ಕೊನೆಗೂ ಜಾಮೀನಿನ ಮೇಲೆ ಬಡುಗಡೆಯಾದ ಆರ್ಯನ್‌ ಖಾನ್

ಮುಬೈ ಅ 30 : ಡ್ರಗ್ಸ್‌ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಇಂದು ಮಧ್ಯಾಹ್ನ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆರ್ಯನ್ ಖಾನ್ ಅವರಿಗೆ ಅ. 28ರಂದು ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಗಳ ಕಾರಣದಿಂದಾಗಿ ಜಾಮೀನಿನ ಹೊರತಾಗಿಯೂ ಆರ್ಯನ್ ಖಾನ್ ಶನಿವಾರದ ವರೆಗೆ ಜೈಲಿನಲ್ಲಿ ಇರಬೇಕಾಗಿ ಬಂದಿತ್ತು. 28 ದಿನಗಳ ಬಳಿಕ ಆರ್ಯನ್ ಇಂದು ಬಿಡುಗಡೆಯಾಗಿದ್ದಾರೆ.

ಮುಂಬೈ ಕರಾವಳಿ ಸಮೀಪ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಸೇವಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರ್ಯನ್ ಖಾನ್ ಗೆ ಗುರುವಾರ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಹಿನ್ನಲೆಯಲ್ಲಿ ಅಪಾರ ಸಂಖ್ಯೆಯ ಬೆಂಬಲಿಗರು ಜೈಲುಮುಂದೆ ಜಮಾಯಿಸಿದ್ದರು. ಆದರೆ ಜಾಮೀನು ದೊರೆತರೂ ಆರ್ಯನ್ ಖಾನ್ ನಿರಾಳರಾಗುವಂತಿಲ್ಲ. ಜಾಮೀನು ನೀಡುವುದರ ಜೊತೆ ಬಾಂಬೆ ಹೈಕೋರ್ಟ್ 14 ಷರತ್ತುಗಳನ್ನು ವಿಧಿಸಿದೆ.

Exit mobile version