತವನ್ನು ಸರಾಗವಾಗಿ ಸಂಚರಿಸಿ ಹೃದಯದ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನ ನಿತ್ಯ ಸೇವನೆಯಿಂದ ಬಿಳಿರಕ್ತ ಕಣಗಳನ್ನು ಉದ್ಪಾದಿಸಿ ರೋಗಾಣುಗಳಿಂದ ದೆಹವನ್ನು ರಕ್ಷಿಸುತ್ತದೆ.

ಕರಬೂಜ ಸೇವನೆಯಿಂದ ಕೊಲೆಸ್ಟರಾಲನ್ನೂ ಕೂಡ ನಿಯಂತ್ರಿಸಬಹುದು. ಹೆಚ್ಚಿನ ಪ್ರಮಾಣದ ನೀರಿನಂಶ ಈ ಹಣ್ಣಲ್ಲಿರೊದರಿಂದ ಹೊಟ್ಟೆಯ ಉರಿಯನ್ನು ಕಡಿಮೆ ಮಾಡಿಸುತ್ತದೆ. ಕರಬೂಜ ತಿಂದರೆ  ಜೀರ್ಣಕ್ರಿಯೆಯನ್ನು ಸರಾಗವಾಗಿಸಿ, ಮಲಬದ್ದತೆಯನ್ನು ನಿವಾರಣೆ ಮಾಡುತ್ತದೆ.

Exit mobile version