ಆರ್ಯನ್ ಖಾನ್ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್

ಮುಂಬೈ ಅ 27 : ಮುಂಬೈನ ಅರ್ಥರ್ ರೋಡ್ ಜೈಲಲ್ಲಿ ಬಂಧಿಯಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ.

 ಪ್ರಭಾಕರ್ ಸೈಲ್ ಎಂಬಾತ 25 ಕೋಟಿ ರೂಪಾಯಿ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಎನ್ ಸಿ ಬಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿರುವ ಬಗ್ಗೆಯೂ ಆರೋಪಿಸಿದ್ದಾನೆ.

ಮುಂಬೈ NCB ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೇಡೆ ವಿರುದ್ಧ ಈ  ಆರೋಪ ಕೇಳಿ ಬರುತ್ತಿದ್ದು, ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್​ ಸ್ಟಾರ್​ ಶಾರುಖ್​ಖಾನ್​ ಪುತ್ರ  ಆರ್ಯನ್​ ಬಿಡುಗಡೆಗೆ ನಟ ಶಾರುಖ್​ ಹರಸಾಹಸ ಪಡುತ್ತಿದ್ದು, ಸದ್ಯ ಆರ್ಯನ್​ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಈ ಕೇಸ್​ಗೆ ಸಂಬಂಧಿಸಿದಂತೆ ಹೊಸ  ಟ್ವಿಸ್ಟ್​ ಸಿಕ್ಕಿದ್ದು, ಆರ್ಯನ್​ ಬಿಡುಗಡೆಗೆ 25 ಕೋಟಿ ಲಂಚ ನೀಡುವಂತೆ NCB ಪ್ರಾದೇಶಿಕ ನಿರ್ದೇಶಕ  ಸಮೀರ್ ವಾಂಖೇಡೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪವನ್ನ  ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್​ ಮಾಡುತ್ತಿದ್ದು, 9 ಖಾಲಿ ಪೇಪರ್​ ಮೇಲೆ NCB ಅಧಿಕಾರಿಗಳೇ ಸಹಿ ಹಾಕಿಸಿಕೊಂಡಿದ್ದಾರೆ. ಗೋಸಾವಿ, ಸ್ಯಾಮ್​ಡಿಸೋಜಾ ಹಾಗೂ NCB ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅವರು ಮಾತನಾಡುತ್ತಿದ್ದನ್ನ ನಾನು ಕೇಳಿಸಿಕೊಂಡಿದ್ದೇನೆ. ಸಮೀರ್ ವಾಂಖೇಡೆಗೆ 8 ಕೋಟಿ ನೀಡಬೇಕು. ಹೀಗಾಗಿ 18 ಕೋಟಿಗೆ ಒಪ್ಪಿಕೊಳ್ಳಬಹುದು ಎಂದು ಮಾತಾಡುತ್ತಿದ್ದರು ಎಂದು  ಲಂಚದ ಬಗ್ಗೆ NCB ವಿರುದ್ಧವೇ ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ. 

Exit mobile version