ಆರೋಗ್ಯದಲ್ಲಿ ಮೆಂತೆ ಸೊಪ್ಪಿನ ಮಹತ್ವ

ಮೆಂತೆ ಸೊಪ್ಪು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದರಲ್ಲಿ ಅನೇಕ ಔಷಧೀಯ ಗುಣಗಳಿರುವುದರ ಜೊತೆಗೆ ಅಧಿಕ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗಿದು ಬಹಳ ಪರಿಣಾಮಕಾರಿ ಔಷಧಿಯಾಗಿದೆ ಎಂದರೆ ತಪ್ಪಾಗಲಾರದು.

ಮಲಬದ್ಧತೆ, ಹೊಟ್ಟೆಯ ತೊಂದರೆ, ಮೂತ್ರಪಿಂಡದ ಕಾಯಿಲೆ ಮುಂತಾದ ಸಮಸ್ಯೆಗಳಿಗೆ ಮೆಂಥೆ ಸೊಪ್ಪು ಒಳ್ಳೆಯದು. ಇದರ ಸೊಪ್ಪನ್ನು ಪಲ್ಯವಾಗಿ ಸೇವಿಸಬಹುದು. ಗುಣದಲ್ಲಿ ಇದು ಕಹಿಯಾದರೂ ಆರೋಗ್ಯಕ್ಕೆ ಅದ್ಭುತವಾದ ಪ್ರಯೋಜನಗಳಿವೆ. ಮೆಂಥೆ ಎಲೆಗಳನ್ನು ಒಣಗಿಸಿ ಕೂಡಾ ಉಪಯೋಗಿಸಬಹುದು. ಇದರ ಸೊಪ್ಪನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ನೀರಿನಲ್ಲಿ ಕಲಸಿ ಕುಡಿಯಬಹುದು. ಸಕ್ಕರೆ ಕಾಯಿಲೆ, ಕರುಳಿನ  ಸಮಸ್ಯೆ ಹಾಗೂ ದೇಹದ ಅಲರ್ಜಿಗಳಿಗೆ ಉತ್ತಮ ಪರಿಹಾರವನ್ನು ಕಾಣಬಹುದಾಗಿದೆ.

ಬೆಳಿಗ್ಗೆ ಖಾಲಿ ಹೊಟ್ಟಯಲ್ಲಿ ಮೆಂಥೆ ಪುಡಿಯನ್ನು ನೀರಿಗೆ ಹಾಕಿ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚಾಗುವುದು ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲನ್ನು ನಾಶಮಾಡಲು ಸಹಕಾರಿಯಾಗುವುದು. ಕರುಳಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಿ ಮಲಬದ್ಧತೆಯನ್ನು ನಿವಾರಿಸುವುದು. ಈ ಪುಡಿಯನ್ನು ಸಾರಿನ ರೂಪದಲ್ಲೂ ಸೇವಿಸಬಹುದು. ಕೂದಲ ಬೆಳವಣಿಗೆಗೂ ಇದು ಉತ್ತಮ. ದಿನದಲ್ಲಿ ಒಂದು ಬಾರಿ ತಪ್ಪದೆ ಇದರ ಸೇವನೆ ಮಾಡಿದರೆ ದೇಹಕ್ಕೆ ಉತ್ತಮ.

Exit mobile version