ಆರೋಗ್ಯದಲ್ಲಿ ಕಾಶ್ಮೀರಿ ಕೇಸರಿಯ ಮಹತ್ವ

ಕೇಸರಿಯಲ್ಲಿ ಖನಿಜ  ಪೊಟಾಷಿಯಂ ಕಾಪರ್ ಕ್ಯಾಲ್ಸಿಯಂ ಮ್ಯಾಂಗನೀಸ್ ಕಬ್ಬಿಣ ಮೆಗ್ನೇಷಿಯಂ ಸತು ಸಲೇನಿಯಂ ಮುಂತಾದ ಅಂಶಗಳಿದ್ದು  ಆರೋಗ್ಯದ ರಕ್ಷಣೆಗೆ ಸಹಾಯಕವಾಗಿವೆ.  ಕೇಸರಿಯು ಕ್ಯಾನ್ಸರ್‌ನಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ.  ಖಿನ್ನತೆ ನಿವಾರಕವಾಗಿದೆ.  ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ರಾತ್ರಿ ಹಾಲಿಗೆ ಒಂದೆರಡು ಎಸಳು ಕೇಸರಿಯ ದಳಗಳನ್ನು ಹಾಕಿ ಕುದಿಸಿ ಕುಡಿದರೆ ರಾತ್ರಿಯೆಲ್ಲಾ ಹಾಯಾಗಿ ನಿದ್ರಿಸಬಹುದು. ಸ್ನಾಯುಗಳ ಸೆಳೆತಕ್ಕೂ ಇದು ಉತ್ತಮ ಪರಿಣಾಮಕಾರಿಯಾಗಿದೆ. ಒಸಡುಗಳ ನೋವುಗಳನ್ನು ಇದು ನಿಯಂತ್ರಿಸುತ್ತದೆ.

ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯದ ಬಡಿತವನ್ನು ಕೇಸರಿಯು ನಿಯಂತ್ರಿಸುತ್ತದೆ. ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ. ಲೈಕೋಪೆನ್, ಎ ಮತ್ತು ಬಿ ಕ್ಯಾರೋಟಿನ್ ಜೈವಿಕ ರಾಸಾಯನಿಕ ಸಂಯುಕ್ತಗಳನ್ನು ಈ ಕೇಸೆರಿ ಹೊಂದಿದೆ. ಗರ್ಭವತಿ ಹೆಂಗಸರಿಗೆ ಕೇಸರಿಯನ್ನು ಹೆಚ್ಚಾಗಿ  ಕೊಡುತ್ತಾರೆ. ತಾಯಿ ಮಗುವಿನ ಆರೋಗ್ಯಕ್ಕೆ ಕೇಸರಿ ಅತ್ಯುತ್ತಮವಾಗಿದೆ. ತಾಯಿ ಮಗುವಿನ ಆರೋಗ್ಯವನ್ನು ಇಮ್ಮಡಿಗೊಳಿಸಲು ಇದು ಸಹಾಯಕವಾಗಿದೆ. ಇನ್ನು ಹೆಂಗಸರ ಮುಟ್ಟಿನ ಸಮಸ್ಯೆಗೆ ಇದು ಉತ್ತಮ.ಮುಟ್ಟಿನ ನೋವು ನಿವಾರಣೆಗೆ ಕೇಸರಿಯನ್ನು ಹಾಲಲ್ಲಿ ಹಾಕಿ ಕುಡಿಯಬೇಕು. ಇದು ಪೌಷ್ಟಿಕಾಂಶಗಳ ಆಗರವಾಗಿರುವುದರಿಂದಾಗಿ ಗರ್ಬಿಣಿ ಹೆಂಗಸರ ಬೆಳಗಿನ ಸಂಕಟಗಳನ್ನು ಸುಧಾರಿಸುವುದು. ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ ಹಸಿವು ನೀಡುವುದು. ಆದರೆ ಇದನ್ನು ಮತವಾಗಿ ಉಪಯೋಗಿಸಬೇಕು ಅತಿಯಾಗಿ ಸೇವಿಸಬಾರದು.

Exit mobile version