ಸಂವಿಧಾನದ ಆರ್ಟಿಕಲ್ 370 ರದ್ದತಿಗೆ 4 ವರ್ಷ ಕಣಿವೆ ರಾಜ್ಯದಲ್ಲಿ ಕಮಾಲ್ ಮಾಡಿದ ಅಜಿತ್ ದೋವಲ್

ಸಂವಿಧಾನದ ಆರ್ಟಿಕಲ್ (Article) 370 ರದ್ದಾಗಿ 4 ವರ್ಷಗಳು ಕಳೆದಿದೆ. ಇದು ಜಮ್ಮು ಮತ್ತು ಕಾಶ್ಮೀರ (Article 370 of Constitution) ರಾಜ್ಯಕ್ಕೆ ವಿಶೇಷಾಧಿಕಾರ ನೀಡಿದ್ದು,

ಜಮ್ಮು ಮತ್ತು ಕಾಶ್ಮೀರವನ್ನು 3 ಭಾಗಗಳನ್ನಾಗಿ ವಿಭಜನೆ ಕೂಡಾ ಮಾಡಲಾಗಿದೆ. ಕಣಿವೆ ರಾಜ್ಯದಲ್ಲಿ 2019 ರಿಂದ ಇವತ್ತಿನವರೆಗೂ ಹಲವು ಬೆಳವಣಿಗೆಗಳು ನಡೆದೋಗಿದೆ. ಕೋವಿಡ್ ಮಹಾ

ಮಾರಿ ಸಹ ಬಂದು ಹೋಗಿದ್ದು, ಈ ನಾಲ್ಕು ವರ್ಷಗಳಲ್ಲಿ ಕಾಶ್ಮೀರದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಉಗ್ರವಾದ, ಬಂದ್, ಕರ್ಫ್ಯೂ, ಕಲ್ಲು ತೂರಾಟಗಳೆಲ್ಲಾ ನಿಂತು ಹೋಗಿದೀಯಾ ಹಾಗೂ

ಕಾಶ್ಮೀರ ಪಂಡಿತರಿಗೆ ಪುನರ್ವಸತಿ ಸಿಕ್ಕಿದೀಯಾ ಹಾಗಾದ್ರೆ ಸುಪ್ರೀಂ ಕೋರ್ಟ್‌ನಲ್ಲಿ ಆರ್ಟಿಕಲ್ 370 ರದ್ದತಿ (Article 370 of Constitution) ಸದ್ದು ಮಾಡ್ತಿರೋದು ಯಾಕೆ.

ಭಾರತ ದೇಶದ ಇತಿಹಾಸದಲ್ಲಿ ಈ ದಿನವನ್ನು ಅಂದರೆ 2019ರ ಆಗಸ್ಟ್‌ (August) 5 ಅನ್ನು ಮರೆಯಲಾಗದ ದಿನವೆನ್ನಬಹುದು. ಸಂವಿಧಾನದ ಆರ್ಟಿಕಲ್ 370 ರದ್ದುಪಡಿಸಿದ ಕೇಂದ್ರ ಸರ್ಕಾರ

ಕಾಶ್ಮೀರಕ್ಕೆ ಇದ್ದ ವಿಶೇಷಾಧಿಕಾರವನ್ನ ತೆಗೆದು ಹಾಕಿತ್ತು. ಅಲ್ಲದೆ ಸಂವಿಧಾನದ ಆರ್ಟಿಕಲ್ 35ಎ ಅಡಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ (Ladakh) ಪ್ರಾಂತ್ಯಗಳನ್ನ ವಿಭಜನೆ ಮಾಡಿತ್ತು.

ಕಣಿವೆ ರಾಜ್ಯಕ್ಕೆ ನೀಡಿದ ವಿಶೇಷಾಧಿಕಾರ ತೆಗೆದು ಹಾಕುವ ವೇಳೆ ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮಹತ್ತರ ಜವಾಬ್ದಾರಿ ಜೊತೆಯಲ್ಲೇ, ಗಡಿಯಾಚೆಯಿಂದ ಪಾಕಿಸ್ತಾನ (Pakistan)

ನಡೆಸಬಹುದಾದ ಕುತಂತ್ರಗಳನ್ನೂ ಹತ್ತಿಕ್ಕಬೇಕಿತ್ತು. ಈ ನಿಟ್ಟಿನಲ್ಲಿ ಪ್ರತ್ಯೇಕ ದ್ವೀಪದಂತಿದ್ದ ಕಾಶ್ಮೀರವನ್ನ ಭಾರತದ ಮುಖ್ಯ ಭೂಮಿಗೆ ಜೋಡಿಸುವ ಕಾಯಕವನ್ನ ಮೋದಿ ಸರ್ಕಾರ ಇಂದಿಗೂ ಮುಂದುವರೆಸುತ್ತಿದೆ.

70 ವರ್ಷಗಳ ಬಳಿಕ ದೇಶಕ್ಕೆ ಸ್ವಾತಂತ್ರ್ಯ ಬಂದು ಈ ನೆಲದ ಕಾನೂನಿಗೆ ಸಂಪೂರ್ಣ ಪ್ರಮಾಣದಲ್ಲಿ ಕಾಶ್ಮೀರ ಸೇರ್ಪಡೆಯಾಗಿದೆ. ಕಾಶ್ಮೀರವನ್ನ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕುಟುಂಬ

ರಾಜಕಾರಣದ ಪ್ರಭಾ ವಲಯದಿಂದ ಆಚೆ ತರಲು ಮೋದಿ (Modi) ಸರ್ಕಾರ ಸಾಕಷ್ಟು ಪ್ರಯತ್ನ ಮಾಡಿದೆ. ಕಾಶ್ಮೀರದಲ್ಲಿ ಶಿಕ್ಷಣ, ಉದ್ಯೋಗ ಸೃಷ್ಟಿಗೆ ಹಲವು ಕ್ರಮಗಳನ್ನ ಕೈಗೊಳ್ಳಲಾಗಿದೆ.

ಭಾರತದೊಂದಿಗೆ ಕಾಶ್ಮೀರಿಗಳು ಮಾನಸಿಕವಾಗಿ ಸೇರ್ಪಡೆಯಾಗಲು ಬೇಕಾದ (Article 370 of Constitution) ಪೂರಕ ವಾತಾವರಣ ಕಲ್ಪಿಸಲಾಗುತ್ತಿದೆ.

ಆರ್ಟಿಕಲ್ 370 ರದ್ದತಿ ಬಳಿಕ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದೇ ಒಂದು ಕಲ್ಲು ತೂರಾಟ ಪ್ರಕರಣವೂ ನಡೆದಿಲ್ಲ. ಕಾಶ್ಮೀರದಲ್ಲಿ ಸೇನೆಯ ಮೇಲೆ ಕಲ್ಲು ತೂರಾಟ

ನಡೆಸೋ ಪ್ರಕರಣಗಳು ವಿಪರೀತವಾಗಿತ್ತು. ಪೊಲೀಸರು ಹಾಗೂ ಸೇನೆ ವಿರುದ್ಧ ಕೇವಲ 9 ರಿಂದ 10 ವರ್ಷ ವಯಸ್ಸಿನ ಬಾಲಕರೂ ಕೂಡಾ ಕೈನಲ್ಲಿ ಕಲ್ಲು ಹಿಡಿದು ನಿಲ್ಲುತ್ತಿದ್ದರು.

ಮಾಸ್ಟರ್ ಮೈಂಡ್‌ಗಳು ಅವರ ಬ್ರೈನ್ ವಾಷ್ (Brain Wash) ಮಾಡುವ ಮೂಲಕ ತೆರೆಮರೆಯಲ್ಲಿ ನಿಂತು ತಮಾಷೆ ನೋಡುತ್ತಿದ್ದರು. ಭದ್ರತಾ ಪಡೆಗಳಿಗೆ ದೊಣ್ಣೆಗಳನ್ನೂ ಹಿಡಿದು ಬರುತ್ತಿದ್ದ

ಪ್ರತಿಭಟನಾಕಾರರು ದೊಡ್ಡ ತಲೆ ನೋವಾಗಿದ್ದರು. ಆರ್ಟಿಕಲ್ 370 ರದ್ದತಿಗೆ ಮುನ್ನ ಸೇನೆಯ ಜೀಪ್‌ಗೆ ಪ್ರತಿಭಟನಾಕಾರರನೊಬ್ಬನನ್ನು ಕಟ್ಟಿ ಕಲ್ಲು ತೂರಾಟದಿಂದ ಯೋಧರು ರಕ್ಷಣೆ ಪಡೆದ

ವಿಡಿಯೋ ದೇಶಾದ್ಯಂತ ಭಾರೀ ಚರ್ಚೆಗೆ ಗುರಿಯಾಗಿದ್ದು ಎಲ್ಲರಿಗೂ ನೆನಪಿನಲ್ಲಿದೆ.ಆದರೆ ಅಂತ ಘಟನೆ ಕಳೆದ ನಾಲ್ಕು ವರ್ಷಗಳಲ್ಲಿ ನಡೆದಿಲ್ಲ.

ದೇಶದ ಹೆಮ್ಮೆಯ ರಕ್ಷಣಾ ಸಲಹೆಗಾರ ಅಜಿತ್ ದೊವಲ್ (Ajit Doval) ಕಾಶ್ಮೀರಿಗಳ ಮನದಲ್ಲಿ ಬಿತ್ತಲಾಗಿದ್ದ ಪ್ರತ್ಯೇಕತೆಯ ವಿಷ ಬೀಜವನ್ನು ಬುಡ ಸಮೇತ ಕಿತ್ತೊಗೆಯಲು ಭಾರತ ಸರ್ಕಾರಕ್ಕೆ

ನೆರವಾಗಿದ್ದರು. ಅಜಿತ್ ದೋವಲ್ ಅವರು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ ಆದ ಎರಡೇ ದಿನಕ್ಕೆ ಕಣಿವೆ ರಾಜ್ಯದಲ್ಲಿದ್ದರು. ಜನರಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಅವರು ಕೈಗೊಂಡ

ಕ್ರಮಗಳು ನಿಜಕ್ಕೂ ಸ್ಮರಣಾರ್ಹ.

ಕಣಿವೆ ರಾಜ್ಯದ ರಸ್ತೆಗಳಲ್ಲಿ ಯಾವುದೇ ಭದ್ರತಾ ಪಡೆಗಳ ಬೆಂಗಾವಳಿಲ್ಲದೆ ಬಿರುಸಾಗಿ ಸಾಗಿದ ಅಜಿತ್ ದೋವಲ್ ಅವರು ಜನರ ನಡುವೆ ಬೆರೆತು ಅವರ ಅಹವಾಲು ಆಲಿಸಿದರು. ಲಾಲ್‌ ಚೌಕ್,

ಹಜರತ್‌ಬಲ್, ಶ್ರೀನಗರದ ಪೇಟೆ ಬೀದಿ ಸೇರಿದಂತೆ ಹಲವೆಡೆ ಸಂಚರಿಸಿದರು. ಅವರ ಜೊತೆ ಊಟ, ತಿಂಡಿ ಮಾಡುತ್ತಾ, ಸ್ನೇಹಿತನಂತೆ ಚರ್ಚಿಸಿದರು. ಮುಸಲ್ಮಾನರ ಹಬ್ಬ ಹರಿದಿನಗಳಲ್ಲಿ

ಭಾಗಿಯಾದರು. ಜನ ಸಾಮಾನ್ಯರ ರಕ್ಷಣೆಯ ಬಗ್ಗೆ ಸರ್ಕಾರವು ಕಾಳಜಿ ವಹಿಸಿದೆ ಅನ್ನುವ ಸಂದೇಶ ಸಾರಿದರು. ಭಯ ಬಿಟ್ಟಾಕಿ, ಸರ್ಕಾರದ ಜೊತೆ ಕೈ ಜೋಡಿಸಿ ಎಂದರು. ಭದ್ರತೆಯ

ವಿಚಾರದಲ್ಲಿ ಅಜಿತ್ ದೋವಲ್ ಪರಾಮರ್ಶೆ ನಡೆಸುತ್ತಿದ್ದರೆ, ಮನೋಜ್ ಸಿನ್ಹಾ ಅವರು ಆಡಳಿತಾತ್ಮಕವಾಗಿ ಕಾಶ್ಮೀರವನ್ನ ಸರಿದಾರಿಗೆ ತಂದರು.

ಭವ್ಯಶ್ರೀ ಆರ್.ಜೆ

Exit mobile version