ಬಿಜೆಪಿ ಸೇರಿದ ರಾಮಾಯಣದ ರಾಮ ಪಾತ್ರಧಾರಿ ಅರುಣ್​ ಗೋವಿಲ್​

ರಾಮಯಾಣ ಧಾರಾವಾಹಿ ಮೂಲಕ ಭಗವಾನ್​ ರಾಮನ ಅವತಾರವನ್ನು ದೇಶದ ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಅರುಣ್​ ಗೋವಿಲ್​ ನಿನ್ನೆ ಬಿಜೆಪಿ ಸೇರಿದ್ದಾರೆ. 80ರ ದಶಕದಲ್ಲಿ ಮನೆ ಮಾತಾಗಿದ್ದ ರಾಮಾಯಣ ಧಾರಾವಾಹಿ ಕಳೆದ ವರ್ಷ ಕೋವಿಡ್​ ಲಾಕ್​ಡೌನ್​ ಅವಧಿಯಲ್ಲಿ ಮರು ಪ್ರಸಾರಗೊಂಡು ದೇಶದ ಜನರ ಮನಸೊರೆಗೊಂಡಿತ್ತು. ಅಷ್ಟೇ ಅಲ್ಲದೇ ಹಿಂದಿನ ದಾಖಲೆಗಳನ್ನು ಮುರಿದು ಈ ಧಾರಾವಾಹಿ ಅತಿ ಹೆಚ್ಚು ಜನರನ್ನು ತಲುಪಿತು. ಈ ಮೂಲಕ ಮತ್ತೆ ದೇಶವಾಸಿಗಳಿಗೆ ರಾಮನ ಪಾತ್ರಧಾರಿ ಮತ್ತಷ್ಟು ಆಪ್ತವಾಗಿತ್ತು. ಗೋವಿಲ್​ ಬಿಜೆಪಿ ಸೇರ್ಪಡನೆಯಿಂದ ಮತ್ತಷ್ಟು ಜನರಿಗೆ ಪಕ್ಷ ಸೇರಲು ಉತ್ತೇಜನ ಸಿಗಲಿದೆ.

ಬಿಜೆಪಿ ನಾಯಕರಾದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ತಮ್ಮ ಪ್ರತಿ ಭಾಷಣವನ್ನು ಜೈ ಶ್ರೀರಾಮ್​ ಘೋಷಣೆ ಮೂಲಕ ಆರಂಭಿಸುತ್ತಾರೆ. ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಈ ಘೋಷಣೆ ಧಾರ್ಮಿಕತೆಗಿನ್ನ ಹೆಚ್ಚಾಗಿ ರಾಜಕೀಯವಾಗಿ ಬಳಕೆಯಾಗುತ್ತಿದೆ.

ರಾಜಕೀಯವಾಗಿ ಶಕ್ತಿಹೊಂದಿರುವ ಈ ಜೈ ಶ್ರೀರಾಮ್​ ಘೋಷಣೆ ಯಾವಾಗ ರಾಜಕೀಯ ಪ್ರವೇಶಿಸಿತು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, 1990-92ರ ವೇಳೆ ರಾಮ ಮಂದಿರ ನಿರ್ಮಾಣದ ವೇಳೆ ಆರ್​ಎಸ್​ಎಸ್​ ಮತ್ತು ವಿಎಸ್​ಪಿ ಬಳಕೆ ಮಾಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Exit mobile version