ದೆಹಲಿ ಮುಖ್ಯಮಂತ್ರಿಗೆ ಕೊರೊನಾ ಪಾಸಿಟಿವ್

ನವದೆಹಲಿ ಜ 4 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಕೊರೊನಾಗೆ ತುತ್ತಾಗಿದ್ದು, ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮಗೆ ಕೋವಿಡ್ ಸೋಂಕು ತಗಲಿರುವುದನ್ನು ಮಂಗಳವಾರ ದೃಢಪಡಿಸಿದ್ದಾರೆ. ಈ ಕುರಿತು ಅವರು ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

‘ನನ್ನ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದೆ. ನನ್ನಲ್ಲಿ ಲಘು ಲಕ್ಷಣಗಳಿವೆ. ಮನೆಯಲ್ಲಿ ಸ್ವಯಂ ಐಸೋಲೇಟ್ ಆಗಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕಕ್ಕೆ ಬಂದವರು, ದಯವಿಟ್ಟು ನಿಮ್ಮನ್ನು ನೀವು ಐಸೋಲೇಟ್ ಮಾಡಿಕೊಳ್ಳಿ ಮತ್ತು ಪರೀಕ್ಷೆಗೆ ಒಳಗಾಗಿ’ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅವರು ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಾಗಿ ಎಎಪಿ ಪರ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆಲ್ಲ ಕರೋನ ರೂಪಾಂತರಿ ವೈರಸ್ ಓಮಿಕ್ರಾನ್‌ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.

Exit mobile version