ಭಾರತದಲ್ಲಿ ಏಕರೂಪ ನಾಗರಿಕ ಸಂಹಿಂತೆ ಅಗತ್ಯವಿಲ್ಲ : ಓವೈಸಿ!

asaduddin

ಭಾರತದಲ್ಲಿ ಏಕರೂಪ ನಾಗರಿಕ ಸಂಹಿಂತೆ ಜಾರಿಮಾಡುವ ಅಗತ್ಯವಿಲ್ಲ. ಈಗಾಗಲೇ ಈ ಕುರಿತು ಕಾನೂನು ಆಯೋಗವು ಕೂಡಾ ಏಕರೂಪ ಕಾನೂನುಗಳ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ ಎಂದು ಎಐಎಂಐಎಂ(AIMIM) ಪಕ್ಷದ ನಾಯಕ ಮತ್ತು ಸಂಸದ(MP) ಅಸಾದುದ್ದೀನ್ ಓವೈಸಿ(Asaduddin Owaisi) ಅಭಿಪ್ರಾಯಟ್ಟಿದ್ದಾರೆ.

ಗೋವಾ(Goa) ರಾಜ್ಯದಲ್ಲಿ ಈಗಾಗಲೇ ಏಕರೂಪ ನಾಗರಿಕ ಸಂಹಿಂತೆ ಜಾರಿಯಲ್ಲಿದೆ. ಅಲ್ಲಿಯ ಕಾನೂನಿನ ಪ್ರಕಾರ 30 ವರ್ಷ ವಯಸ್ಸಿನೊಳಗೆ ಪತ್ನಿಯೂ ಮಗುವನ್ನು ಹೆರುವುದಕ್ಕೆ ವಿಫಲಳಾದರೆ ಗಂಡನಿಗೆ ಮತ್ತೊಂದು ಮದುವೆಯಾಗಲು ಅವಕಾಶವಿದೆ. ಅನೇಕ ವರ್ಷಗಳಿಂದ ಗೋವಾದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ ಇಂತ ವಿಷಯಗಳ ಕುರಿತು ಬಿಜೆಪಿ ಮೌನವಹಿಸಿದೆ. ಇನ್ನು ಸದ್ಯ ದೇಶವನ್ನು ಕಾಡುತ್ತಿರುವ ನಿರುದ್ಯೋಗ, ಇಂಧನ ಬೆಲೆ ಏರಿಕೆ, ಆರ್ಥಿಕ ದುಸ್ಥಿತಿ, ಗಡಿ ವಿವಾದಗಳು ಇವೆಲ್ಲವನ್ನೂ ಬಿಟ್ಟು ಬಿಜೆಪಿ ನಾಯಕರು ಏಕರೂಪ ನಾಗರಿಕ ಸಂಹಿಂತೆ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇನ್ನು ಏಕರೂಪ ನಾಗರಿಕ ಸಂಹಿಂತೆ ಜಾರಿಗೆ ತರಲು ಬಿಜೆಪಿ ಸಿದ್ದತೆ ನಡೆಸುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಇದಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಇತ್ತೀಚೆಗೆ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ಮುಖ್ಯಮಂತ್ರಿಗಳು ನಮ್ಮ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿಂತೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಅನೇಕ ಮುಸ್ಲಿಂ ಸಂಘಟನೆಗಳು ಏಕರೂಪ ನಾಗರಿಕ ಸಂಹಿಂತೆಯನ್ನು ವಿರೋಧಿಸುತ್ತಿವೆ. ಇದು ಜಾರಿಯಾದರೆ ಮುಸ್ಲಿಮರ ಧಾರ್ಮಿಕ ಹಕ್ಕುಗಳಿಗೆ ಧಕ್ಕೆಯಾಗುತ್ತದೆ.

ಹೀಗಾಗಿ ಏಕರೂಪ ನಾಗರಿಕ ಸಂಹಿಂತೆಗೆ ನಮ್ಮ ವಿರೋಧವಿದೆ ಎಂದು ಈಗಾಗಲೇ ತಿಳಿಸಿವೆ. ಆದರೆ ಬಿಜೆಪಿಯ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿರುವ ಏಕರೂಪ ನಾಗರಿಕ ಸಂಹಿಂತೆಯನ್ನು ಜಾರಿಗೆ ತರಲು ಬಿಜೆಪಿ ತೆರೆಮರೆಯಲ್ಲಿ ಸಿದ್ದತೆ ನಡೆಸಿದೆ. ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಏಕರೂಪ ನಾಗರಿಕ ಸಂಹಿಂತೆ ಜಾರಿಯಾಗುವ ಸಾಧ್ಯತೆ ಇದೆ. ತ್ರಿವಳಿ ತಲಾಖ್, ಆರ್ಟಿಕಲ್ 370, ರಾಮಮಂದಿರ ನಂತರ ಇದೀಗ ಬಿಜೆಪಿಯ ಮುಂದಿನ ಗುರಿ ಏಕರೂಪ ನಾಗರಿಕ ಸಂಹಿಂತೆಯಾಗಿದೆ.

Exit mobile version