ಡ್ರಗ್ಸ್ ಪ್ರಕರಣದಿಂದ ಆರ್ಯನ್ ಖಾನ್ ಫ್ರೀ? ತನಿಖೆ ಮುಂದುವರೆಸಿದ ಎಸ್.ಐ.ಟಿ!

aryan khan

ಮುಂಬೈ(Mumbai) ಕ್ರೂಸ್ ಡ್ರಗ್(Drug) ಪ್ರಕರಣದಲ್ಲಿ ಆರ್ಯನ್ ಖಾನ್(AryanKhan) ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂಬ ವರದಿಗಳನ್ನು ನ್ಯಾರೊಕೊಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಇದೆಲ್ಲಾ ಊಹಾಪೋಹ ಎಂದು ಕರೆದಿದೆ.

ಎನ್‌ಸಿಬಿಯ ಉಪ ಮಹಾನಿರ್ದೇಶಕ ಸಂಜಯ್ ಸಿಂಗ್, ಆರ್ಯನ್ ಖಾನ್ ಅಂತಾರಾಷ್ಟ್ರೀಯ(International) ಡ್ರಗ್ ಸಿಂಡಿಕೇಟ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂಬುದು ಖಚಿತವಾಗಿದೆ ಎಂದು ಎನ್‌ಸಿಬಿ ತನಿಖೆಯಲ್ಲಿ ವರದಿಯಾಗಿದೆ.

ಆರ್ಯನ್ ಖಾನ್ ಪ್ರಕರಣದ ಕುರಿತು ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥರಾಗಿದ್ದ ಸಂಜಯ್ ಸಿಂಗ್ ಅವರು ಆರ್ಯನ್ ಖಾನ್ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂಬ ಮಾಧ್ಯಮ ವರದಿಗಳಿಗೆ ಸಂಬಂಧಿಸಿದಂತೆ, ಇವುಗಳು ನಿಜವಲ್ಲ ಮತ್ತು ಕೇವಲ ಊಹಾಪೋಹಗಳಾಗಿವೆ! ಇಷ್ಟನ್ನು ಹೊರೆತುಪಡಿಸಿದರೆ ಬೇರೇನೂ ಇಲ್ಲ ಎಂಬುದು ಸ್ಪಷ್ಟ ಎಂದು ಹೇಳಿದರು. ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಮತ್ತು ಈ ಹಂತದಲ್ಲಿ ಏನನ್ನಾದರೂ ಹೇಳಲು ಅಸಾಧ್ಯ. ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಇಲ್ಲಿಯವರೆಗೂ ಏನಾಯಿತು ಎಂಬು ಮಾಹಿತಿ ಇಲ್ಲಿದೆ. ಕಳೆದ ವರ್ಷ ಅಕ್ಟೋಬರ್ 02 ರಂದು ಮುಂಬೈ ಕರಾವಳಿಯ ಕಾರ್ಡೆಲಿಯಾ ಕ್ರೂಸ್ ಶಿಪ್ ಮೇಲೆ ಅನುಮಾನ ಬಂದು ಏಕಾಏಕಿ ದಾಳಿ ನಡೆಸಿದಾಗ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ಬಂಧಿಸಿತ್ತು.

ಡ್ರಗ್ ದಂಧೆ ಮತ್ತು ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಆರ್ಯನ್ ಖಾನ್ ಮತ್ತು ಇತರರನ್ನು ಎನ್‌ಸಿಬಿ ತಂಡ ಬಂಧಿಸಿತ್ತು. ಅಕ್ಟೋಬರ್ 3 ರಂದು ಎನ್ಸಿಬಿ ತಂಡದಿಂದ ಆರ್ಯನ್ ಖಾನ್ ಅವರನ್ನು ಬಂಧಿಸಲಾಯಿತು. ವಿಚಾರಣೆಯ ನಂತರ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆರ್ಯನ್ ಖಾನ್ ಅವರ ಮೊದಲ ಜಾಮೀನನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದೆ. ನಂತರ ತನ್ನ ವಕೀಲರ ಮೂಲಕ, ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದು, ಅದು ಅವರಿಗೆ ಅಕ್ಟೋಬರ್ 28, 2021 ರಂದು ಜಾಮೀನು ನೀಡಿತು. ಕಾನೂನು ಪ್ರಕ್ರಿಯೆಗಳ ಕಾರಣ, ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 30 ರಂದು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ಇದುವರೆಗೆ ಡ್ರಗ್ಸ್ ಪ್ರಕರಣದಲ್ಲಿ ಇಬ್ಬರು ನೈಜೀರಿಯನ್ ಪ್ರಜೆಗಳು ಸೇರಿದಂತೆ 20 ಜನರನ್ನು ಎನ್‌ಸಿಬಿ ಬಂಧಿಸಿದೆ. ಸದ್ಯ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದಿಂದಲೇ ವಜಾಗೊಳಿಸಿದ್ದಾರೆ ಎನ್ನಲಾಗಿದೆ ಎಂಬ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಕೇವಲ 22 ದಿನಗಳ ಅವಧಿಯವರೆಗೂ ಮಾತ್ರ ಆರ್ಯನ್ ಖಾನ್ ಜೈಲುವಾಸ ಅನುಭವಿಸದರು ಬಳಿಕ ಅವರಿಗೆ ಜಾಮೀನು ಸಹ ನೀಡಿ ಕಳಿಸಲಾಯಿತು. ಸದ್ಯ ಈ ಪ್ರಕರಣ ಕುರಿತು ಎಸ್.ಐ.ಟಿ ತನಿಖೆ ಮುಂದುವರೆಸುತ್ತಿದೆ ಎಂಬುದು ತಿಳಿದುಬಂದಿದೆ. ಸದ್ಯ ಈ ವಿಚಾರ ಕುರಿತು ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿದೆ!
Exit mobile version